ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಬ್ರೇಕ್ ಹಾಕದಿದ್ದರೆ ಉಗ್ರ ಹೋರಾಟ : ಕರವೇ ಅಧ್ಯಕ್ಷ ಆರ್ ಕೆ ನಾಯಕ್ ಎಚ್ಚರಿಕೆ.
ಮೈಕ್ರೋ ಫೈನಾನ್ಸ್ ಕಿರುಕುಳ ಸಾಲಗಾರ ವಿಲವಿಲ

ಹೌದು ಪ್ರಿಯ ವೀಕ್ಷಕರೆ ಮೈಕ್ರೋ ಫೈನಾನ್ಸ್ ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು, ₹5 ಲಕ್ಷ ವರೆಗೂ ದಂಡ: ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ - ರಾಜ್ಯ ಸರಕಾರ MICROFINANCE BILL 2025 ವಿದೇಯಕ ಜಾರಿ ಮಾಡಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸುವ ಸಲುವಾಗಿ ರೂಪಿಸಿರುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ಅಂಗೀಕಾರಗೊಂಡಿದೆ ಆದರೇ . ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರೆದ ನೋಂದಣಿ ಮೈಕ್ರೋ ಫೈನಾನ್ಸ್ ಕಿರುಕುಳು ಆರ್ ಬಿ ಐ ಮತ್ತು ಸರ್ಕಾರದ ಸುಗ್ರೀವಾಜ್ಞೆ ಉಲ್ಲಂಘಿಸಿ ವಿಕ್ರಮಾದಿತ್ಯನಿಗೆ ಬೇತಾಳನಂತೆ ಸಾಲಗಾರರಿಗೆ ಮೈಕ್ರೋ ಫೈನಾನ್ಸ್ ಗಳು ಕಾಡುತ್ತಿವೆ. ಮಹಿಳೆಯರು, ರೈತರು, ಮಧ್ಯಮ ವರ್ಗದವರು, ಬೀದಿ ವ್ಯಾಪಾರಸ್ಥರು ಇವರ ಕಾಟಕ್ಕೆ ಊರು ಬಿಟ್ಟು ಪಲಾಯನ ಮಾಡಿದರೆ ಉಳಿದ ಜನರು ಮಾನ ಮರ್ಯಾದೆಗೆ ಅಂಜಿ ಮನೆ ಮಟ್ಟ ತಾಳಿ ಮಾರಿಕೊಂಡು ಬೀದಿಪಾಲಾಗಿದ್ದಾರೆ. ಕೆಲವರು ಇವರ ಹಿಂಸೆ ತಾಳಲಾರದೆ ಮಾನಸಿಕವಾಗಿ ಕುಗ್ಗಿ 30ಕ್ಕೂ ಅಧಿಕ ಜನ ಜೀವ ಹಾನಿ ಮಾಡಿಕೊಂಡಿರುವ ಪ್ರಸಂಗಗಳು ನಡೆದಿವೆ. ಸರ್ಕಾರದ ಸುಗ್ರೀವಾಜ್ಞೆ ಜಾರಿಯಾದರೂ ಕೂಡ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕಡಿವಾಣ ಹಾಕದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ. ಕೂಡಲೇ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ತಾಲೂಕು ಮಟ್ಟದ ಪೊಲೀಸ್ ಠಾಣೆಗಳಲ್ಲಿ ಮೈಕ್ರೋ ಫೈನಾನ್ಸ್, ಧರ್ಮಸ್ಥಳ ಸೇರಿದಂತೆ ಕಿರು ಸಾಲ ಸಂಸ್ಥೆಗಳಿಗೆ ಸಭೆ ಕರೆದು ಸರ್ಕಾರದ ಸುಗ್ರೀವಾಜ್ಞೆ ಮತ್ತು ಆರ್‌ಬಿಐ ಗೈಡ್ ಲೈನ್ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕರವೇ ಶಿವರಾಮೇಗೌಡ ಬಣದ ತಾಲೂಕ ಅಧ್ಯಕ್ಷ ಆರ್ ಕೆ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತಹದ್ದೆ ಒಂದು ಘಟನೆ ಮಸ್ಕಿಯಲ್ಲಿ ನಡೆದಿದೆ.
ಮಸ್ಕಿಯ ನಿವಾಸಿ ಶಿವುಕುಮಾರ್ ಮೋಚಿ ಎಂಬ ಯುವಕ ಮುಂಬೈ ಮೂಲದ ಮೈಕ್ರೋ ಫೈನಾನ್ಸ್ ಸಿಂಧನೂರಿನಲ್ಲಿರುವ ಬ್ರಾಂಚಿನಲ್ಲಿ ತ್ವರಿತ 19 ಲಕ್ಷ ಸಾಲ ಪಡೆದುಕೊಂಡು 8 ಲಕ್ಷ ಮರುಪಾವತಿ ಮಾಡಿದರು ಕೂಡ 19 ಲಕ್ಷ ಅಸಲು ಇದೆ ಎಂದು ದಿನವಿಡಿ ಬಂದು ಹೆಚ್ಚಿನ ಬಡ್ಡಿ ಪಾವತಿಸಲು ಒತ್ತಾಯಿಸಲಾಗುತ್ತಿದೆ. ಹರಾಸ್ಮೆಂಟ್ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇವರ ಕಿರುಕುಳದಿಂದ ನನ್ನ ಜೀವಕ್ಕೆ ಹಾನಿ ಉಂಟಾದರೆ. ಮೈಕ್ರೋ ಫೈನಾನ್ಸ್ ಅವರು ನೇರ ಹೊಣೆ ಎಂದು ಮಾಧ್ಯಮದ ಮುಂದೆ ತನ್ನ ಅಳಲನ್ನು ವ್ಯಕ್ತಪಡಿಸಿದ್ದಾನೆ.
ಈಗಲಾದರೂ ಸರಕಾರದ ಸುಗ್ರೀವಾಜ್ಞೆ ವಿಧೇಯಕ ದಂತೆ ಪೊಲೀಸ್ ಇಲಾಖೆ ಅಸಹಾಯಕರನ್ನು ಕಾಪಾಡುವ ಮತ್ತು ರಕ್ಷಿಸುವ ಬಡ ಕಾರ್ಮಿಕರು, ದುರ್ಬಲ ವರ್ಗದವರನ್ನು ಪೀಡಿಸಿ ಉಸಿರುಗಟ್ಟಿಸುತ್ತಿವ. ಮೈಕ್ರೋ ಫೈನಾನ್ಸ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಮೈಕ್ರೋ ಫೈನಾನ್ಸ್ ಲೇವಾದೇವಿ ಗಿರಿ ವಿದಾರರ ಪರ ಬ್ಯಾಟಿಂಗ್ ಬೀಸ್ತಾರೋ ಎಂಬುವುದನ್ನು ನೋಡಬೇಕಾಗಿದೆ.
What's Your Reaction?






