ಮಾರುತಿ ಜಿನ್ನಾಪುರು ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ಮಾರ್ಚ್ 1ರಂದು ದಾವಣಗೆರೆಯಲ್ಲಿ ಬೆಳಕು ಸಂಸ್ಥೆ ಹಾಗೂ ತನುಶ್ರೀ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರಧಾನ

Feb 23, 2026 - 06:25
Feb 23, 2026 - 06:46
 0  16

ಬೆಳಕು ಸಂಸ್ಥೆ ಹಾಗೂ ತನುಶ್ರೀ ಸಂಸ್ಥೆಯ ಸಹಯೋಗದಲ್ಲಿ

ನಡೆಯಲಿರುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದ ಅಂಗವಾಗಿ

ರೈತಪರ ಹೋರಾಟಗಾರರೂ ಹಾಗೂ ಸಮಾಜಸೇವಕರೂ ಆಗಿರುವ ಶ್ರೀ ಮಾರುತಿ

ಜಿನ್ನಾಪುರು ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಕೊಡುಗೆಯನ್ನು

ಪರಿಗಣಿಸಿ "ರಾಷ್ಟ್ರಮಟ್ಟದ ದಲಿತ ರತ್ನಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 

ರಕ್ಷಣೆ ಸಾಮಾಜಿಕ ನ್ಯಾಯ, ರೈತರ ಹಕ್ಕುಗಳ ಹಾಗೂ ಹಿಂದುಳಿದ ವರ್ಗಗಳ ಹೋರಾಟದಲ್ಲಿ ಸಕ್ರಿಯವಾಗಿ

ತೊಡಗಿಸಿಕೊಂಡಿರುವ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಳಕು ಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ. 

ಕಾರ್ಯಗಳು ಸಮ್ಮೇಳನದ ಸಿದ್ಧತಾ ಭರದಿಂದ ಸಾಗುತ್ತಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಹಾಗೂ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. 

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತನುಶ್ರೀ ಸಂಸ್ಥೆಯ ಅಧ್ಯಕ್ಷರಾದ ರಾಜು ಎಸ್. ಸೂಲೇನಹಳ್ಳಿ ಮನವಿ ಮಾಡಿದ್ದಾರೆ.

What's Your Reaction?

like

dislike

love

funny

angry

sad

wow