ಅಕ್ರಮ, ಹಣ ದುರ್ಬಳಕೆ : ಪಿಡಿಒ ರಾಮಪ್ಪ ಅಮಾನತ್ತು

ಮಸ್ಕಿ | ಹಾಲಾಪೂರ ಹಾಗೂ ಅಮೀನಗಡ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಂಚಾಯತ ಅಭಿವೃದ್ದಿ ಅಧಿ ಕಾರಿ ರಾಮಪ್ಪ ನಡಗೇರಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಪಾಮನಕಲ್ಲೂರು, ಅಮೀನಗಡ ಗ್ರಾಮ ಪಂಚಾಯತಿಯಲ್ಲಿ ಸಿಬ್ಬಂಧಿ ವೇತನ ಪಾವತಿ, ಪೈಪ್ ಲೈನ್ ದುರಸ್ತಿ, ರಸ್ತೆ, ತಗ್ಗು ಗಳಿಗೆ ಮರು ಹಾಕಿದ ಹಣ ಬಿಡುಗಡೆ ಮಾಡುವುದಾಗಿ ದಿನಾಂಕ:08.09.2024 ರಂದು ಅಮೀನಗಡ ಗ್ರಾಮ ಫಮಚಾಯತಿಯ ಅಧ್ಯಕ್ಷರ ಡೊಂಗಲ್ ಪಡೆದು ವಿವಿಧ ಹಂತಗಳಲ್ಲಿ ರೂ.5.00 ಲಕ್ಷಗಳನ್ನು ಅಧ್ಯಕ್ಷರ ಗಮನಕ್ಕೆ ತರದೇ ಡ್ರಾ ಮಾಡಿ, ದುರ್ಬಳಕೆ ಮಾಡಿಕೊಂಡಿರುತ್ತಾರೆ.ಈ ಕುರಿತು ಸದರಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಉಲ್ಲೇಖ (3) ರ ಮೂಲಕ ನೋಟಿಸು ಜಾರಿ ಮಾಡಿದ್ದು, ಜಾರಿ ಮಾಡಿದ ನೋಟಿಸ್‌ಗೆ ರಾಮಪ್ಪ ನಡಗೇರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಇವರು ತಮ್ಮ ಸೃಷ್ಟಿಕರಣ ಈವರೆಗೂ ಉತ್ತರ ನೀಡದ ಕಾರಣ ಜಿ.ಪಂ. ಮುಖ್ಯ ಕಾರ್ಯನಿರ್ವಾಕಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ.

Nov 30, -0001 - 00:00
 0  8
ಅಕ್ರಮ, ಹಣ ದುರ್ಬಳಕೆ : ಪಿಡಿಒ ರಾಮಪ್ಪ ಅಮಾನತ್ತು
ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಬಗ್ಗೆ ಗ್ರಾಮ ಪಂಚಾಯತ ಸದಸ್ಯರು ವಿಚಾರಿಸಿದರೆ ಅವರೊಂದಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿರವರು ಸರಿಯಾಗೆ ನಡೆದುಕೊಂಡಿರುವುದಿಲ್ಲ ಎಂದು ಪತ್ರಿಕೆ ಮಾಧ್ಯಮ ಗಳ ವರದಿ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಜಿಲ್ಲಾಧ್ಯಕ್ಷ ಎಸ್ ನಜೀರ್ ಅವರು ಹಾಗೂ ಜೈ ಕರುನಾಡು ರಕ್ಷಣಾ ಸೇನೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಬಸ್ವಂತ್ ರವರ ದೂರು ಹಿನ್ನಲೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಇವರಿಗೆ ನೋಟಿಸು ಜಾರಿ ಮಾಡಿ ಒಂದು ವಾರದೊಳಗೆ ಉತ್ತರ ನೀಡಲು ಸೂಚಿಸಲಾಗಿತ್ತು.
ಅಕ್ರಮ, ಹಣ ದುರ್ಬಳಕೆ : ಪಿಡಿಒ ರಾಮಪ್ಪ ಅಮಾನತ್ತು

ಅಮೀನಗಡ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ, ಕಾಮಗಾರಿ, ನಿವೇಶನ, ಶೌಚಾಲಯ ಹಾಗೂ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳ ಬಗ್ಗೆ ಗ್ರಾಮ ಪಂಚಾಯತ ಸದಸ್ಯರು ವಿಚಾರಿಸಿದರೆ ಅವರೊಂದಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿರವರು ಸರಿಯಾಗೆ ನಡೆದುಕೊಂಡಿರುವುದಿಲ್ಲ ಎಂದು ಪತ್ರಿಕೆ ಮಾಧ್ಯಮ ಗಳ ವರದಿ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಜಿಲ್ಲಾಧ್ಯಕ್ಷ ಎಸ್ ನಜೀರ್ ಅವರು ಹಾಗೂ ಜೈ ಕರುನಾಡು ರಕ್ಷಣಾ ಸೇನೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಬಸ್ವಂತ್ ರವರ ದೂರು ಹಿನ್ನಲೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಇವರಿಗೆ ನೋಟಿಸು ಜಾರಿ ಮಾಡಿ ಒಂದು ವಾರದೊಳಗೆ ಉತ್ತರ ನೀಡಲು ಸೂಚಿಸಲಾಗಿತ್ತು. ಆದರೆ ಸದರಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಯಾವುದೇ ವಿವರಣೆ ಸಲ್ಲಿಸದ ರಾಮಪ್ಪ ನಡಗೇರಿ ವಿರುದ್ದ ಮಸ್ಕಿ ತಾಲೂಕ ಪಂಚಾಯತ ಅಧಿ ಕಾರಿ ಪಿಡಿಓ ಸಸ್ಪೆಂಡ್‌ಗೆ ಶಿಫಾರಸ್ಸು ಮಾಡಿದ್ದರು.

ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಪರಿಶೀಲಿಸಿದಾಗ ರಾಮಪ್ಪ ನಡಗೇರಿ ಪ್ರಭಾರದಲ್ಲಿರುವ ಹಾಲಾಪೂರ ಹಾಗೂ ಅಮೀನಗಡ ಗ್ರಾಮ ಪಂಚಾಯತಿಗಳಲ್ಲಿ ಮೇಲಾಧಿ ಕಾರಿಗಳ ಆದೇಶ ಉಲ್ಲಂಘನೆ ಮಾಡಿರುವುದು ಹಾಗೂ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಕಂಡು ಬಂದಿರುವುದರಿಂದ ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಮಾಡಿರುತ್ತಾರೆ.

.

What's Your Reaction?

like

dislike

love

funny

angry

sad

wow