ಬಳಗಾನೂರು ಪಟ್ಟಣ ಪಂಚಾಯತ್ ಭ್ರಷ್ಟಾಚಾರವನ್ನು ಉಚ್ಚಾಟಿಸಲು ಭಿಕ್ಷಾಟನೆ ಮಾಡಿದ ಹೋರಾಟಗಾರರು

ಹೌದು ಪ್ರಿಯ ವೀಕ್ಷಕರೆ ಡಿಸೆಂಬರ್ 4,ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಇ- ಖಾತ ನೀಡಲು ವಿಳಂಬ ಮಾಡಿ ಒಂದು ಹಂತದ ಲಂಚ ಪಡೆದುಕೊಂಡ ಹೆಚ್ಚಿನ ಹಣ ಕ್ಕೆ ಬೇಡಿಕೆ ಇಟ್ಟ ಅಧ್ಯಕ್ಷ, ಮುಖ್ಯಾಧಿಕಾರಿ ವಿರುದ್ಧ  ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಹಾಗೂ ಕೆ,ಆರ್‌,ಎಸ್, ಕಾರ್ಯಕರ್ತರು ಪಟ್ಟಣದ ಸಂತೆ ಬಜಾರದಿಂದ ಪಟ್ಟಣಪಂಚಾಯ್ತಿಯ ಕಾರ್ಯಾಲಯದ ತನಕ ಗುರುವಾರ ಹಲಗಿ ಭಾರಿಸುತ್ತ ವಿನೂತನ ಅಣಕು ಭಿಕ್ಷಾಟನೆ ಮಾಡಿದರು. ಇದನ್ನು ಕಂಡ ಸಾರ್ವಜನಿಕರು ಬೆಕ್ಕಸಬೆರಗಾದರು.

Dec 6, 2025 - 05:30
 0  18
ಬಳಗಾನೂರು ಪಟ್ಟಣ ಪಂಚಾಯತ್ ಭ್ರಷ್ಟಾಚಾರವನ್ನು ಉಚ್ಚಾಟಿಸಲು ಭಿಕ್ಷಾಟನೆ ಮಾಡಿದ ಹೋರಾಟಗಾರರು
ಬಳಗಾನೂರು ಪಟ್ಟಣ ಪಂಚಾಯತ್ ಭ್ರಷ್ಟಾಚಾರವನ್ನು ಉಚ್ಚಾಟಿಸಲು ಭಿಕ್ಷಾಟನೆ ಮಾಡಿದ ಹೋರಾಟಗಾರರು

ಕೆಲವು ತಿಂಗಳುಗಳ ಹಿಂದೆ ಸಿಂಧನೂರಿನ ರಿಯಲ್ ಎಸ್ಟೇಟ್ ಉಧ್ಯಮಿ ಖಾಜಾಸಾಬ್ ಮತ್ತು ಪಾಲುದಾರರು ನಮೋನೆ 3 ಕೋರಿ ಬಳಗಾನೂರಿನಲ್ಲಿ ನೂತನವಾಗಿ ನಿರ್ಮಿಸಿರುವ  ಬಡಾವಣೆಯ ನಿವೇಷನಗಳ ನಮೂನೆ ಮೂರನ್ನು ಕೋರಿ ಅರ್ಜಿ ಸಲ್ಲಿಸಿದ್ದರು,ಅದನ್ನು ಕೇಳಲು ಪಟ್ಟಣ ಪಂಚಾಯ್ತಿಯ ಕಾರ್ಯಾಲಯಕ್ಕೆ ಹೋದಾಗ ಐದು ಲಕ್ಷ ಲಂಚನೀಡಿದರೆ ಮಾತ್ರ ನಮೂನೆ ಮೂರನ್ನು ಕೊಡುತ್ತೇವೆ ಇಲ್ಲವಾದರೆ ಇಲ್ಲವೆಂದು ಮಾತಿನ ಚಕಮಕಿ ನಡೆದು ದೈಹಿಕ ಹಲ್ಲೆಯೂ ಆಗಿ ಬಳಗಾನೂರು ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿ ತನಿಕೆ ಪ್ರಗತಿಯಲ್ಲಿದೆ.

