ಕಾಮಗಾರಿಗೆ ಲಂಚ ನೀಡಿದರೆ ಅಷ್ಟೇ ಬಿಲ್ ಇಲ್ಲವಾದರೆ ಪೆಂಡಿಂಗ್: ಹೋಳಿಯಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಂಭೀರ ಆರೋಪ

ಮಸ್ಕಿ : ಡಿ -28 ತಾಲೂಕಿನ ಅಡವಿಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಎಂಬುವವರು 2023-24 ನೇ ಸಾಲಿನ ಕಾಮಗಾರಿಗಳ ಕಾರ್ಯ ಮುಗಿದರೂ ಲಂಚದ ಆಮಿಷಕ್ಕಾಗಿ ಸಾಮಗ್ರಿ ವೆಚ್ಚದ (ವೆಂರ್ಡ) ಬಿಲ್ ಮಾಡದೇ ಸತಾಯಿ ಸುತ್ತಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹೊಳೆಯಪ್ಪ ಅವರು ಪತ್ರಿಕ ಹೇಳಿಕೆ ಮೂಲಕ ಆರೋಪಿಸಿದ್ದಾರೆ.

Dec 28, 2025 - 11:28
Dec 28, 2025 - 11:30
 0  38
ಕಾಮಗಾರಿಗೆ ಲಂಚ ನೀಡಿದರೆ ಅಷ್ಟೇ ಬಿಲ್ ಇಲ್ಲವಾದರೆ ಪೆಂಡಿಂಗ್: ಹೋಳಿಯಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಂಭೀರ ಆರೋಪ
ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹೊಳೆಯಪ್ಪ ಬೆನಕನಾಳ

2023-24 ನೇ ಸಾಲಿನಲ್ಲಿ ಎರಡು ಲಕ್ಷ ರೂಪಾಯಿ ಮೊತ್ತದ ಎರಡು ಸಿಡಿ ಕಾಮಗಾರಿ ಹಾಗೂ ಮೂರು ಲಕ್ಷ ಮೊತ್ತದ ಎರಡು ಕಾಮಗಾರಿಗಳನ್ನು ದಿಗ್ಗಿನಾ ಯಕನ ಭಾವಿ ತಾಂಡಾ ಎಂಬಲ್ಲಿ ಮಾಡ ಲಾಗಿದ್ದು ಕಾಮಗಾರಿಯ ಸ್ಥಳ ಭೇಟಿ ಮಾಡಿ ಅದರ ಮೇಸರ್ಮೆಂಟ್ ಅನ್ನು ತೆಗೆದುಕೊಂಡು ಬಂದದ್ದು ಆಗಿದ್ದು ಸಾಮಗ್ರಿ ವೆಚ್ಚದ (ವೆಂರ್ಡ)ಬಿಲ್ ಅನ್ನು ಸೇವ್ ಮಾಡದೇ ಕೇಳಿದಾಗೆಲ್ಲ ಮಾ ಡೋಣ ಅಂತಾನೇ ಇಲ್ಲಿನ ಸಂತೋಷ್ ಎಂಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳುತ್ತಲೇ ಬರುತ್ತಿದ್ದು, ಕಾಮಗಾರಿ ಮುಗಿದು ಇಲ್ಲಿಗೆ ವರ್ಷಗಳೇ ಗಳಿಸಿದರೂ ಕಾರಣ ನೀಡದೇ ಹಾಗೆ ಬಿಟ್ಟಿರುವುದು ಲಂಚಕ್ಕಾಗಿಯೇ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ.

ನಮ್ಮ ಜೊತೆಗೆ ಕೆಲಸ ಮಾಡಿದವರ ಬಿಲ್ ಮಾಡಲಾಗಿದೆ ನಮ್ಮದು ಯಾಕೇ ಮಾಡಿಲ್ಲ ಅಂದ್ರೆ ಅದುವೇ ಲಂಚದ ಬೇಡಿಕೆ ಎಂಬುದು ಇದೆ ಆದ್ದರಿಂದ ಇಂತಹ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಕೆಲಸ ದಿಂದ ವಜಾ ಮಾಡಿ ಬರಿ ಸಸ್ಪೆಂಡ್ ಮಾಡಿ 3 ತಿಂಗಳ ನಂತರ ಮತ್ತೆ ಕೆಲಸಕ್ಕೆ ಸೇರಿಸುವ ಕಾರ್ಯ ಆಗಬಾರದು ಹಾಗೆ ಯೇ ಇವರು ನಮ್ಮ ಮಾದಿಗ ಸಮಾಜದ ವ್ಯಕ್ತಿಗಳು ಯಾರೇ ಪಿಡಿಒ ಅವರಿಗೆ ಕರೇ ಮಾಡಿದರೆ ನೀವೇನು ಸಂಬಂಧ ಎಂದು ಪ್ರಶ್ನಿಸುವರು ನಂತರ ನಮ್ಮ ಕರೆಯನ್ನು ಸ್ವೀಕರಿಸುವುದಿಲ್ಲ.

ಕಾಮಗಾರಿಗಳ ಬಿಲ್ ಗೆ ಲಂಚ ನೀಡುವವರ ಜೊತೆ ನಿರಂತರ ಸಂಪರ್ಕ ಅನ್ನೋನ್ಯತೆಯ ಸ್ಪಂದನೆ ಮಾಡುವ ಮೂಲಕ ತಾರತಮ್ಯ ಮಾಡುವ ಅಧಿಕಾರಿ ನಮಗೆ ಬೇಕೇ..? ನಮ್ಮ ಕೇರಿ ಗಳಲ್ಲಿ ಒಂದು ಹೆಜ್ಜೆ ಕೂಡಾ ಇಡುವು ದಿಲ್ಲ ಇಂತಹ ಜಾತಿ ತಾರತಮ್ಯ ಮಾಡುವ ಹಾಗೂ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹೊಳೆಯಪ್ಪ ಬೆನಕನಾಳ ಅವರು ಪತ್ರಿಕೆ ಯ ಹೇಳಿಕೆ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.

What's Your Reaction?

like

dislike

love

funny

angry

sad

wow