ಸೌಹಾರ್ದದಿಂದ ಸುಸ್ಥಿರ ಸಮಾಜ ನಿರ್ಮಾಣ:ಬಸನಗೌಡ ತುರ್ವಿಹಾಳ

ಮಸ್ಕಿ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ ಸಾಮೂಹಿಕ ಪ್ರಾರ್ಥನೆ

Nov 30, -0001 - 00:00
 0  1
ಸೌಹಾರ್ದದಿಂದ ಸುಸ್ಥಿರ ಸಮಾಜ ನಿರ್ಮಾಣ:ಬಸನಗೌಡ ತುರ್ವಿಹಾಳ
ಮಸ್ಕಿಯ ಈದ್ದಾ ಮೈದಾನದಲ್ಲಿ ಶನಿವಾರ ನಡೆದ ರಂಜಾನ್ ಪ್ರಾರ್ಥನೆಯ ನಂತರ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿದರು

ಮಸ್ಕಿ:  ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಪರಸ್ಪರ ಸೌಹಾರ್ದದಿಂದ ಬಾಳಿದರೆ ಮಾತ್ರ ಸುಸ್ಥಿರ ಹಾಗೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ' ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆ‌ರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಸಾಮೂಹಿಕ ಪ್ರಾರ್ಥನೆ ಧರ್ಮ ಗುರುಗಳಾದ ಮೌಲಾನ ಆಸಿಫ್ ಅವರಿಂದ ಕುರಾನ್ ಪಟ್ಟಣ ಮತ್ತು ಪ್ರಪಂಚದ ಶಾಂತಿಗಾಗಿ ಪ್ರಾರ್ಥಿಸಲಾಯಿತು . ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಸ್ಲಿಂ ಸಮುದಾಯವನ್ನು ಶುಭ ಹಾರೈಸಿ ಮಾತನಾಡಿದ ಶಾಸಕ ತಾಲ್ಲೂಕಿನಲ್ಲಿ ಅಜಾದ್‌ ಮೌಲಾನಾ ಮೊರಾರ್ಜಿ ವಸತಿ ಶಾಲೆಯನ್ನು ಆರಂಭಿಸಲಾಗಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡಲಾಗಿದೆ,ಉಪವಾಸ, ಸಹನೆ ಮತ್ತುದಾನ ಧರ್ಮಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಹಬ್ಬವೇ ರಂಜಾನ್. ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಕಾರ ಹೆಚ್ಚಿದಾಗ ಶಾಂತಿ ಮತ್ತು ಏಕತೆ ಬಲವಾಗುತ್ತದೆ' ಎಂದು ಹೇಳಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪುರ, ವೀರೇಶ ಪಾಟೀಲ, ಕೃಷ್ಣಚಿಗರಿ, ರಮೇಶ ಕಾಸ್ಸಿ, ಶಿವರೆಡ್ಡಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್‌, ಅಜೀಜ್, ಅಬ್ದುಲ್‌ ಗನಿ, ಶಬೀರ್ ಸಾಬ್, ನಿಸಾ‌ರ್ ಅಹ್ಮದ್, ಹುಸೇನ್ ಶೇಡ್ಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow