ಮಾನ್ಯಳ ಮದುವೆಗೆ ಮಾನ್ಯತೆ ನೀಡದ ತಂದೆ ಮರ್ಯಾದ ಹ*ತ್ಯನ್ನು ಖಂಡಿಸಿ ದಲಿತ ಸಂಘಟನೆಯಿಂದ ಪ್ರತಿಭಟನೆ

ರಾಜ್ಯದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಹಾಗು ಹುಬ್ಬಳ್ಳಿ ಮರ್ಯಾದೆ ಹತ್ತೆ ಖಂಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ  ಮಸ್ಕಿ ದಲಿತ ಪರ ಒಕೂಟ ಪ್ರತಿಭಟನೆ ನಡೆಸಿ ಮಸ್ಕಿ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

Dec 25, 2025 - 06:36
Dec 26, 2025 - 20:17
 0  41
ಮಾನ್ಯಳ ಮದುವೆಗೆ ಮಾನ್ಯತೆ ನೀಡದ ತಂದೆ ಮರ್ಯಾದ ಹ*ತ್ಯನ್ನು ಖಂಡಿಸಿ ದಲಿತ ಸಂಘಟನೆಯಿಂದ ಪ್ರತಿಭಟನೆ
ವರದಿ :ಹುಚ್ಚೇಶ ನಾಗಲೀಕರ್

12ನೇ ಶತಮಾನದಿಂದ ಹಿಡಿದು 21ನೇ ಶತಮಾನದವರೆಗೆ ನಿರಂತರವಾಗಿ ದಲಿತರ ಮೇಲೆ ಹೆಬ್ಬಾಳ್ಕೆ ದೌರ್ಜನ್ಯ ಅತ್ಯಾಚಾರಗಳು ನಡೆಯುತ್ತಲೇ ಬಂದಿವೆ ಬಸವಣ್ಣನವರು ಇವನಾರವ ಇವ ನಾರವ  ಎಂದೆನಿಸದಿರಯ್ಯ ಇವ ನಮ್ಮ ಮನೆಯ ಮಗ ಎಂದೆಂನಿ ಸಯ್ಯ ಎಂದು ಬಸವಣ್ಣನವರು ಈ ಜಾತಿ ವ್ಯವಸ್ಥೆಯನ್ನು ತಡೆದು ಹಾಕಲು ಅಂತರ್ಜಾತಿ ವಿವಾಹ ಮಾಡಿ ಜಾತಿ ನಿರ್ಮೂಲನೆ ಮಾಡಲು ಮುಂದಾದರು ಆದರೆ ಈ ಉನ್ನತ ವರ್ಗದ ಜನರು ಮಾತ್ರ ಹೆಸರಿಗೆ ಲಿಂಗಾಯತರು ಆದರೆ ಬಸವಣ್ಣನ ತತ್ವ ಅವರಿಗೆ ಬೇಕಾಗಿಲ್ಲ ಎಂದು ದಲಿತ ಸಾಹಿತಿ ದಾನಪ್ಪ ನಿಲುಗಲ್ ಅವರು ಮರ್ಯಾದ ಹತ್ಯೆಯನ್ನು ಖಂಡಿಸಿ ಸರ್ಕಾರ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು  ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. 

  ಮಾಜಿ ಜಿಲ್ಲಾ ಪಂಚಾಯತ್  ಸದಸ್ಯರು ದೊಡ್ಡಪ್ಪ ಮುರಾರಿ ಮಾತನಾಡಿ ದ ಅವರು ಈ ರೀತಿಯ ಹ*ತ್ಯೆಗಳು ನಿರಂತರವಾಗಿ ನಡೆಯುತಾ ಬಂದಿವೆ ಮುಂದು ಕೂಡಾ ನಡೆಯುತ್ತವೆ ಇದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ವೆವಸ್ಥೆ ನೋಡಿ ಸಂವಿಧಾನವನ್ನೇ ಬರೆದರು ಆ ಸಂವಿಧಾನದಲ್ಲಿ ಸರ್ವರೂ ಸಮಾನರು ಎನ್ನುವ  ಕಾನೂನು  ಬರೆದಿದ್ದಾರೆ ಹಾಗಿರಬೇಕಾದರೆ ಈ ದಲಿತರ ಮೇಲಿನ ದೌರ್ಜನ್ಯ ಅತ್ಯಾಚಾರ ಇನ್ನು ನಿಲ್ಲುತ್ತಿಲ್ಲ ಇಂತಹ ವಿಚಾರದ ಬಗ್ಗೆ ಸರಕಾರ ಸರಿಯಾದ ಕಠಿಣಾಕರಮ ಜರುಗಿಸ ಬೇಕೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

1. 20-12-2025 ರಂದು ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕಾಗಿ 7 ತಿಂಗಳ ಗರ್ಬಿಣಿ ಯುವತಿಯನ್ನು ಕೊಚ್ಚಿಕೊಂದ ತಂದೆಯನ್ನು ಗಲ್ಲಿಗೇರಿಸಬೇಕು.

 ದಿನಾಂಕ : 22-12-2025 ರಂದು ರಾಯಚೂರು ಜಿಲ್ಲೆಯ ಹಟ್ಟಿಯ ಪಾಮನಕೆಲ್ಲೂರು ಕ್ರಾಸ್ ಸಮೀಪದ ಹೊಲದಲ್ಲಿ ಜ್ಯೋತಿ ಎಂಬ ಯುವತಿಯ ಮೃತದೇಹ ಅನುಮಾನಸ್ಪದವಾಗಿ ಕಂಡುಬಂದಿದ್ದು ಅದರ ಹಿಂದೆ ಇರುವ ಸತ್ಯವನ್ನು ತನಿಖೆ ಮಾಡಿ ಆರೋಪಿಗಳನ್ನು ಗಲ್ಲಿಗೇರಿಸಬೇಕು.

ರಾಜ್ಯದಲ್ಲಿ ಅತ್ಯಧಿಕ ಪ್ರಕರಣ ಮುಂತಾದ ಹತ್ಯಗಳಾಗುತ್ತಿರುವುದು ಎಲ್ಲರೂ ತಲೆ ತಗ್ಗಿಸಬೇಕಾದ ವಿಚಾರ. ರಾಜ್ಯ ಸರಕಾರ, ಪೋಲಿಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ

ಮೌನೇಶ್ ಮುರಾರಿ ಪುರಸಭೆ ಸದ್ಯಸರು,ಮಲಯ್ಯ ಮುರಾರಿ,ಕಾಶಿಮಪ್ಪ ಡಿ ಮುರಾರಿ, ಅಶೋಕ್ ಮುರಾರಿ, ಮಲಪ್ಪ ಗೋನಾಳ್, ಬಾಲಸ್ವಾಮಿ ಜೀನಾಪುರ, ಬಸ್ವಂತ ಹಿರೇಕಡುಬುರ, ದುರ್ಗಪ್ರಸಾದ್, ಕಿರಣ್ ಮುರಾರಿ ಇತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow