ತಾವರಕೆರೆ ಬಾಲಕಿ ಅತ್ಯಾಚಾರ ಪ್ರಕರಣ ಖಂಡಿಸಿ ಶಿಳ್ಳೇಖ್ಯಾತ ಸಮುದಾಯದಿಂದ ಪ್ರತಿಭಟನೆ
✍️ ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ವಿಜಯನಗರ ಜಿಲ್ಲೆ : ಬೆಂಗಳೂರು ಅರಸಿಕಕೇರಿಯಲ್ಲಿ ಕೊಪ್ಪಳ ಮೂಲದ ಶಿಳ್ಳೇಖ್ಯಾತ ಸಮುದಾಯದ , ಅಪ್ರಾಪ್ತ ಬಾಲಕಿ ಅರುಣ ಮೇಲೆ ಆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ. ಕರ್ನಾಟಕ ರಾಜ್ಯವಶಿಳ್ಳೇಕ್ಯಾತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶಿಳ್ಳೇಖ್ಯಾತರ ಸಮುದಾಯದ ವಿಜಯನಗರ ಜಿಲ್ಲಾ ಘಟಕ , ಹಾಗೂ ಹೂವಿನಹಡಗಲ್ಲಿ ತಾಲೂಕು ಶಿಳ್ಳೇಖ್ಯಾತರ ಸಮುದಾಯದ ನೇತೃತ್ವದಲ್ಲಿ. ಜಿಲ್ಲೆಯಲ್ಲಿನ ವಿವಿದ ತಾಲೂಕುಗಳ ಶಿಳ್ಳೇಖ್ಯಾತ ಸಮುದಾಯದ ಘಟಕಗಳ ಮುಖಂಡರು , ಹೂವಿನ ಹಡಗಲಿಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಹೂವಿನ ಹಡಗಲಿ ಪಟ್ಟಣದ ಡಾ॥ ಬಿ. ಆರ್.ಅಂಬೇಡ್ಕರ್ ವೃತ್ತದಲ್ಲಿ , ಅಂಬೇಡ್ಕರ್ ರವರ ಶಿಲಾ ಮೂರ್ತಿಗೆ ಗೌೆರವ ಸಮರ್ಪಿಸಿ ಪ್ರತಿಭಟನೆ ಆರಂಭಿಸಲಾಯಿತು. ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆ ಹಾಗೂ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ , ತಹಶಿಲ್ದಾರರ ಕಚೇರಿ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಪ್ರಕರಣವನ್ನು ಖಂಡಿಸಿ , ಹಾಗೂ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಅಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಲೆಮಾರಿ ರಾಜ್ಯ ಶಿಳ್ಳೆಖ್ಯಾತ ಸಂಘದ ಹಡಗಲಿ ಘಟಕದ ಅಧ್ಯಕ್ಷರಾದ , ದೊಡ್ಡಮನಿ ಪರಶುರಾಮಪ್ಪ. ಗೌರವಾಧ್ಯಕ್ಷರಾದ ಕೆ ಸಿ ಪರಶುರಾಮಪ್ಪ. ವಿಜಯನಗರ ಜಿಲ್ಲೆ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯರು , ಹಾಗೂ ಅಂಗೂರಿನ ಯುವಕರು. ವಿಜಯನಗರ ಜಿಲ್ಲಾ ಶಿಳ್ಳೇಖ್ಯಾತ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ , ಕೂಡ್ಲಿಗಿ ಗೌರಮ್ಮ ಮಹಂತೇಶ ಶಿಂಧೆ. ಉಪಾಧ್ಯಕ್ಷರಾದ ಗಾಳೆಮ್ಮಗುಡಿಯ ಹನುಮಕ್ಕ ,
ಅಂಗೂರು ಪರಶುರಾಮ , ಅಂಗೂರು ಭೀಮಣ್ಣ , ಗಾಳೆಮ್ಮನ ಗುಡಿಯ ಮಂಜುನಾಥ , ಅಂಗೂರಿನ ಸಮಸ್ತ ಶಿಳ್ಳೆ ಕ್ಯಾತ ಬಂಧುಗಳು , ಕುಲಬಾಂಧವರು , ವಿವಿದ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು. ವಿವಿದ ಅಲೆಮಾರಿ ಸಂಘಟನೆಗಳು , ಕುರುಬ ಸಂಘಟನೆ , ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ. ಹಲವಾರು ಅಲೆಮಾರಿ ಸಂಘಟನೆಗಳು , ಸೋಶಿಯಲ್ ಢೆಮಾರ್ಕಟಿಕ್ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ ಘಟನೆಯನ್ನು ಖಂಡಿಸಿದರು, ಹಾಗೂ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. *ಪ್ರಕರಣದ ಮಾಹಿತಿ*- ಕೊಪ್ಪಳ ಜಿಲ್ಲೆ ಕೊಪ್ಫಳ ತಾಲೂಕಿನ , ಹೊಸ ಬಂಡಿ ಹರ್ಲಾಪುರ ಗ್ರಾಮದವಾಸಿಗಳಾದ. ನಾಗಪ್ಪ ಮತ್ತು ರೇಣುಕಮ್ಮ ಕುಟುಂಬವು , ಬೆಂಗಳೂರಿನಲ್ಲಿ ದುಡಿಮೆಗಾಗಿ ಕೆಲಸ ಅರಸಿ ವಲಸೆ ಹೋಗಿದ್ದು. ಅವರು ಬೆಂಗಳೂರಿನ ತಾವರೆಕೆರಿಯಲ್ಲಿ , ಅವರ ಮಗಳಾದ ಅರುಣಾ 14 ವರ್ಷದ ಬಾಲಕಿಯೊಂದಿಗೆ ವಾಸವಿದ್ದು. ತಾವರೆಕೆರೆಯ ಅವರ ಮನೆಯಲ್ಲಿ , ಒಬ್ಬಳೇ ಹುಡುಗಿ ಇದ್ದಾಗ ಅವಳ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ. ಘಟನೆಯ ನಂತರದ ದಿನಗಳಲ್ಲಿ , ಆರೋಪಿಯನ್ನು ತಾವರಕೆರೆ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಗಲ್ಲಿಗೇರಿಸಬೇಕೆಂದು , ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಹೂವಿನಡಗಲಿ ತಹಶಿಲ್ದಾರವರ ಮೂಲಕ ಹಕ್ಕೊತ್ತಾಯ ನೀಡಲಾಯಿತು.
What's Your Reaction?






