ಬೆಂಗಳೂರಿನ ಮಾರುತಿ ಮೆಡಿಕಲ್ಸ್ ವ್ಯವಸ್ಥಾಪಕರಿಂದ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಬಳಗಾನೂರಿನ ಪಿ,ಎಮ್,ಶ್ರೀ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಪಟ್ಟಣದ ಸರಕಾರಿ ಕಿರಿಯ,ಹಿರಿಯ ಮತ್ತು ಪ್ರೌಢಶಾಲಾ ಮಕ್ಕಳಿಗೆ ಸುಮಾರು ಹದಿನೇಳುನೂರು ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಆ ಪ್ರಯುಕ್ತ ಇಂದು ಪಟ್ಟಣದ ಪಿ,ಎಮ್,ಶ್ರೀ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ,ಶಿಕ್ಷಣಪ್ರೇಮಿ,ವೀರಣ್ಣ ಹಂಪರಗುಂದಿರವರು ಬೆಂಗಳೂರಿನ ಮಾರುತಿ ಮೆಡಿಕಲ್ಸ್ ನ ವ್ಯವಸ್ಥಾಪನಾ ಮಂಡಳಿಯವರು ಈ ಪುಣ್ಯಮಯ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಮತ್ತು ಸ್ತುತ್ಯಾರ್ಹವಾದದ್ದಾಗಿದೆ. ಅವರ ಸೇವೆ ಸಾರ್ಥಕವಾಗಬೇಕಾದರೆ ನೀವು ಚನ್ನಾಗಿ ಓದಿ ಉತ್ತಮ ಸಂಸ್ಕಾರ ಪಡೆದು ಉತ್ತಮ ದೇಶಪ್ರೇಮಿ ನಾಗರಿಕರಾಗಿ ಮಾನವ ಕುಲದ ಉದ್ದಾರಕ್ಕೆ ಶ್ರಮಿಸಬೇಕು ಎಂದು ಕಿವಿಮಾತುಗಳನ್ನು ಹೇಳಿದರು. ನಂತರ ಮಾರುತಿ ಮೆಡಿಕಲ್ಸ್ ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕೊಂಡಿಯಂತೆ ಕೆಲಸಮಾಡಿದ ಪಟ್ಟಣದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ ನಿಮ್ಮ ಸಾಧನೆಗೆ ಸಹಕರಿಸಲು ಮಾರುತಿ ಮೆಡಿಕಲ್ಸ್ ಸದಾಸನ್ನದ್ದವಾಗಿದೆ ಆದರೆ ಸಾಧನೆಗೆ ನೀವು ಸಿದ್ದರಾಗಬೇಕಾಗಿದೆ,ಈ ಸಂಸ್ಥೆಯ ಗಂಗಾವತಿ ಒಳಗೊಂಡಂತೆ ಈ ಭಾಗದ ಉಸ್ತುವಾರಿ ವಹಿಸಿರುವ ಗಂಗಾವತಿಯ ಸಾಹಿತಿ,ಉಪನ್ಯಾಸಕ,ಸಮಾಜ ಸೇವಕರೂ ಆಗಿರುವ ಪವನ ಕುಮಾರ ಗುಂಡೂರುರವರು ನಮ್ಮ ಅಹವಾಲನ್ನು ಸಮ್ಮತಿಸಿ ಸುಮಾರು ಒಂದುಸಾವಿರದ ಏಳುನೂರು ನೋಟ್ ಪುಸ್ತಕಗಳನ್ನು ಬಳಗಾನೂರಿನ ಸರಕಾರಿ ಶಾಲೆಗಳ ಮಕ್ಕಳಿಗೆ ವಿತರಿಸಲು ಕಳಿಸಿದ್ದಾರೆ. ಇದರ ಸದುಪಯೋಗ ಪಡೆಸಿಕೊಂಡು ಸಾಧಕರಾಗಿ ಅವರ ಸೇವೆಯನ್ನು ಸಾರ್ಥಕವಾಗುವಂತೆ ಮಾಡಿ ಎಂದರು. ನಂತರ ಅವರಿಗೆ ಶಾಲೆಯ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

Aug 1, 2025 - 15:49
Aug 1, 2025 - 15:55
 0  3

ಪಟ್ಟಣದ ಪಿ,ಎಮ್,ಶ್ರೀ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ,ಶಿಕ್ಷಣಪ್ರೇಮಿ,ವೀರಣ್ಣ ಹಂಪರಗುಂದಿರವರು ಬೆಂಗಳೂರಿನ ಮಾರುತಿ ಮೆಡಿಕಲ್ಸ್ ನ ವ್ಯವಸ್ಥಾಪನಾ ಮಂಡಳಿಯವರು ಈ ಪುಣ್ಯಮಯ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಮತ್ತು ಸ್ತುತ್ಯಾರ್ಹವಾದದ್ದಾಗಿದೆ.

