ಸೌಹಾರ್ದ ಭಾವೈಕ್ಯತೆಯ ಇಫ್ತಾ‌ರ್ ಸಮ್ಮಿಲನ ಕೂಟ

ಮಸ್ಕಿ,   ಸೋಮವಾರ ಪಟ್ಟಣದ ಜಾಮಿಯಾ ಮಜೀದ್‌ ನಲ್ಲಿ  ಪವಿತ್ರ ರಂಜಾನ್ ಉಪವಾಸ ಮಾಸದ ಹಿನ್ನೆಲೆಯಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಸೌಹಾರ್ದ, ಭಾವೈಕ್ಯತೆಯ ಇಫ್ತಾ‌ರ್ ಸಮ್ಮಿಲನ ಕೂಟವನ್ನು ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ ಅವರಿಂದ ಆಯೋಜಿಸಲಾಯಿತು.

Mar 17, 2026 - 16:26
Mar 18, 2026 - 07:28
 0  35
ಸೌಹಾರ್ದ ಭಾವೈಕ್ಯತೆಯ ಇಫ್ತಾ‌ರ್ ಸಮ್ಮಿಲನ ಕೂಟ

ಪವಿತ್ರ ರಂಜಾನ್ ಮಾಸದಲ್ಲಿ ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳಲು ಇಂತಹ ಸೌಹಾರ್ದತೆಯ ಕೂಟಗಳು ಅತ್ಯಂತ ಅವಶ್ಯಕವಾಗಿವೆ, ಮಸ್ಕಿ ತಾಲೂಕಿನ ಹಿರಿಯರು ಹಿಂದಿನಿಂದಲೂ ಎಲ್ಲಾ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ  ಜೀವನ ನೆಡೆಸಿಕೊಂಡು ಬಂದಿದ್ದಾರೆ. ಅದೇ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆ' ಎಂದು

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷರು  ಪಾಮಯ್ಯ ಮುರಾರಿ  ಮಾತನಾಡಿದರು.

'ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಸರ್ವಧರ್ಮ ತತ್ವದ ಸಾರವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೇ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮಗಳು ಮುಖ್ಯ ಪಾತ್ರವಹಿಸುತ್ತವೆ' ಹಗೇ ರಾಜ್ಯ ದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಲ್ಫಾಸಂಖ್ಯಾತ ಸಮುದಾಯಕೆ ಹಲುವು ಯೋಜನೆಗಳಜೊತೆಗೆ ಶೈಕ್ಷಣಿಕ ವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಬರಲು ಯೋಜನೆ ರೂಪಿಸಿದೆ,ಮತ್ತು ಮಸ್ಕಿ ತಾಲ್ಲೂಕಿನ ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ ಸೌಹಾರ್ದ ಭಾವೈಕ್ಯತೆಯ ಇಫ್ತಾ‌ರ್ ಸಮ್ಮಿಲನ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸೂರ್ಯ ಮುಳುಗಿದ ನಂತರ ಮುಸ್ಲಿಂ ಬಾಂಧವರ ಜೊತೆ ವಿವಿಧ ಸಮುದಾಯದ ಮುಖಂಡರು  ಒಟ್ಟಿಗೆ ಸೇರಿ ದಿನವಿಡೀ ಮಾಡಿದ ಉಪವಾಸವನ್ನು (ರೋಜಾ) ಕೊನೆಗೊಳಿಸುವ ಭೋಜನ ಸಮಾರಂಭದಲ್ಲಿ, ಬಾಗಿಯಾಗಿ ಖರ್ಜೂರ, ಹಣ್ಣುಗಳು, ಮತ್ತು ಪೌಷ್ಟಿಕ ಆಹಾರಗಳೊಂದಿಗೆ ಸಾಮುದಾಯಿಕವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ

ಗ್ಯಾರಂಟಿ ಯೋಜನೆಯ ಮಸ್ಕಿ ತಾಲ್ಲೂಕ ಅಧ್ಯಕ್ಷ ಮೈಹಿಬೂಬ್ ಸಾಬ ಮುದ್ದಾಪುರ,ಮೌಲಾನ ಆಷಿಪ್, ತಾಹಶೀಲ್ದಾರ್ ಮಜುನಾಥ್ ಬೋಗಾವತಿ,ದೊಡಪ್ಪ ಕಡಬುರು, ವಿರೇಶ್ ಆನೆವಸೂರು, ಅಬ್ಬುದುಲ್ ಗನಿ ಸಾಬ, ಮೊಹಮ್ಮದ್ ಹುಸೇನ್ ಶೇಡ್ಮಿ,ರಿಯಾಜ್ ಖಾಜಿ, ಹಿರಿಯ ಮುಖಂಡ ಅಬ್ಬದುಲ್ ಅಜೀಜ್, ಕೃಷ್ಣ ಚಿಗರಿ, ಪುರಸಭೆ ಸದಸ್ಯ ದೊಡ್ಡ ಕರಿಯಪ್ಪ, ಮಲಯ್ಯ ಬಳ್ಳ, ನಿಸಾರ್ ಅಹ್ಮದ್,ಶಬ್ಬೀರ್ ಚೌದ್ರಿ, ಇಮಾಮ್ ಸಾಬ್ ಕಾತರಕಿ, ಮೊಹಮ್ಮದ್ಅಜ್ಮಿರ್ ಶೇಡ್ಮಿ, ವಿವಿಧ ಸಮುದಾಯದ ಮುಖಂಡರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow