ಮಸ್ಕಿ ಪುರಸಭೆಯ 2026-27ನೇ ಬಜೆಟ್ ಪೂರ್ವಭಾವಿ ಸಭೆ

ಸಾರ್ವಜನಿಕರ ಮೂಲ ಸೌಕರ್ಯಗಳನ್ನು ಕಲ್ಪಿಸುವ ಬಜೆಟ್ ಮಂಡನೆ ಯಾಗಲಿ ಎಮ್ ಡಿ. ಮೊಹಮ್ಮದ್ ಖಾಜಾ ಶೇಡ್ಮಿ ಸಲಹೆ ಮಸ್ಕಿ ಪುರಸಭೆಯ 2026-27ನೇ ಸಾಲಿನ ಬಜೆಟ್ ಅಂದಾಜಿಸುವ ಸಂಬಂಧ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು. ಸ್ವಚ್ಛತೆ, ಪಾರ್ಕ್ ಅಭಿವೃದ್ಧಿ, ಎಲ್ಲಾ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಲಹೆ ಸೂಚನೆ ಕೇಳಿ ಸಾರ್ವಜನಿಕರಿಂದ ಬಂದವು.

Feb 26, 2026 - 08:11
 0  4
ಮಸ್ಕಿ ಪುರಸಭೆಯ 2026-27ನೇ ಬಜೆಟ್ ಪೂರ್ವಭಾವಿ ಸಭೆ

'ಪಟ್ಟಣ ಪುರಸಭೆ' ಸಭಾಂಗಣದಲ್ಲಿ ನಡೆದ ಆಯಾ-ವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಪ್ರತಿನಿಧಿಯಾಗಿ ಎಮ್ ಡಿ. ಮೊಹಮ್ಮದ್ ಖಾಜಾ ಶೇಡ್ಮಿ ಮಸ್ಕಿ 2026-27ನೇ ಸಾಲಿನ ಬಜೆಟ್ ಕುಡಿಯುವ ನೀರು ರಸ್ತೆ, ಒಳಚರಂಡಿ, ಸ್ವಚ್ಛತೆ, ಸೇರಿದಂತೆ ಅಂಗವಿಕಲರಿಗೆ ಮೂಲಭೂತ ಸೌಕರ್ಯಗಳು ಹಾಗೂ ಜೊತೆ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತಹ ಬಜೆಟ್ ಮೀಸಲಿ ಇಡುವುದರ ಜೊತೆಗೆ ಉಳಿತಾಯ ಬಜೆಟ್ ಆಗಲಿ ಎಂದು ಸಲಹೆ ನೀಡಿದರು. 

4 ನೇ ವಾರ್ಡಿನ ನಿವಾಸಿ ವೀರಭದ್ರಪ್ಪ ಕೊಠಾರಿ ಮಾತನಾಡಿ, ನೀರಿನ ಸಮಸ್ಯೆ, ಸ್ವಚ್ಚತೆ, ವಿದ್ಯುತ್ ದೀಪ, ಸಿ ಸಿ ರಸ್ತೆ, ಅಶೋಕ ವೃತ್ತ ದಲ್ಲಿರುವ ಶೌಚಾಲಯ ನಿರ್ವಹಣೆ ಈ ಒಂದು ಬಜೆಟ್ ನಲ್ಲಿ 4ನೇ ವಾರ್ಡಿನಲ್ಲಿ ವಿಶೇಷ ಅನುದಾನ ಒದಗಿಸಿಕೊಡಬೇಕು ಎಂದು ಸಲಹೆ ನೀಡಿದರು.

03ನೇ ವಾರ್ಡಿನ ಪದ್ಮ ಮಾತನಾಡಿ, ಹಳೆ ಬಸ್ 'ನಿಲ್ದಾಣದಲ್ಲಿ ಬಸ್ ತಂಗದಾಣ ನಿರ್ಮಿಸಲು ಹೆಚ್ಚಿನ ಅನುದಾನ, ಮತ್ತು ಪಟ್ಟಣದ ಅಶೋಕ ವೃತದಿಂದ ಬಸವೇಶ್ವರ ವೃತ್ತದ ವರೆಗೆ ಜಲಧಾರೆ ಹಾಗೂ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ ರಸ್ತೆಗಳನ್ನು ದುರಸ್ತಿ ಪಡಿಸಬೇಕು. ಚರಂಡಿ ಸ್ವಚ್ಛತೆ ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು.