ಅವರ ಸೇವೆ ಸಾರ್ಥಕವಾಗಬೇಕಾದರೆ ನೀವು ಚನ್ನಾಗಿ ಓದಿ ಉತ್ತಮ ಸಂಸ್ಕಾರ ಪಡೆದು ಉತ್ತಮ ದೇಶಪ್ರೇಮಿ ನಾಗರಿಕರಾಗಿ ಮಾನವ ಕುಲದ ಉದ್ದಾರಕ್ಕೆ ಶ್ರಮಿಸಬೇಕು ಎಂದು ಕಿವಿಮಾತುಗಳನ್ನು ಹೇಳಿದರು.

ನಂತರ ಮಾರುತಿ ಮೆಡಿಕಲ್ಸ್ ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕೊಂಡಿಯಂತೆ ಕೆಲಸಮಾಡಿದ ಪಟ್ಟಣದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ ನಿಮ್ಮ ಸಾಧನೆಗೆ ಸಹಕರಿಸಲು ಮಾರುತಿ ಮೆಡಿಕಲ್ಸ್ ಸದಾಸನ್ನದ್ದವಾಗಿದೆ ಆದರೆ ಸಾಧನೆಗೆ ನೀವು ಸಿದ್ದರಾಗಬೇಕಾಗಿದೆ,ಈ ಸಂಸ್ಥೆಯ ಗಂಗಾವತಿ ಒಳಗೊಂಡಂತೆ ಈ ಭಾಗದ ಉಸ್ತುವಾರಿ ವಹಿಸಿರುವ ಗಂಗಾವತಿಯ ಸಾಹಿತಿ,ಉಪನ್ಯಾಸಕ,ಸಮಾಜ ಸೇವಕರೂ ಆಗಿರುವ ಪವನ ಕುಮಾರ ಗುಂಡೂರುರವರು ನಮ್ಮ ಅಹವಾಲನ್ನು ಸಮ್ಮತಿಸಿ ಸುಮಾರು ಒಂದುಸಾವಿರದ ಏಳುನೂರು ನೋಟ್ ಪುಸ್ತಕಗಳನ್ನು ಬಳಗಾನೂರಿನ ಸರಕಾರಿ ಶಾಲೆಗಳ ಮಕ್ಕಳಿಗೆ ವಿತರಿಸಲು ಕಳಿಸಿದ್ದಾರೆ.

ಇದರ ಸದುಪಯೋಗ ಪಡೆಸಿಕೊಂಡು ಸಾಧಕರಾಗಿ ಅವರ ಸೇವೆಯನ್ನು ಸಾರ್ಥಕವಾಗುವಂತೆ ಮಾಡಿ ಎಂದರು.

ನಂತರ ಅವರಿಗೆ ಶಾಲೆಯ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

ತದನಂತರ ಉಪನ್ಯಾಸಕ,ಸಾಹಿತಿ ಸುರೇಶ ಬಳಗಾನೂರು,ಮುಖ್ಯೋಪಾಧ್ಯಾಯ ಮುತ್ತು ಅಂಗಡಿ ಮಾತನಾಡಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ,ಪಟ್ಟಣ ಪಂಚಾಯ್ತಿಯ ಉಪಾಧ್ಯಕ್ಷ ಮಂಜುನಾಥ,ಮುಖಂಡ ಸಂಜಯ ಕುಮಾರ ಜೈನ್,ವಾಜೇಂದ್ರ ರಾವ ಪಟವಾರಿ, ಸರಕಾರಿಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿಯಾದ ಮಹಾದೇವಮ್ಮ,ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶರಣಬಸವ,ಕಂದಗಲ್,ಸದಸ್ಯ ಕಾಜಪ್ಪ ದೇವರಮನಿ ಸೇರಿದಂತೆ ಉಭಯ ಶಾಲಾ ಶಿಕ್ಷಕ ವೃಂದ ಸೇರಿದಂತೆ ಹಲವು ವಿದ್ಯಾರ್ಥಿಗಳಿದ್ದರು.

ವರದಿ,,,ಸುರೇಶ ಬಳಗಾನೂರು

What's Your Reaction?

like

dislike

love

funny

angry

sad

wow