ಬಾಡಿಗೆ ಹಣ ನೀಡದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಾಮಗ್ರಿ ಜಪ್ತಿ
ಹೌದು ಪ್ರಿಯ ವೀಕ್ಷಕರೇ ಸಿಂಧನೂರು, ಜ.12-ವಸತಿ ನಿಲಯಕ್ಕೆ ಬಾಡಿಗೆ ನೀಡಿದ ಕಟ್ಟಡದ ಬಾಡಿಗೆ ಹಣ ನೀಡದ ಹಿನ್ನಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆ ಗ್ರೇಡ್-2 ಸಹಾಯಕ ನಿರ್ದೇಶಕರ ಕಚೇರಿಯ ಸಾಮಾಗ್ರಿ ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ.
ಸೋಮವಾರ ಕಟ್ಟಡ ಮಾಲೀಕ ಖಾಜಾಸಾಬ್ ಶಂಶುಸಾಬ್ ಅವರು ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಯೊಂದಿಗೆ ಕಚೇರಿಗೆ ಆಗಮಿಸಿ ಪೀಠೋಪಕರಣಗಳು, ಕಂಪ್ಯೂಟರ್ ಗಳು ಮತ್ತಿತರ ವಸ್ತುಗಳನ್ನು ಹೊರಗೆ ಇಟ್ಟು, ಜಪ್ಪಿಗೆ ಮುಂದಾರು.
ಘಟನೆ ಹಿನ್ನಲೆ: ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ತಮ್ಮ ಕಟ್ಟಡವನ್ನು ಬಾಲಕರ ವಸತಿ ನಿಲಯಕ್ಕೆ ಬಾಡಿಗೆ ನೀಡಿ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಮೂರು ವರ್ಷಕ್ಕೆ ಕರಾರು ಮಾಡಿಕೊಂಡಿದ್ದರು.
18 ತಿಂಗಳ ಬಾಡಿಗೆಯ 20 ಲಕ್ಷ ರೂ ಹಣವನ್ನೂ ನೀಡಿಲ್ಲ ಎಂದು ಕಟ್ಟಡದ ಮಾಲೀಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಹಣ ಪಾವತಿಗೆ ಹೇಳಿದಾಗ್ಯೂ ಅಧಿಕಾರಿಗಳು
ನಿರ್ಲಕ್ಷ್ಯ ವಹಿಸಿದ್ದು,
ಈ ಹಿನ್ನಲೆಯಲ್ಲಿ ಕಚೇರಿಯ ಪೀಠೋಪಕರಣ ಜಪ್ತಿಗೆ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಲಕ್ಷ್ಮೀಕಾಂತ ಮಿಸ್ಕಿನ್ ಅವರು ಆದೇಶಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣಇಲಾಖೆಯ ಕುರ್ಚಿಗಳು, ಮೇಜು, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಈ ಸಂದರ್ಭದಲ್ಲಿ ವಕೀಲ ಎನ್. ರಾಮನಗೌಡ, ನ್ಯಾಯಾಲಯದ ಸಿಬ್ಬಂದಿಗಳಾದ ಬೂದಿಬಸವರಾಜ, ಬಸವರಾಜ, ಮಹಾಂತೇಶ, ಮನೋಹರ, ಸುಮಂಗಲಾ ಇದ್ದರು.
What's Your Reaction?



