ನಿವೃತ್ತ,ಹಾಗೂ ಮೃತ ಸೈನಿಕರಿಗೆ ಕೃಷಿ ಭೂಮಿ ಮಂಜೂರು ಮಾಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯ

ಮಸ್ಕಿ : ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) (ದಾದಾಸಾಹೇಬ್ ಎನ್ ಮೂರ್ತಿ ಸ್ಥಾಪಿತ) ಬಣದ ಪದಾಧಿಕಾರಿಗಳು ಮಸ್ಕಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ನಿವೃತ್ತ ಹಾಗೂ ಮೃತ ಮಾಜಿ ಸೈನಿಕರಿಗೆ ಕೃಷಿ ಭೂಮಿ ಮಂಜೂರು ಮಾಡವಂತೆ ಮನವಿ ಪತ್ರ ಸಲ್ಲಿಸಿದರು.

Feb 24, 2026 - 06:16
 0  26
ನಿವೃತ್ತ,ಹಾಗೂ ಮೃತ ಸೈನಿಕರಿಗೆ ಕೃಷಿ ಭೂಮಿ ಮಂಜೂರು ಮಾಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯ

ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ನಿವೃತ್ತ ಹಾಗೂ ಮೃತ ಹೊಂದಿದ ಮಾಜಿ ಸೈನಿಕರಿಗೆ ಸರಕಾರದಿಂದ ಮಂಜೂರು ಮಾಡುವ ಕೃಷಿ ಜಮೀನನ್ನು ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಭೂಮಿ ಮಂಜೂರು ಮಾಡದೇ ಇರುವುದು ಒಂದು ದೊಡ್ಡ ದುರಂತ.

ಚುನಾವಣೆಯ ಪ್ರಕೃತಿ ವಿಕೋಪ ಸೇರಿದಂತೆ ಸೈನಿಕರು ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುವದಲ್ಲದೆ ದೇಶ ರಕ್ಷಣೆಗಾಗಿ ತಮ್ಮ ಪ್ರಾಣನೇ ತ್ಯಾಗ ಮಾಡುತ್ತಾರೆ.ಇಂತಹ ಸೈನಿಕರ ಮೃತ ಕುಟುಂಬಕ್ಕೆ ಹಾಗೂ ಮಾಜಿ ನಿವೃತ್ತ ಯೋಧರಿಗೆ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ದಿನ ನಿತ್ಯ ಸರ್ಕಾರಿ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.

ಈಗಾಗಲೇ ರಾಯಚೂರು ಜಿಲ್ಲೆಯದ್ಯಾಂತ ಜಮೀನು ಮಂಜೂರಿಗಾಗಿ ಮಾಜಿ ಹಾಗೂ ನಿವೃತ್ತಿ ಹೊಂದಿದ ಸೈನಿಕರು ಅರ್ಜಿ ಸಲ್ಲಿಸಿರುವ ಅರ್ಜಿದಾರರ ಸಂಖ್ಯೆ 105 ಇದೆ ಅದರಲ್ಲಿ ಮಸ್ಕಿ ತಾಲೂಕಿನ 07 ಅರ್ಜಿಗಳು ಸಲ್ಲಿಕೆಯಾಗಿ ಸುಮಾರು ವರ್ಷಗಳಾದರೂ ಇದುವರಿಗೆ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡದೆ ಅಧಿಕಾರಿಗಳ ಬೇಜವಾಬ್ದಾರಿ,ನಿಷ್ಕಾಳಜಿತನ ಎದ್ದು ಕಾಣಿಸುತ್ತದೆ.ತಾಲೂಕಿನಲ್ಲಿ ಸುಮಾರು ಸರ್ಕಾರಿ ಜಮೀನುಗಳು ಇದೇ ಜಮೀನುಗಳನ್ನು ನಿವೃತ್ತ ಹಾಗೂ ಮೃತ ಮಾಜಿ ಸೈನಿಕರಿಗೆ ಮಂಜೂರು ಮಾಡದೇ ಇರುವುದು ಸೈನಿಕರಿಗೆ ತೋರಿದ ದೊಡ್ಡ ಅಗೌರವಾಗಿದೆ.

ಮಸ್ಕಿ ತಾಲೂಕಿನ,ಗುಡದೂರ ಹೋಬಳಿಯ ಮೇರನಾಳ ಗ್ರಾಮದ ಸರ್ವೆ ನಂ.66/*/1. ಕ್ಷೇತ್ರ 36 ಎಕರೆ 01 ಗುಂಟೆ ಸರಕಾರಿ ಗಾಯರಾಣ ಜಮೀನಿನಲ್ಲಿ ಮಸ್ಕಿ ತಾಲೂಕಿನ,ಏಳು ಜನ ಅರ್ಜಿ ಸಲ್ಲಿಸಿದ ಸೈನಿಕರಿಗೆ ಮಂಜೂರು ಮಾಡಬೇಕೆಂದು ನಗರ ಘಟಕ ಅಧ್ಯಕ್ಷ ಮಲ್ಲಿಕ್ ಮುರಾರಿ ಯವರು ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ಹೊರ ಹಾಕಿದರು. 

ಈ ವೇಳೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಬಸವಂತ್ ಎಚ್,ಈರಪ್ಪ ಕುಣೆಕೆಲ್ಲೂರು,ಮರಿಸ್ವಾಮಿ,ರಾಜು ಗುಡದೂರು,ಪ್ರಮೋದ,ಪ್ರದೀಪ್,ಅಜಯ್,ಸುರೇಶ,ಬಸಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow