ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವಂತೆ ವಿದ್ಯಾರ್ಥಿಗಳು ಊಟದ ತಟ್ಟೆ ಹಿಡಿದು ವಿಭಿನ್ನ ಪ್ರತಿಭಟನೆ ನಡೆಸಿದರು.

ಮಸ್ಮಿ ಜೈ ಕರುನಾಡ ರಕ್ಷಣಾ ಸೇನೆ ಸಂಘಟನೆ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಊಟದ ತಟ್ಟೆಗಳನ್ನು ಹಿಡಿದು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ತುರುವೆಹಾಳ ಮತ್ತು ಮಸ್ಕಿನಲ್ಲಿ ಇಂದಿರಾ ಕ್ಯಾಂಟೀನ್ 15 ದಿನಗಳ ಒಳಗಾಗಿ ಪ್ರಾರಂಭಿಸುವಂತೆ ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿ ಕರ್ನಾಟಕ ಸರಕಾರ ಇವರಿಗೆ ತಾಲೂಕ ತಹಸಿಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದರು.ನಂತರ ಜೈ ಕರುನಾಡ ರಕ್ಷಣಾ ಸೇನೆ ಸಂಘಟನೆಯ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಬಸವಂತ ಕಡೂಬುರ ರವರು ಈ ಹಿಂದೆ ನಮ್ಮ ಹೋರಾಟದ ಒಂದು ಪ್ರತಿಫಲವಾಗಿ ಇಂದು ಮಸ್ಕಿ ಕ್ಷೇತ್ರಕ್ಕೆ ದಲ್ಲಿ ಮಸ್ಕಿ ಮತ್ತು ತುರೂವಿಹಾಳ ನಲ್ಲಿ ಇಂದಿರಾ ಕ್ಯಾಂಟೀನ್ ಮಂಜುರಾಗಿ ಸಂಪೂರ್ಣ ಕಾಮಗಾರಿ ಮುಗಿತು. ಆದರೆ ಇದುವರೆಗೂ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ನಿರ್ಲಕ್ಷೆ ಯಿಂದ ವಿದ್ಯಾರ್ಥಿ, ಬೀದಿಬದಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ನಿರಾಸೆ ಮುಜುಗರ ತಂದಿದೆ. ಆದ್ದರಿಂದ ಈ ಕೂಡಲೇ 15 ದಿನಗಳ ಒಳಗಾಗಿ ಗ್ರಾಮ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕೆಂದು ವಿಭಿನ್ನ ರೀತಿಯಲ್ಲಿ ಊಟದ ತಟ್ಟೆಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಸರ್ಕಾರಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಸವಂತ ಹಿರೇಕಡಬೂರು ಜೈ ಕರುನಾಡು ರಕ್ಷಣಾ ಸೇನೆ ಸಂಘಟನೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು,ನಾಗರಾಜ ಜೈ ಕರುನಾಡು ರಕ್ಷಣಾ ಸೇನೆ ಸಂಘಟನೆ ಮಸ್ಕಿ ತಾಲೂಕು ಘಟಕದ ತಾಲೂಕು ಅಧ್ಯಕ್ಷರು. ಮೌನೇಶ್ ಕಣ್ಣೂರು, ಹನುಮಂತ ದಿನಸಮುದ್ರ,ಯಂಕಪ್ಪ ಇಂಜಿಯರ್, ಪ್ರದೀಪ್ ಕುಮಾರ್ ಮಸ್ಕಿ,ಬಸವರಾಜ್ ಬುದ್ದಿನಿ, ದೇವರಾಜ್ ಮಡಿವಾಳ ಇತರರು ಇದ್ದರು.

 - 
Oct 15, 2024 - 16:55
 0  36

What's Your Reaction?

like

dislike

love

funny

angry

sad

wow