ಹಾಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪ ನಡಿಗೇರಿಯ ಭ್ರಷ್ಟಾಚಾರಕ್ಕೆ ಬೇಸತ್ತುಹೋದ ಸದಸ್ಯರು
ಮಸ್ಕಿ: ತಾಲ್ಲೂಕಿನ ಹಾಲಾಪೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರಾಮಪ್ಪ ನಡಿಗೇರಿ ಇವರ ಭ್ರಷ್ಟಚಾರ ಮಿತಿಮೀರಿದ್ದು, ಇವರನ್ನು ಈ ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಹಾಲಾಪುರ ಗ್ರಾಮ ಪಂಚಾಯತಿ ವಾರ್ಡ್ ನಂಬರ್ 2 ರ ಚುನಾಯಿತ ಸದಸ್ಯ ಚಂದಪ್ಪ ದೊಡ್ಡಮನಿ ಇವರು ಬುಧವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಹಾಲಾಪುರ ಗ್ರಾಮ ಪಂಚಾಯಿತಿ ಸದಸ್ಯ ಚಂದಪ್ಪ ದೊಡ್ಡಮನಿ ಮಾತನಾಡಿ; ಸುಮಾರು 5 ತಿಂಗಳು ಹಿಂದೆ ಬಂದ ಹಾಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರಾಮಪ್ಪ ನಡಿಗೇರಿ ವಿರುದ್ಧ ಅನೇಕ ಸಂಘಟನೆಗಳು, ಸಾರ್ವಜನಿಕರು ಹಲವಾರು ದೂರು ನೀಡಿದ್ದು, ಇವರು ದಿನದಿಂದ ದಿನಕ್ಕೆ ಭ್ರಷ್ಟಚಾರ ಮಿತಿ ಮೀರುತ್ತಿದೆ.
ಅದರಲ್ಲಿ ಹಾಲಾಪುರ ಗ್ರಾಮ ಪಂಚಾಯತಿ ಪಿ.ಎಮ್.ವೈ ಪಸತಿ ಮನೆಗಳು ಮಂಜೂರಾಗಿದ್ದು, ಈ ವಸತಿ ಮನೆಗಳ ಫಲಾನುಭವಿಗಳನ್ನು ಸಾಮಾನ್ಯ ಸಭೆ ಮಾಡಿ ನಿರ್ಣಯ ಪಾಸು ಮಾಡಿ ನಂತರ ಈ ಫಲಾನುಭವಿಗಳನ್ನು ಖಾಲಿ ಜಾಗಗಳನ್ನು ಜಿ.ಪಿ.ಎಸ್ ಮಾಡಬೇಕಿತ್ತು. ಅದನ್ನು ಬಿಟ್ಟು ತಾವು ಹಣದಾಸೆಗೆ ಹಾಲಾಪುರ ಗ್ರಾ.ಪಂ.ಅಧ್ಯಕ್ಷ ಮತ್ತು ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ತಮ್ಮ ಸಿಬ್ಬಂದಿ ಪರಮಣ್ಣ (ಅಕೌಂಟೆಡ್), ಹಾಗೂ ಕಂಪ್ಯೂಟರ್ ಆಪ್ ರೇಟರ್ ಸೇರಿಕೊಂಡು ಖಾಸಗಿ ವ್ಯಕ್ತಿಗೆ ಮನೆಗಳ ಜಿ.ಪಿ.ಎಸ್ ಲಾಗಿನ್ ಕೊಟ್ಟು, ಸಾರ್ವಜನಿಕರಿಂದ ಒಂದು ಖಾಲಿ ಜಾಗಕ್ಕೆ ರೂ.10-15 ಸಾವಿರ ತೆಗೆದುಕೊಳ್ಳುತ್ತಿದ್ದು, ಇದು ನಮ್ಮ ಗಮನಕ್ಕೆ ಬಂದಿರುತ್ತದೆ.
ಇದಕ್ಕೂ ಮುಂಚೆ ಇವರು ಖಾತಾ ನಕಲು(11-ಬಿ), ಒಂದು ಖಾತಾ ನಕಲು ತೆಗೆಯಲು ರೂ.10-15 ಸಾವಿರ ತೆಗೆದುಕೊಳ್ಳುತ್ತಿದ್ದು, ನಂತರ 14-15ನೇ ಹಣಕಾಸು ಯೋಜನೆಯಡಿಯಲ್ಲಿ ಹಿಂದೆ ಇದ್ದ ಪಿ.ಡಿ.ಓ ವಿಶ್ವನಾಥರವರು ಪ್ಲಾನ್ ಮಾಡಿ ಆ ಪ್ಲಾನ್‌ನಲ್ಲಿರುವ ಕೆಲವು ಕಾಮಗಾರಿಗಳಿಗೆ ಪೇಮೆಂಟ್ ಮಾಡಿ ಹೋಗಿರುತ್ತಾರೆ.
ರಾಮಪ್ಪ ನಡಗೇರಿ ಹಾಲಾಪುರ ಗ್ರಾಮ ಪಂಚಾಯತಿಗೆ ಅಧಿಕಾರಿಯಾಗಿ ಬಂದ ನಂತರ ಆ ಪ್ಲಾನ್‌ನ್ನು ಚೆಂಜ್ ಮಾಡಿ ತಮಗೆ ಬೇಕಾದ ಅಂಗಡಿಗೆ ಮತ್ತು ವೆಂಡರ್‌ಗೆ ಹಣವನ್ನು ಜಮಾ ಮಾಡಿದ್ದು, ಸುಮಾರು 60-70 ಲಕ್ಷ ಕೆಲಸ ಮಾಡಿದವರಿಗೆ ಹಣವನ್ನು ಕೊಡದೇ, ತಾವೇ ಸ್ವಂತ ಬೋಗಸ್ ಬಿಲ್ಲಾ ಸೃಷ್ಟಿಸಿ, ಹಣವನ್ನು ಲೂಟಿ ಮಾಡಿರುತ್ತಾರೆ. ಇಂತಹ ಒಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರೆ ಯಾವುದೇ ಗ್ರಾಮ ಪಂಚಾಯತಿ ಉದ್ದಾರವಾಗುವುದಿಲ್ಲ.
What's Your Reaction?