ಮಸ್ಕಿ Eid-ul-Fitr ಶ್ರದ್ಧಾ, ಭಕ್ತಿಯಿಂದ ಪವಿತ್ರ ರಂಜಾನ್ ಆಚರಣೆ. ವಕ್ಸ್ ಬಿಲ್ ಗೆ ವಿರೋಧ; ಕಪ್ಪು ಪಟ್ಟಿ ಧರಿಸಿ ನಮಾಜ್
ಮಸ್ಕಿ: ರಂಜಾನ್ ತಿಂಗಳ ಉಪವಾಸ ಕೊನೆಗೊಳಿಸುವ ಈದ್ ಉಲ್ ಫಿತರ್ ಹಬ್ಬ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 9:30 ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಿತು.

ರಂಜಾನ್ ಉಪವಾಸ ಅಂತ್ಯ:ಮುಸ್ಲಿಮರ ಪವಿತ್ರ
ರಂಜಾನ್ ಹಬ್ಬವನ್ನು ಸಂಭ್ರಮ -ಸಡಗರದೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. 30 ದಿನಗಳ ಉಪವಾಸದ ಬಳಿಕ ಚಂದ್ರನ ದರ್ಶನ ಪಡೆದ ಮುಸ್ಲಿಂ ಸಮುದಾಯದವರು, ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು, ಸ್ನೇಹಿತರು ಮತ್ತು ಸಂಬಂಧಿಗಳ ಜೊತೆ ಸೇರಿ ಪಟ್ಟಣದ ಜಾಮಿಯ ಮಸೀದಿಗೆ ತೆರಳಿದ ಮುಸ್ಲಿಮರು ಅಲ್ಲಿಂದ ಈದ್ಗಾ
ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಜಾಮಿಯಾ ಮಸೀದಿಯ ಧರ್ಮಗುರು ಮೌಲಾನ ಆಸಿಫ್ ಅವರು ರಂಜಾನ್ ಹಬ್ಬದ ನಮಾಜ್ ಭೋದಿಸಿ ಮಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ ಶಾಂತಿದೂತರಾಗಿ ಜಗತ್ತಿಗೆ ನೀಡಿದ ಸಂದೇಶಗಳನ್ನು ನಾವಿಂದು ಅರ್ಥ ಮಾಡಿಕೊಳ್ಳ ಬೇಕಾಗಿದೆ. ದಾನ ಧರ್ಮದ ಮೂಲಕ ಬಡವರು ಅಸಹಾಯಕರನ್ನು ಹುಡುಕಿ ಅವರಿಗೆ ಹೊಸಬಟ್ಟೆ ಮತ್ತು ಊಟ ನೀಡುವ ಮೂಲಕ ಆಚರಿಸಲಾ ಗುವ ಈ ಹಬ್ಬವನ್ನು ