ರಾಯಚೂರು ಉತ್ಸವ, ಮಸ್ಕಿಯ ಮೂರು ಮುಖದ ಹಂಸದ ಲಾಂಛನ ಆಯ್ಕೆ!
ರಾಯಚೂರು ಜಿಲ್ಲೆಯಲ್ಲಿ ಜನವರಿ 29-31ರಂದು ನಡೆಯುವ ಎಡೆದೊರೆ ನಾಡು ರಾಯಚೂರು ಉತ್ಸವ-2026 ಲಾಂಛನದಲ್ಲಿ ಮಸ್ಕಿಯ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆಯ ಮೇಲಿನ ಮೂರು ಮುಖದ ಹಂಸ ಚಿತ್ರವನ್ನು ಸೇರಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಜನವರಿ 29 ರಿಂದ 30 ಹಾಗೂ 31ರ ವರೆಗೆ ಮೂರು ದಿನಗಳ ಕಾಲ ನಡೆಯುವ ಎಡೆದೊರೆ ನಾಡು ರಾಯಚೂರು ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ರಾಯಚೂರು ಉತ್ಸವದ ಲಾಂಛನದಲ್ಲಿ ಕೊನೆಗೂ ಐತಿಹಾಸಿಕ ಮಸ್ಕಿಗೆ ಸ್ಥಾನ ಲಭಿಸಿದೆ. ಕರಡು ಪ್ರತಿಗಾಗಿ
ಸಿದ್ಧಪಡಿಸಿದ ಲಾಂಛನದಲ್ಲಿ (Emblem) ಮಸ್ಕಿಯ ಐತಿಹಾಸಿಕ ಮಹತ್ವ ಸಾರುವ ಅಶೋಕ ಶಿಲಾಶಾಸನ ಸೇರಿ ಯಾವುದೇ ಚಿಹ್ನೆ ಇಲ್ಲದಿರುವುದನ್ನು ಗಮನಿಸಿದ ಮಸ್ಕಿಯ ಸ್ಥಳೀಯರು ಮಸ್ಕಿಯ ಶಿಲೆಯನ್ನು ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.
What's Your Reaction?



