ಹಾಲಾಪೂರ: ಗ್ರಾಪಂಚಾಯತಿ ಯಲ್ಲಿ ಕರವಸೂಲಿ ಅಭಿಯಾನ
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಆದೇಶದ ಮೇರೆಗೆ ಇಂದು ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲಾಪೂರ, ತುಗ್ಗಲದಿನ್ನಿ, ಶಂಕರನಗರಕ್ಯಾಂಪ ನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಎನ್ ನೇತೃತ್ವದಲ್ಲಿ ಕರ ವಸೂಲಿಯನ್ನು ಮಾಡಿದರು.
ಮಸ್ಕಿ, ತಾಲ್ಲೂಕು ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಕರವಸೂಲಿ ಅಭಿಯಾನ ನಡೆಯಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಆದೇಶದ ಮೇರೆಗೆ ಇಂದು ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲಾಪೂರ, ತುಗ್ಗಲದಿನ್ನಿ, ಶಂಕರನಗರಕ್ಯಾಂಪ ನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಎನ್ ನೇತೃತ್ವದಲ್ಲಿ ಕರ ವಸೂಲಿಯನ್ನು ಮಾಡಿದರು.
ಮಾಧ್ಯಮದ ಪ್ರತಿಕ್ರಿಯಿಸಿ ಮಾತನಾಡಿದ ಅಭಿವೃದ್ಧಿ ಅಧಿಕಾರಿ ರಾಮಣ್ಣ ಎನ್ ಈ ಒಂದು ಅಭಿಯಾನ ಇಂದು ಜಿಲ್ಲಾದ್ಯಾಂತ ನಡೆಯುತ್ತಿದ್ದು ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಕರವಸೂಲಿ ಅಭಿಯಾನಕ್ಕೆ ಸಹಕಾರ ಕೊಟ್ಟರು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ಎನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು .
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪರಣ್ಣ ಪಾಮನಕಲ್ಲೂರು, ರಂಗಪ್ಪ ಕಂಪ್ಯೂರ್ಟ,ಗ್ಯಾನಪ್ಪ ದೊಡ್ಡಮನಿ ಗ್ರಂಥ ಪಾಲಕ, ಬಿ ಎಫ್ ಸಿ ಬಸವರಾಜ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಇದ್ದರು.
What's Your Reaction?