ಆದರೆ ನಮೂನೆ ಮೂರನ್ನು ಇನ್ನಾದರೂ ನೀಡದೆ ಸತಾಯಿಸುತ್ತಿರುವ ಮುಖ್ಯಾಧಿಕಾರಿಗಳ ವಿರುದ್ದ ಅಣಕು ಭಿಕ್ಷಾಟನೆ ಮಾಡಿ ಲಂಚಬಾಕ ಅಧಿಕಾರಿಗಳಿಗೆ ಮನವಿಪತ್ರ ನೀಡುವ ಮೂಲಕ ಬಳಗಾನೂರು ಪಟ್ಟಣ ಪಂಚಾಯ್ತಿಯ ಲಂಚಾವತಾರವನ್ನು ಬೆತ್ತಲಾಗಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳಾಗಬೇಕಾದರೆ ಲಂಚ ನೀಡಲೇ ಬೇಕು,ಇಲ್ಲವೇ ಎಮ್ ಪಿ,...ಎಮ್,ಎಲ್,ಎ,ಸಿಫಾರಸುಬೇಕು ಅದಿಲ್ಲದಿದ್ದರೆ ಅವರ ಕೈ ಕಾಲುಗಳನ್ನು ಹಿಡಿಯಬೇಕು ಅಂದಾಗಮಾತ್ರ ಕೆಲಸಗಳಾಗುತ್ತವೆ.ಸೀದಾಸಾದಾ ವ್ಯಕ್ತಿಗಳು ಹೋದರೆ ಕ್ಯಾರೆ ಎನ್ನುವುದಿಲ್ಲವೆಂದು ಕೆ,ಆರ್,ಎಸ್,ಪಕ್ಷದ ಮುಖಂಡ ಕೆ,ನಿರುಪಾದಿ ಗೋಮರ್ಸಿ ಆರೋಪಿಸಿದರು.

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್ ನಜೀರ್ ಇಲ್ಲಿನ ಸಿಬ್ಬಂದಿ ಮುಖ್ಯಾಧಿಕಾರಿಗಳು ಜನಪ್ರತಿನಿಧಿಗಳ,ರಾಜಕಾರಣಿಗಳ ಅಡಿಯಾಳುಗಳಾಗಿ ಕೆಲಸಮಾಡುತ್ತಿದ್ದಾರೆ. ಸಾರ್ವಜನಿಕರ ಸೇವಕರೆಂಬುದನ್ನು ಮರೆತು ಜನರ ರಕ್ತಹೀರುವ ರಕ್ತಪಿಪಾಸುಗಳಾಗಿದ್ದಾರೆ. ಕೆಲಸಮಾಡಿಕೊಡಿ ಸರ್ ಎಂದು ಕೇಳಲು ಕರೆಮಾಡಿದರೆ ಕರೆ ಸ್ವೀಕರಿಸುವುದೇಯಿಲ್ಲ,ಅದೇ ಲಂಚಕೊಡುತ್ತೇವೆ ಸರ್ ಬನ್ನಿ ಎಂದರೆ ತಕ್ಷಣವೇ ಹಾಜರ್ ಇಂತಹ ಲಂಚಬಾಕ ಅಧಿಕಾರಿಗಳಿಗಾಗೇ ಇವತ್ತು ಬಳಗಾನೂರಿನ ಸಾರ್ವಜನಿಕರು ಭಿಕ್ಷೆ ಹಾಕಿದ್ದಾರೆ ತೆಗೆದುಕೊಂಡು ಫಾರಮ್ ಮೂರನ್ನು ಕೊಡಿ ಇಷ್ಟು ಭಿಕ್ಷೆ ಸಾಕಾಗದಿದ್ದರೆ ನಾಳೆಯೂ ಭಿಕ್ಷೆಬೇಡಿಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಎಸ್,ಎಫ್,ಐ,ದ ಮುಖಂಡ ಬಸವಂತ 

ಮಾಡಿನಾಡಿದರು.

ನೂತನವಾಗಿ ವರ್ಗವಾಗಿ ಬಂದಿರುವ ಮುಖ್ಯಾಧಿಕಾರಿ ಗೋಪಾಲನಾಯಕರಿಗೆ ಮನವಿಪತ್ರ ನೀಡಿ ಶೀಘ್ರ ನಮೂನೆ ಮೂರನ್ನು ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಖಾಜಾಸಾಬ್,ನಿರುಪಾದಿ ಗೋಮರ್ಸಿ,ಎಸ್,ನಜೀರ್, MD ಖಾಜಾ ಶೇಡ್ಮಿ, ಬಸ್ವಂತ ಹಿರೇಕಡುಬೂರು ನಿರುಪಾದಿ ಮುರಾರಿ, ಹುಸೇನ್ ಸಾಬ್, ಸೇರಿದಂತೆ ಹಲವರಿದ್ದರು.

What's Your Reaction?

like

dislike

love

funny

angry

sad

wow