ಮಸ್ಕಿ ತಾಲೂಕ ಜಂಗಮ ಸಮಾವೇಶದ ಪೂರ್ವಭಾವಿ ಸಭೆ
ಮಸ್ಕಿ: ಪಟ್ಟಣದ ಗಚ್ಚಿನಮಠದ ಸಮುದಾಯ ಭವನದಲ್ಲಿ ಮಸ್ಕಿ ತಾಲೂಕು ಜಂಗಮ ಸಮಾಜ ಸಂಸ್ಥೆ (ರಿ), ಹಾಗೂ ಯುವ ಘಟಕದವತಿಯಿಂದ ತಾಲೂಕ ಜಂಗಮ ಸಮಾಜದ ಸಮಾವೇಶ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ರವಿವಾರ ನಡೆಯಿತು,
ಮಸ್ಕಿ: ಪಟ್ಟಣದ ಗಚ್ಚಿನಮಠದ ಸಮುದಾಯ ಭವನದಲ್ಲಿ ಮಸ್ಕಿ ತಾಲೂಕು ಜಂಗಮ ಸಮಾಜ ಸಂಸ್ಥೆ (ರಿ), ಹಾಗೂ ಯುವ ಘಟಕದವತಿಯಿಂದ ತಾಲೂಕ ಜಂಗಮ ಸಮಾಜದ ಸಮಾವೇಶ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ರವಿವಾರ ನಡೆಯಿತು, ಸಭೆಯಲ್ಲಿ ಸಮಾವೇಶ ನಡೆಸುವ ಕುರಿತು ಸದಸ್ಯರಿಂದ ಚರ್ಚಿಸಲಾಯಿತು. ಮುಂದಿನ ತಿಂಗಳ ನಡೆಯುವ ಪ್ರಥಮ ಸಮಾವೇಶ ನಡೆಸುವ ರೂಪುರೇಶಗಳನ್ನು ಸಿದ್ಧಪಡಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.
ಇತ್ತೀಚಿಗೆ ಲಿಂಗೈಕ್ಯರಾದ ತೆಕ್ಕಲಕೋಟೆ ಕಂಬಾಳಿಮಠದ ಶ್ರೀ ಷ. ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತಾಲೂಕು ಜಂಗಮ ಸಮಾಜದವರಿಂದ ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಷ. ಬ್ರ. ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಗಚ್ಚಿನಮಠ ಆಶೀರ್ವಚನ ನೀಡಿದ ಅವರು ತಾಲೂಕ ಜಂಗಮ ಸಮಾವೇಶವನ್ನು ಎಲ್ಲರೂ ಒಗ್ಗಟ್ಟಿನಿಂದ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು ಹಾಗೂ ತೆಕ್ಕಲಕೋಟೆ ಶ್ರೀಗಳ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ತಾಲೂಕು ಜಂಗಮ ಸಮಾಜದ ಅಧ್ಯಕ್ಷರು ಘನಮಠದಯ್ಯ ಸಾಲಿಮಠ, ಉಪಾಧ್ಯಕ್ಷ ವಿಶ್ವನಾಥಸ್ವಾಮಿ ಶಂಕರದೇವರಮಠ ಬಳಗಾನೂರು, ಪ್ರ. ಕಾರ್ಯದರ್ಶಿ ಶಿವಕುಮಾರ ಶಾಸ್ತ್ರೀಮಠ, ಕಾರ್ಯದರ್ಶಿ ಚಂದ್ರಶೇಖರಯ್ಯ ಕ್ಯಾತ್ನಟ್ಟಿ, ಖಜಾಂಚಿ ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಯುವ ಘಟಕ ಕಾರ್ಯದರ್ಶಿ ವೀರಮಹೇಶ್ವರ ಕೊಟ್ಟೂರುಮಠ.
ನಗರ ಘಟಕ ಅಧ್ಯಕ್ಷರು ಕರಿಬಸಯ್ಯ ಸಿಂಧನೂರುಮಠ, ಬಳಗಾನೂರು ಘಟಕ ಅಧ್ಯಕ್ಷ ಸುರೇಶ ನಡುವಿನಮನಿ, ಚನ್ನಮಲ್ಲಯ್ಯ ಕನ್ನಾಳ, ಡಾ|| ಕುಮಾರಸ್ವಾಮಿ ಪಾಮನಕಲ್ಲೂರು, ಮರಿಸ್ವಾಮಿ ಹೊಸಳ್ಳಿ, ಅಮರೇಶ ವಿ. ಸೊಪ್ಪಿಮಠ, ಬಸವರಾಜ ಹಿರೇಮಠ, ಬಸವರಾಜ ಸಾಲಿಮಠ, ಅಮರೇಶ ಹೊಸಮಠ,
ವಿಶ್ವನಾಥ ಕಂಬಾಳಿಮಠ, ಗಂಗಾಧರ ಕಂಬಾಳಿಮಠ, ಡಾ| ಶಂಕ್ರಯ್ಯ ಹಂಚಿನಾಳ, ಶಿವಶಂಕರಯ್ಯ ಗಚ್ಚಿನಮಠ, ಅಮರಯ್ಯ ವೆಂಕಟಾಪುರ, ಶಿವಕುಮಾರ ಕಂಬಾಳಿಮಠ, ಪಂಪಯ್ಯ ಸಾಲಿಮಠ, ಡಾ| ಬಸವರಾಜ ಹಿರೇಮಠ ಉದ್ದಾಳ, ಶರಣಯ್ಯಸ್ವಾಮಿ ನಡುವಿನಮನಿ, ಜಂಬಯ್ಯಸ್ವಾಮಿ ಬಳಗಾನೂರು, ಅಮರೇಶ ಕಡಾಮುಡಿಮಠ, ಮೃತ್ಯುಂಜಯಸ್ವಾಮಿ ಅಂಕಶದೊಡ್ಡಿ, ಕರಿಬಸಯ್ಯಸ್ವಾಮಿ ಹಿರೇಕಡಬೂರು, ಶರಣಯ್ಯಸ್ವಾಮಿ ದಿನ್ನಿಮಠ, ಪಂಪಯ್ಯಸ್ವಾಮಿ ಸುಂಕನೂರು, ಘನಮಠದಯ್ಯ ಗೋನವಾರ, ಜಂಬಯ್ಯ ಗೋನವಾರ, ದೊಡ್ಡಬಸಯ್ಯ ಸಾಲಿಮಠ, ಬಸಯ್ಯ ಗುಡದೂರು ಹಾಗೂ ತಾಲೂಕ ಜಂಗಮ ಸಮಾಜದ ಬಾಂಧವರು ಭಾಗವಹಿಸಿ ಸಭೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?



