ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ವಿವಾದ ರೈತರ ಜಮೀನುಗಳಿಗೆ ನುಗ್ಗಿದ ಜೆಸಿಬಿ ಬುಲ್ಡೋಸರ್.!

Jul 18, 2025 - 03:41
Jul 18, 2025 - 03:45
 0  15

748 ಎ ರಾಷ್ಟ್ರೀಯ ಹೆದ್ದಾರಿ  ಭಾರತಮಾಲ್ ಯೋಜನೆಯಡಿ ಹೆದ್ದಾರಿ ಗಾಗಿ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರು ನೂರಾರು ಜನ ಪೋಲಿಸ್ ಪಡೆಯೊಂದಿಗೆ ಬಂದು ದೌರ್ಜನ್ಯ ಮಾಡುತ್ತಿದ್ದಾರೆ ಎಂದು  ಅಧಿಕಾರಿಗಳ ಮತ್ತು ರೈತರ ನಡುವೆ ವಾಗುವ ನಡೆಯಿತು.

ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ರೈತ ಮುಖಂಡ ಕನಿಷ್ಠ ಕಾನೂನು ಪಾಲನೆ ಮಾಡದೇ, ಭೂಸಂ ತ್ರಸ್ತರ ಸಮಸ್ಯೆಗಳನ್ನು ಪರಿಹರಿಸದೆ, ಗುರುವಾರ ಗೋನುವಾರ  ಗ್ರಾಮದ ರೈತರು ಬೆಳೆದಿರುವ 

ಜಮೀನುಗಳಿಗೆ ನುಗ್ಗಿ   ಭಯಭೀತಿಯನ್ನು ಹುಟ್ಟಿಸಿ ಜಮೀನು ಗಳನ್ನು ಆಕ್ರಮಣಕಾರಿಯಾಗಿ, ದೌರ್ಜನ್ಯ ದಿಂದ ಬಿತ್ತಿ ಬೆಳೆದಿರುವ ಬೆಳೆಯನ್ನು ನಾಶಪಡಿಸಿ 

 ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾದ ಅಧಿಕಾರಿಗಳ ಹಾಗೂ ಹೆದ್ದಾರಿ ಪ್ರಾಧಿಕಾರದ ರೈತ ವಿರೋಧಿ ಧೋರಣೆ ಯನ್ನು ರೈತರು ಖಂಡಿಸಿದರು.  

ಬೆಳಗಾವಿಯಿಂದ ರಾಯಚೂರು ವರೆಗೆ ನಿರ್ಮಾಣ ಆಗುತ್ತಿರುವ 748 ಎ ರಾಷ್ಟ್ರೀಯ ಹೆದ್ದಾರಿಗೆ ಜಮೀನು ಬಿಟ್ಟು ಕೊಡುವುದಕ್ಕೆ ರೈತರು ತಯಾರಿದ್ದು, ಅಲ್ಲಿ ಭೂ ಸ್ವಾಧೀನ ಮಾಡಿಕೊಳ್ಳವಲ್ಲಿ ಪ್ರಾಧಿಕಾರ ಕನಿಷ್ಠ ಕಾನೂನು ಪಾಲನೆ ಮಾಡದೆ ಇರುವುದನ್ನು ಸರಿಪಡಿಸುವಂತೆ ಕಳೆದ ಎರಡು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ ಬರಲಾಗಿದೆ. ಹೆದ್ದಾರಿ ಪ್ರಾಧಿಕಾರವು ಭೂಸಂತ್ರಸ್ತರ ಈ ಯಾವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನ ಮಾಡಿಲ್ಲ. ಜೊತೆಗೆ ಬಹಳಷ್ಟು ಭೂಸಂತ್ರಸ್ತರು ಎಲ್ಲಾ ದಾಖಲೆ ಗಳನ್ನು ಸಲ್ಲಿಸಿದಾಗ್ಯೂ ಅವರ ಖಾತೆಗೆ ಹಣ ಜಮಾ ಮಾಡಿಲ್ಲ. ಕೋರ್ಟ್ ಗೆ ಕಳಿಸಿದ್ದೇವೆ ಎಂದು ಹೆದ್ದಾರಿ ಪ್ರಾಧಿಕಾರದ ಭೂಸ್ವಾಧಿ ನ ಅಧಿಕಾರಿಗಳು ದರ್ಪದಿಂದ 

ನಡೆದುಕೊಂಡಿದ್ದಾರೆ.

ಬಹಳಷ್ಟು ಭೂಸಂತ್ರಸ್ತರಿಗೆ ಇಲ್ಲಿಯ ವರೆಗೆ ಒಂದು ನೋಟಿಸ್ ಕೂಡ ಬಂದಿರು ವುದಿಲ್ಲ. ಅಲ್ಲದೆ ಅವರ ಜಮೀನು ಎಷ್ಟು ಹೋಗುತ್ತದೆ ಎಂದು ಕೂಡ ಗೊತ್ತಿಲ್ಲ. ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಾದರೆ ಈ ಭೂ ಕಾನೂನು ಪಾಲನೆ ಮಾಡಿ, ಕಳೆದುಕೊಳ್ಳುವ ಜಮೀನಿಗೆ ನ್ಯಾಯ ಕೊಡಿ ಅಂತ ಕೇಳಿದರೆ, ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಸರ್ವಾಧಿಕಾರಿ ಗಳಂತೆ ನೂರಾರು ಪೋಲಿಸರ ಬೆಂಗಾವಲಿ ನೊಂದಿಗೆ ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಮಸ್ಕಿ ತಹಶೀಲ್ದಾರರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗೋನುವಾರ  ಗ್ರಾಮಗಳಲ್ಲಿ ಬಂದು ದೌರ್ಜನ್ಯದಿಂದ ಸ್ವಾಧೀನ ಮಾಡಿಕೊಳ್ಳ ವುದಕ್ಕೆ ಮುಂದಾಗಿ ಭೂ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ.

ಬಿತ್ತನೆ ಮಾಡಿದ ಜಮೀನಿನಲ್ಲಿ ಯದ್ವತದ್ವಾ ಬೂಲ್ಗೊಜರ್‌ಗಳನ್ನು ಓಡಾ ಡಿಸಿ ದರ್ಪ ಮೆರೆದಿರುವ ಇವರ ನಡೆಯನ್ನು ರೈತರಿಗೆ ಆತಂಕ ಕೀಡು ಮಾಡಿದೆ ಎಂದು ರೈತ ಮುಖಂಡ ಅಧಿಕಾರಿಗಳ ಮೇಲೆ  ಆಕ್ರೋಶ  ವ್ಯಕ್ತಪಡಿಸಿದರು. 

 ಬ್ಯುರೋರು ರಿಪೋರ್ಟ್ ಪ್ರಜಾಪ್ರತಿ ಧ್ವನಿ ಕನ್ನಡ ಸುದ್ದಿ ವಾಹಿನಿ ರಾಯಚೂರು 

What's Your Reaction?

like

dislike

love

funny

angry

sad

wow