ಪ್ರೊ ಕಬಡ್ಡಿ ಪಂದ್ಯಾವಳಿ 2025 ಸೀಸನ್ 2 ತೆಕ್ಕಲಕೋಟೆ ನಡೆಯಿತು.

Apr 19, 2025 - 04:07
Apr 19, 2025 - 04:08
 0  17
ಪ್ರೊ ಕಬಡ್ಡಿ ಪಂದ್ಯಾವಳಿ 2025 ಸೀಸನ್ 2 ತೆಕ್ಕಲಕೋಟೆ  ನಡೆಯಿತು.

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಅವರಣದಲ್ಲಿ ಕರ್ನಾಟಕ ರಾಜ್ಯ ಅಮೋಚೋರ್ ಕಬ್ಬಡ್ಡಿ ಅಸೋಸಿಯೇಷನ್ (ರಿ) ಪುರುಷರ ಪ್ರೊ ಕಬಡ್ಡಿ ಪಂದ್ಯಾವಳಿ 2025 ಸೀಸನ್ 2 ವತಿಯಿಂದ ನಡೆಸುತ್ತಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂಎಸ್ ಸಿದ್ದಪ್ಪ ಮಾತನಾಡಿ ಕಬ್ಬಡಿ ಒಂದು ಪ್ರಾಚೀನ ಭಾರತೀಯ ಕ್ರೀಡೆ. ಇದು ದೈಹಿಕ ಸಾಮರ್ಥ್ಯ, ತಾಳಮೇಳ ಮತ್ತು ಚತುರತೆಯ ಸಮನುಯಯವನ್ನೊದಗಿಸುವ ಆಟವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಇದನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಈ ಆಟದಲ್ಲಿ ಎರಡು ತಂಡಗಳು ಇರುತ್ತವೆ. ಒಂದು ತಂಡದ ಆಟಗಾರನು ಪ್ರತಿಸ್ಪರ್ಧಿ ತಂಡದ ಕ್ಷೇತ್ರಕ್ಕೆ ಹೋಗಿ "ಕಬ್ಬಡಿ, ಕಬ್ಬಡಿ" ಎಂಬ ಪದವನ್ನು ನಿಲದ ದವಸಿಯಂತೆ ಉಚ್ಚರಿಸುತ್ತ, ಅವರೆಷ್ಟು ಜನರನ್ನು ಸ್ಪರ್ಶಿಸಿ, ತಾನೂ ಹಿಡಿಪಾಡದೆ ಹಿಂತಿರುಗುತ್ತಾನೋ, ಅಷ್ಟೆ ಅವನ ಯಶಸ್ಸು. ಇದು ಕೇವಲ ಶಕ್ತಿ ಪ್ರದರ್ಶನವಲ್ಲ; ತಂತ್ರ, ಸಮಯ ನಿಯಂತ್ರಣ ಮತ್ತು ಧೈರ್ಯದ ಕ್ರೀಡೆ ಕೂಡ ಆಗಿದೆ.ಯಂದು ಯುವಕರಿಗೆ ಪ್ರೋತ್ಸಾಹಿಸಿ ಶುಭ ಕೋರಲಾಯಿತು. 

ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷರಾದ ಎಸ್. ಆನಂದ, ವಿ. ಎಸ್. ಎಸ್. ಏನ್. ಅಧ್ಯಕ್ಷ ಪಿ. ತಿಮಪ್ಪ.ಎಂ. ಮುಖಂಡರಾದ ನರೇಂದ್ರ ಸಿಂಹ ಎಂ.ಎಸ್.ಕೊಮರಪ್ಪ, ಪಟ್ಟಣ ಪಂಚಾಯತ್ ಸದಸ್ಯರಾದ ನಸುರುದ್ದೀನ್ ರಾಘವೇಂದ್ರ ಮುಖಂಡರಾದ ಮೆಹಬೂಬ ಶೇಖರ ಗೌಡ ನವೀನ್ ರೆಡ್ಡಿ ದೇವೇಂದ್ರ ಖಾದರವಲಿ ಶಶಿ ಮತ್ತು ದೈಹಿಕ ಶಿಕ್ಷಕರಾದ ಚೆನ್ನಪ್ಪ ರಮೇಶ ಅಜ್ಮೇರಿ ಉಪೇಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಶುಭ ಹಾರೈಸಲಾಯಿತು.

What's Your Reaction?

like

dislike

love

funny

angry

sad

wow