" ಎಚ್.ಐ.ವಿ.ಏಡ್ಸ್ ಬಗ್ಗೆ ತಪ್ಪು ಕಲ್ಪನೆ ಬೇಡ,ರಕ್ತದಾನ ಸಮಾಜಕ್ಕೆ ಕೊಡುಗೆ:-ಹಾದಿಮನಿ

ಮಸ್ಕಿ : ಎಚ್‌ಐವಿ (HIV) ರೋಗ ನಿರೋಧಕ ಶಕ್ತಿಯನ್ನು ನಾಶಪಡಿಸುವ ವೈರಸ್ ಆಗಿದ್ದು ಅದರ ಬಗ್ಗೆ ತಪ್ಪು ಕಲ್ಪನೆ ಬೇಡ ಹಾಗೂ ರಕ್ತದಾನ ಮಾಡುವುದರಿಂದ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ರಕ್ತದಾನದ ಮಹತ್ವವನ್ನು ತಿಳಿಸಿದರು.

Feb 23, 2026 - 06:14
 0  9
" ಎಚ್.ಐ.ವಿ.ಏಡ್ಸ್ ಬಗ್ಗೆ ತಪ್ಪು ಕಲ್ಪನೆ ಬೇಡ,ರಕ್ತದಾನ ಸಮಾಜಕ್ಕೆ ಕೊಡುಗೆ:-ಹಾದಿಮನಿ

ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 

ಕರ್ನಾಟಕ ಸರಕಾರ,ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ,ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು,ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ,ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಯುಕ್ತ ಆಶ್ರಯದಲ್ಲಿ ನನ್ನ ಭಾರತಕ್ಕಾಗಿ ಯುವಕರು,ಡಿಜಿಟಲ್ ಸಾಕ್ಷರತೆಗಾಗಿ ಯುವಕರು ಎಂಬ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ "ಎಚ್.ಐ.ವಿ ಏಡ್ಸ್ ಹಾಗೂ ರಕ್ತದಾನದ ಮಹತ್ವ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ" ನೀಡಿ ಬುದ್ದಿನ್ನಿ (ಎಸ್) ಸ.ಪ್ರೌ.ಶಾಲೆಯ ಮುಖ್ಯಗುರುಗಳಾದ ಕೆ.ಎಸ್.ಹಾದಿಮನಿ ಯವರು ಮಾತನಾಡಿದರು.

ಅಸುರಕ್ಷಿತ ಲೈಂಗಿಕತೆ,ಸೋಂಕಿತ ರಕ್ತ ಮತ್ತು ಸೂಜಿಗಳ ಮೂಲಕ ಹರಡುತ್ತದೆ. ರಕ್ತದಾನ ಮಾಡುವುದರಿಂದ ಎಚ್‌ಐವಿ ಸೋಂಕು ತಗುಲುವುದಿಲ್ಲ.ಬ್ಲಡ್ ಬ್ಯಾಂಕ್‌ಗಳಲ್ಲಿ ಬಳಸುವ ಸೂಜಿಗಳು ಮತ್ತು ಉಪಕರಣಗಳು ಹೊಸದಾಗಿರುತ್ತವೆ ಆದ್ದರಿಂದ ಎಚ್‌ಐವಿ ಬಗ್ಗೆ ತಪ್ಪು ಕಲ್ಪನೆ ಬೇಡ,ಇನ್ನೂ ಅಸುರಕ್ಷಿತ ಲೈಂಗಿಕತೆ,ಸೋಂಕಿತ ವ್ಯಕ್ತಿಯ ರಕ್ತ ಅಥವಾ ರಕ್ತ ಉತ್ಪನ್ನಗಳನ್ನು ಪಡೆಯುವುದು,ಸೋಂಕಿತ ಸೂಜಿಗಳ ಹಂಚಿಕೆ,ಮತ್ತು ಗರ್ಭಿಣಿ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುತ್ತದೆ.ಹಾಗೂ ರಕ್ತದಾನ ಮಾಡುವಾಗ ಎಚ್‌ಐವಿ ಪರೀಕ್ಷೆ (Screening) ಕಡ್ಡಾಯವಾಗಿದ್ದು,ಇದು ಸುರಕ್ಷಿತ ರಕ್ತ ಪೂರೈಕೆಗೆ ಮತ್ತು ಸೋಂಕಿತರ ಜೀವ ಉಳಿಸಲು ಅತ್ಯಗತ್ಯ.ರಕ್ತದಾನದಿಂದ ಎಚ್‌ಐವಿ ಬರುವುದಿಲ್ಲ,ಬದಲಾಗಿ ಸರಿಯಾದ ಪರೀಕ್ಷೆಯಿಂದ ರೋಗ ಹರಡುವಿಕೆಯನ್ನು ತಡೆಯಬಹುದು.

ರಕ್ತದಾನ ಮಾಡುವಾಗ,ರಕ್ತದಾನಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಎಚ್‌ಐವಿ,ಹೆಪಟೈಟಿಸ್‌ನಂತಹ ಕಾಯಿಲೆಗಳ ತಪಾಸಣೆ ಮಾಡಿ ರಕ್ತದಾನ ಸುರಕ್ಷತೆಯ ಬಗ್ಗೆ ತಿಳಿದ ನಂತರ ರಕ್ತ ದಾನ ಮಾಡಲಾಗುತ್ತದೆ ಮತ್ತು ರಕ್ತದಾನಿಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ವರ್ತನೆಗಳಿದ್ದಲ್ಲಿ ಅಥವಾ ರಕ್ತದಲ್ಲಿ ಸೋಂಕಿನ ಲಕ್ಷಣಗಳಿದ್ದಲ್ಲಿ,ರಕ್ತದಾನದ ಮೊದಲು ತಪಾಸಣೆ ಮಾಡಿದ ಫಲಿತಾಂಶ ಬಂದ ನಂತರ ಅಂತಹವರ ರಕ್ತವನ್ನು ಸ್ವೀಕರಿಸಲಾಗುವುದಿಲ್ಲ. 

ಸುರಕ್ಷಿತವಾಗಿ ಪರೀಕ್ಷಿಸಲಾದ ರಕ್ತವನ್ನು ರೋಗಿಗಳಿಗೆ ನೀಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು.ಇದು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು 

ರಕ್ತದಾನದ ಮಹತ್ವವನ್ನು ತಿಳಿಸಿದರು. 

ನಂತರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪತ್ರಕರ್ತ ಎಸ್ ನಜೀರ್ ಮಸ್ಕಿ ಅವರು ಸಮಯ, ಶಿಸ್ತು, ಒಳ್ಳೆಯ ಸಂಸ್ಕಾರ, ಸಂಸ್ಕೃತಿ,ಆರೋಗ್ಯ, ಪರಿಸರ, ಅಧುನಿಕ ತಂತ್ರಜ್ಞಾನ, ಶಿಕ್ಷಣದ ಕುರಿತು ಮಾತನಾಡಿದರು.  

ದೇ.ಅ.ಸ.ಪ್ರ.ದ.ಕಾಲೇಜಿನ ಗ್ರಂಥಪಾಲಕರಾದ ಡಾ.ಪರಮಾನಂದ ಹಂಗರಗಿ ಯವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ವೇದಿಕೆ ಮೇಲೆ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಯಾಗಿ ಶಿವಗ್ಯಾನಪ್ಪ ಲಕ್ಕುಂದಿ,ಶಿಬಿರಾಧಿಕಾರಿಗಳಾಗಿ ಡಾ.ವೀರೇಶ ವರದಿಗಾರರಾದ ಮಲ್ಲಿಕಾರ್ಜುನ,ನಜೀರ,ಮಲ್ಲಿಕಾರ್ಜುನ ಮಡಿವಾಳ,ಬುದ್ದಿನ್ನಿ (ಎಸ್),ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರಾದ ಶ್ರೀಮತಿ ಗಂಗಮ್ಮ ಗಂಡ ವಿಶ್ವನಾಥ,ಅಮರಪ್ಪ ಅಯ್ಯಳಪ್ಪ,ಅಯ್ಯಪ್ಪ ತಂದೆ ಹನುಮಂತ,ಮೌನೇಶ ತಂದೆ ಶಿವಪ್ಪ ಕ್ವಾಟಿ,ಇಮಾಮಸಾಬ ಸಹಾಯಕ ಪ್ರಾಧ್ಯಾಪಕರು,ಸಣ್ಣಪ್ಪ ನಾಯಕ ಸಹಾಯಕ ಪ್ರಾಧ್ಯಾಪಕರು,ಶ್ರೀಮತಿ ನಾಗರತ್ನ ಉಪನ್ಯಾಸಕರು ಸಮಾಜಶಾಸ್ತ್ರ ವಿಭಾಗ,ರಾಮಣ್ಣ ನಾಯಕ ಉಪನ್ಯಾಸಕರು ಇತಿಹಾಸ ವಿಭಾಗ,ಡಾ.ಹನುಮಂತಪ್ಪ ಉಪನ್ಯಾಸಕರು ಇತಿಹಾಸ ವಿಭಾಗ,ಡಾ.ಬಸವರಾಜ ಉಪನ್ಯಾಸಕರು ಅರ್ಥಶಾಸ್ತ್ರ ವಿಭಾಗ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ದಿನ ಕನಕಾಂಬರಿ ತಂಡಕಾ ರ್ಯಕ್ರಮದ ನಿರ್ವಹಣೆ ಮಾಡಿತ್ತು.

What's Your Reaction?

like

dislike

love

funny

angry

sad

wow