ರಾಜ್ಯ ಮಟ್ಟದ ವಿಚಾರ ಸಂಕಿರಣ :ಡಾ.ಮಹಾಂತಗೌಡ ಪಾಟೀಲ್

ಡಿ:31 ಪಟ್ಟಣದ ದೇವಾನಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಸ್ಕಿ, ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು, ಇವರ ಸಹಯೋಗದಲ್ಲಿ ಮಸ್ಕಿ ಕಾಲೇಜಿನಲ್ಲಿ "ಮಸ್ಕಿ ಪರಿಸರ : ಪುರಾತತ್ವ,ಇತಿಹಾಸ ಮತ್ತು ಸಂಸ್ಕೃತಿ”.ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

Dec 29, 2025 - 05:06
Dec 29, 2025 - 05:10
 0  21

ಕಾರ್ಯಕ್ರಮವು 31 ಡಿಸೆಂಬರ್, 2025 ರಂದು ಕಾಲೇಜಿನಲ್ಲಿ ನೇಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಸಂಕಿರಣದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ,

ಕುಲಸಚಿವರಾದ ಡಾ.ಎ.ಚನ್ನಪ್ಪ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಇತಿಹಾಸ ತಜ್ಞರು, ಪ್ರಾಧ್ಯಾಪಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಹಾಗೆಯೇ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಇವರು ವಿಷಯ ಮಂಡಿಸಲಿದ್ದು, ತದನಂತರ ತಜ್ಞರಿಂದ ವಿವಿಧ ಗೋಷ್ಠಿಗಳು ನಡೆಯಲಿವೆ. ಇದರ ಸದುಪಯೋಗವನ್ನು ಇತಿಹಾಸ ವಿದ್ಯಾರ್ಥಿಗಳು, ಇತಿಹಾಸ ಆಸಕ್ತರು ಹಾಗೂ ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಮೂಲಕ ಮನವಿ ಮಾಡಿದರು.

What's Your Reaction?

like

dislike

love

funny

angry

sad

wow