ಜನರ ನೆಮ್ಮದಿ ಕಂಟಕವಾದ ಮರಳುಮಾಫೀಯಾದ ಕಾವು? ದೂರು ನೀಡಿದ್ದರೂ ಕ್ರಮಕ್ಕೆ ಅಧಿಕಾರಿಗಳು ಹಿಂದೆಟು
ಯಮಧೂತ ಮರಳು ಸಾಗಾಣಿಕಾ ಟಿಪ್ಪರ್ ಗಳ ಸದ್ದು ಬಳಗಾನೂರಿಗರ ನಿದ್ದೆ, ನೆಮ್ಮದಿಯನ್ನು ಕೆಡಿಸುತ್ತಿದೆ. ಮಣಗಟ್ಟಲೆ ದೂರು ನೀಡಿದ್ದರೂ ಕ್ರಮ ಜರುಗಿಸುವ ಬಹದ್ದೂರು ಗಂಡುಗಳು ಇಲ್ಲದಂತಾಗಿದೆ.
ಹೌದು ಪ್ರಿಯ ವೀಕ್ಷಕರೆ ಬಳಗಾನೂರಿನಮೂಲಕ ಹಾದುಹೋಗುವ ಮರಳು ತುಂಬಿದ ಟಿಪ್ಪರ್ ಗಳ ಹಾವಳಿಗೆ ಕಡಿವಾಣ ಹಾಕಲು ಇತ್ತ ಸಾರ್ವಜನಿಕರು ಹರಸಾಹಸಪಡುತ್ತಿದ್ದರೆ,ಅತ್ತ ಟಿಪ್ಪರ್ ಗಳು ಧೂಳೆಬ್ಬಿಸುತ್ತ ಯಾರು ಏನು ಮಾಡುವರು ನಮಗ್ಯಾರು ಕೇಡುಮಾಡುವರು ಅಂತ ತಗ್ಗು ದಿನ್ನೆಗಳೆನ್ನದೆ ಎದೆಯುಬ್ಬಿಸಿ ಹೋಗುತ್ತಿವೆಯೆಂದು ಬಳಗಾನೂರು ಪಟ್ಟಣದ ನಿವಾಸಿಗಳು ಗುರುವಾರ ಮದ್ಯಾಹ್ನ ಟಿಪ್ಪರ್ ಗಳನ್ನು ತಡೆದು ನಿಲ್ಲಿಸಿ ಚಾಲಕ ಮತ್ತು ಮಾಲಕರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ದಾವಿಸಿದ ಪಿ,ಎಸ್,ಐ ಯರಿಯಪ್ಪ ಅಂಗಡಿ ಸಮಜಾಯಿಸಿ ಹೇಳಿದರು ಆದರೂ ಜನ ಲಾರಿಗಳನ್ನು ಬಿಡುವುದಿಲ್ಲ,ನಮ್ಮ ಊರಿನ ಮೂಲಕ ಹೊಡೆದು ರಸ್ತೆ,ಮನೆ,ಆರೋಗ್ಯ ಹಾಳುಮಾಡಬೇಡಿ, ಈ ಗ್ರಾಮೀಣ ರಸ್ತೆಗಳಿಗೆ ಅಳತೆಮೀರಿದ ಟಿಪ್ಪರ್ ಗಳ ಭಾರ ತಡೆಯುವ ಸಾಮರ್ಥ್ಯವಿಲ್ಲ.
ಕೇವಲ ಏಳು ಮೈಲು ದೂರವಿರುವ ಪೋತ್ನಾಳ್ ಹೆದ್ದಾರಿ ಬಿಟ್ಟು ಈ ಗ್ರಾಮೀಣ ರಸ್ತೆ ಹಾಳುಮಾಡಲು ಏಕೆ ಬರುತ್ತೀರಿ ಎಂದು ಗ್ರಾಮಸ್ಥರು ಹೇಳಿದರು .
ವಟ್ಟ ನಮ್ ಊರ್ ದಾರಿಗೆ ಬರಬೇಡಿ ಈ ಮರಳು ದಂದೆ ರದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಾಕ್ರೋಶ ಸ್ಪೋಟಿಸುತ್ತಿದ್ದರೂ ಜನ ನಾಯಕ,ದಕ್ಷ ಅಧಿಕಾರಿಗಳು ಎಂದು ಬೀಗುವವರು ಜನರ ರಕ್ಷಣೆಗೆ ಬಾರದಿರಿವುದು ಉತ್ತರಕುಮಾರನ ಕಥೆಯನ್ನು ನೆನಪಿಸುತ್ತಿದೆ.
ಊರಿನ ಉದ್ದಾರ ಎಂಬ ಶಬ್ದ ಇಲ್ಲಿ ಉದ್ರಿಯಲ್ಲಿ ಬಿಕರಿಯಾಗುತ್ತಿದೆ. ಖರೀದಿಸಿದವರು ಬೆಲೆ ಕೊಡುವರೋ ಮಾತಿನ ಕಲೆಯಲ್ಲೇ ಮೋಡಿಮಾಡಿ ಬಾಕಿ ಮನ್ನಾ ಮಾಡುವರೋ ಯಾರಿಗೆ ಗೊತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
What's Your Reaction?