ಪಟ್ಟಣದ ವ್ಯಾಪ್ತಿಯ 17 ಮತ್ತು 19ನೇ ವಾರ್ಡಿನಲ್ಲಿ ರಸ್ತೆ ಚರಂಡಿ, ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಡಬೇಕೆಂದು ಪುರಸಭೆ ಸದಸ್ಯೆ ರೇಣುಕಮ್ಮ ಕೋರಿದರು.

ಮಸೂದ್ ಪಾಷಾ ಮಾತನಾಡಿ, ಪಟ್ಟಣದ 23ನೇ ವಾರ್ಡ್‌ ನಲ್ಲಿ ವ್ಯಾಪ್ತಿಯಲ್ಲಿ ಡಾಂಬರೀಕರಣ, ಸಿ.ಸಿ ರಸ್ತೆ ನಿರ್ಮಾಣ ಮಾಡಬೇಕು. ಸ್ಮಶಾನಗಳಿಗೆ ಬೀದಿ ದೀಪ, ರಸ್ತೆ, ಕುಡಿಯುವ ನೀರು, ಇತರೆ ಮೂಲ ಸೌಕರ್ಯ ನೀಡಿ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸಿದರು.

ಡಾ.ಮಲ್ಲಿಕಾರ್ಜುನ್ ಇಲ್ಲಿ ಮಾತನಾಡಿ, ಸೌಟ್ಸ್ ಅಂಡ್ ಗೈಡ್ಸ್ ಕಾರ್ಯಕ್ರಮಕ್ಕೆ ಹಾಗೂ ಚಟುವಟಿಕೆಗಳಿಗೆ ಅನುದಾನ ಒದಗಿಸಬೇಕು ಮತ್ತು ರಸ್ತೆ ಬದಿಯಲ್ಲಿರುವಂತಹ ಚಿಕನ್. ಹಾಗೂ ಮಟನ್ ಅಂಗಡಿಗಳ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು, ತ್ಯಾಜ್ಯ ವಸ್ತುಗಳನ್ನು ಹಳ್ಳಕ್ಕೆ ಎಸೆಯಬಾರದು ಪುರಸಭೆ ವತಿಯಿಂದ ಬರುವಂತಹ ಗಾಡಿಗಳಿಗೆ ಹಾಕಬೇಕು ಹಾಗೂ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಿ ಪುರಸಭೆ ಅಧಿ ಕಾರಿಗಳು ಹಳ್ಳವನ್ನು ಸ್ವಚ್ಛವಾಗಿ ಇಡಲು ಅನುದಾನ ಒದಗಿಸಬೇಕೆಂದರು.

 ಮಸ್ಕಿ ಪಟ್ಟಣದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಏನ್ ಹೆಚ್ 150 ರಸ್ತೆ ಹಾದು ಹೋಗಿರುವುದರಿಂದ ಅಪಘಾತಗಳನ್ನು ತಡೆಯಲು ಶಾಲಾ ವಿದ್ಯಾರ್ಥಿ ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಶಾಲೆಗಳ ಮತ್ತು ಆಸ್ಪತ್ರೆ, ಸಾರ್ವಜನಿಕರ ಕಾರ್ಯಾಲಯಗಳ ಮುಂದೆ ರಸ್ತೆ ಸೂಚನಾ ಫಲಕ ಹಾಗು ಸ್ಪೀಡ್ ಬ್ರೇಕ್ ಅಳವಡಿಸಲು ಆದ್ಯತೆ ನೀಡುವಂತೆ ಪತ್ರಕರ್ತ ಎಸ್ ನಜೀರ್ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಚೇತನ್ ಪಾಟೀಲ್, ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು, ಪುರಸಭೆ, ಉಪಾಧ್ಯಕ್ಷೆ ಶ್ರೀಮತಿ ಗೀತಮ್ಮ ಶಿವರಾಜ ಬುಕ್ಕಣ್ಣ, ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ಪುರಸಭೆ ಸದಸ್ಯರು, ಅಧಿಕಾರಿಗಳು, ಮಸ್ಕಿ ಪಟ್ಟಣದ ನಿವಾಸಿಗಳು ಉಪಸ್ಥಿತರಿದ್ದ

ರು.

What's Your Reaction?

like

dislike

love

funny

angry

sad

wow