ಮುಖ್ಯಾಧಿಕಾರಿ - ಪಟ್ಟಣ ಪಂಚಾಯತ್ ಅಧ್ಯಕ್ಷರ ಹಾಗು ಸಹೋದರ ಮೂಕಪ್ಪ ನ ಮೇಲೆ ಕ್ರಮ ಕೈಗೊಳ್ಳಲು ಕೆ ಆರ್ ಎಸ್ ಪಕ್ಷ ಆಗ್ರಹ..!
ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಮೂನೆ3 (ಇ-ಖಾತೆ) ನೀಡಲು ಲಂಚ ಬೇಡಿಕೆ ಇಟ್ಟು, ಹಣ ಪಡೆದುಕೊಂಡು, ನಂತರ ಹೆಚ್ಚುವರಿ ಹಣಕ್ಕಾಗಿ ಒತ್ತಾಯ ಮಾಡಿದ್ದು, ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವಕುಮಾರ ನಾಯಕ, ಆತನ ಸಹೋದರ ಮೂಕಪ್ಪ ಹಾಗೂ ಮುಖ್ಯಾಧಿಕಾರಿ ಸತ್ಯನಾರಾಯಣ ಇಂಜಿನಿಯರ್ ಶ್ರೀಮತಿ ಮೀನಾಕ್ಷಿ ಮಲ್ಲಿಕಾರ್ಜುನ್ ಕೇಸ್ ವರ್ಕರ್ ರವರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ ಆರ್ ಎಸ್ )ದ ಪದಾಧಿಕಾರಿಗಳು ಹಾಗು ಅಂತರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಜಿಲ್ಲಾಧ್ಯಕ್ಷ ನಜೀರ್ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಸಿದರು
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧನೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಖಾಜಾಸಾಬ್ ಸಖೀನ್ ಇವರಿಗೆ ಬಳಗಾನೂರು ಗ್ರಾಮದ ಸರ್ವೆ ನಂ. 293//1 5 293// 6 ಏಕರೇ ಭೂಮಿಗೆ ನಮೂನೆ ನೀಡುವ ಬದಲಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಪ್ರತಿ ಎಕರೆಗೆ 1.20 ಲಕ್ಷಗಳಂತೆ ಒಟ್ಟು 7.20 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಎಂದು ತಿಳಿಸಿದರು. ಖಾಜಾಸಾಬ್ ಅವರು ಪ್ರಾರಂಭದಲ್ಲಿ 5 ಲಕ್ಷವನ್ನು ಮುಖ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ಮುಂಗಡವಾಗಿ ನೀಡಿದರೂ, ನಂತರ ಉಳಿದ 5 ಲಕ್ಷ ಕೊಡಬೇಕೆಂದು ಮತ್ತೊಮ್ಮೆ ಒತ್ತಾಯ ಮಾಡಲಾಗಿದೆ. ಹಣ ನೀಡಲು ನಿರಾಕರಿಸಿದಾಗ, ಅಧ್ಯಕ್ಷ ಶಿವಕುಮಾರ ಮತ್ತು ಅವರ ಸಹೋದರ ಮೂಕಪ್ಪ ಖಾಜಾಸಾಬ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳಾದ ವಿಶ್ವನಾಥ್ ನಾಯ್ಡು ಹಾಗು ಬಸವರಾಜ್ ಅವರು ಆರೋಪಿಸಿದರು.
ದಿನಾಂಕ 18-09-2025, ಖಾಜಾಸಾಬ್ ಅವರು ಪಟ್ಟಣ ಪಂಚಾಯತ್ ಕಚೇರಿಗೆ ತೆರಳಿದಾಗ ಅಧ್ಯಕ್ಷ ಮತ್ತು ಸಹೋದರರು 'ಇನ್ನೂ 5 ಲಕ್ಷ ಕೊಡದೇ ಇದ್ದರೆ ನಮೂನೆ ಕೊಡೋದಿಲ್ಲ'' ಎಂದು ಬೆದರಿಕೆ ಹಾಕಿದ್ದು, ಬಳಿಕ ಇಬ್ಬರೂ ಖಾಜಾಸಾಬ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಖಾಜಾಸಾಬ್ ಅವರು ತಕ್ಷಣ ಬಳಗಾನೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಯತ್ನಿಸಿದರೂ, ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ವಿಳಂಬ ಮಾಡಿದ್ದು, ನಂತರ ಜಿಲ್ಲಾ ಪೊಲೀಸ್ ಮೇಲಾಧಿಕಾರಿಗಳ ಹಸ್ತಕ್ಷೇಪದ ಬಳಿಕ ಮಾತ್ರ ದಾಖಲಾಗಿದೆ ಎಂದು ಆರೋಪಿಸಿದರು. ಅಧ್ಯಕ್ಷ ಶಿವಕುಮಾರ ಹಾಗೂ ಮೂಕಪ್ಪ ತಮ್ಮ ಪ್ರಭಾವವನ್ನು ದುರುಪಯೋಗ ಪಡಿಸಿಕೊಂಡು ಖಾಜಾಸಾಬ್ ಅವರ ಮೇಲೆಯೇ ಸುಳ್ಳು ಜಾತಿ ಆಧಾರಿತ ಕೇಸು ದಾಖಲಿಸಿರುವುದಾಗಿ ತಿಳಿಸಿದರು.
ಈ ಘಟನೆಯ ಸಂಪೂರ್ಣ ದೃಶ್ಯಾವಳಿ
ಬಳಗಾನೂರು ಪಟ್ಟಣ ಪಂಚಾಯತಿ ಕಚೇರಿಯ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಅದರ ನಕಲುಗಳು ಹಾಗೂ ಆಡಿಯೋ ಸಾಕ್ಷ್ಯಗಳು ನಮ್ಮಲ್ಲಿ ಲಭ್ಯವಿವೆ ಎಂದು ಅವರು ಹೇಳಿದರು. ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸದಸ್ಯರಿಗೂ ತೊಂದರೆ ಉಂಟಾಗಿದೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗು ಅಂತರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಿ, ಅಧ್ಯಕ್ಷ ಶಿವಕುಮಾರ, ಮೂಕಪ್ಪ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಧ್ಯಕ್ಷರ ಸದಸ್ಯತ್ವ ರದ್ದುಪಡಿಸಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಾಗರಿಕ ಸೇವಾ ಕಾಯ್ದೆಯಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಮನವಿ ಮಾಡಿದರು. ಪ್ರಭಾವಿಗಳ ಒತ್ತಡದಿಂದ ನ್ಯಾಯ ಸಿಗದ ಸ್ಥಿತಿ ಉಂಟಾಗಬಾರದು. ಬಾಧಿತ ಖಾಜಾಸಾಬ್ ಅವರಿಗೆ ನ್ಯಾಯ ದೊರಕುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳಾದ ವಿಶ್ವನಾಥ್,ಬಸವರಾಜ್, ರಾಘವೇಂದ್ರ ಕುಂದಾಪುರ, ಶರಪ್ಪ ಕವಿತಾಳ, ರಾಮಸ್ವಾಮಿ ಆರೋಲಿ, ಸೇರಿದಂತೆ ಇತರರು ಇದ್ದರು.
What's Your Reaction?



