ಬಳಗಾನೂರು ಪ ಪಂ ಲೋಕಾಯುಕ್ತ ದಾಳಿ ಅಧಿಕಾರಿಗಳು ಕಡತಗಳ ಪರಿಶೀಲನೆ
ಲೋಕಾಯುಕ್ತ ಕರುಣೇಶ್ ಗೌಡ ಹಾಗು ಶ್ರೀಕಾಂತ್ ಉಪ ನಿರೀಕ್ಷಕರ ನೇತೃತ್ವದ ತಂಡ ಭೇಟಿ ನೀಡಿ ವಿಭಾಗವಾರು ಪರಿಶೀಲನೆ ನಡೆಸಿತು.
ಮಸ್ಕಿ,ಜ.6: ಬಳಗಾನೂರು ಪಟ್ಟಣ ಪಂಚಾಯಿತಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ 9:30ಯಿಂದ ರಾತ್ರಿ 9:00 ವರೆಗೆ ಹಲವು ಮಹತ್ವದ ದಾಖಲಾತಿಗಳನ್ನು ಪರಿಶೀಲಿಸಿದರು. ಲೋಕಾಯುಕ್ತ ಕರುಣೇಶ್ ಗೌಡ ಹಾಗು ಶ್ರೀಕಾಂತ್ ಉಪ ನಿರೀಕ್ಷಕರ ನೇತೃತ್ವದ ತಂಡ
ಭೇಟಿ ನೀಡಿ ವಿಭಾಗವಾರು ಪರಿಶೀಲನೆ ನಡೆಸಿತು. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸಿಬ್ಬಂದಿ ಅಧಿಕಾರಿಗಳ ಮಾಹಿತಿ ಜೊತೆಗೆ ಔಷಧೋಪಚಾರದ ಬಗ್ಗೆ ಮಾಹಿತಿ ಪಡೆದರು.
ನಂತರ ಸಾರ್ವಜನಿಕರ ಹಲವು ದೂರುಗಳ ಆಧಾರದ ಮೇಲೆ ಬಳಗಾನೂರು ಪಟ್ಟಣ ಪಂಚಾಯಿತಿ ಯಲ್ಲಿ ದಾಳಿ ನೆಡೆಸಿ ಆಸ್ತಿ ನೋಂದಣಿ, ಕರ ಸಂಗ್ರಹ, ತಾಂತ್ರಿಕ ವಿಭಾಗ ಸೇರಿ ಪ್ರತಿ ಸಿಬ್ಬಂದಿ ಬಳಿ ತೆರಳಿ ಲೋಕಾಯುಕ್ತರು ನಿತ್ಯ ಕಾರ್ಯಚಟುವಟಿಕೆ, ಬಾಕಿಯಿರುವ ಕಡತಗಳ ಮಾಹಿತಿ ಪಡೆದರು. ಇ-ಖಾತಾ, ಮ್ಯುಟೇಷನ್, ಕುಡಿಯುವ ನೀರಿನ ಸಂಪರ್ಕ ಸೇರಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಹಿತಿ ಪಡೆದರು. ಅರ್ಜಿಗಳಿಗೆ ಸಂಖ್ಯೆ ನೀಡದೆ ಹೋದರೆ ಇತ್ಯರ್ಥಪಡಿಸಿರುವ ಮಾಹಿತಿ ಹೇಗೆ ತಿಳಿಯುವಿರಿ ಎಂದು ಪಟ್ಟಣ ಪಂಚಾಯ್ತಿಯ ಸಿಬ್ಬಂದಿ ತಿರುಪತ್ತಿ SDA ವರಿಗೆ ಪ್ರಶ್ನಿಸಿದರು.
ಕುಡಿಯುವ ನೀರು ಹಾಗೂ ಬೀದಿ ದೀಪಗಳ ನಿರ್ವಹಣೆ ಹಾಗೂ ಕಂದಾಯ ಸಂಗ್ರಹದ ಕುರಿತಾಗಿ ಸಿಬ್ಬಂದಿಯಿದ ಮಾಹಿತಿ ಪಡೆದರು. ಕೆಲ ಸಿಬ್ಬಂದಿ ಅಸಮರ್ಪಕ ಮಾಹಿತಿ ನೀಡಿದ್ದರಿಂದ ಹಾಗೂ ಲೋಪ ಕಂಡು ಬಂದರೆ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಯೂ ಎಚ್ಚರಿಸಿದರು. ಕಕ್ಕಾಬಿಕ್ಕಿಯಾದ ಸಿಬ್ಬಂದಿಗಳು ಮಾಹಿತಿ ನೀಡಲು ತಡವರಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಅಜಿತ್, ಸತೀಶ್ ಅನೇಕರು ಉಪಸ್ಥಿತರಿದ್ದರು.
What's Your Reaction?



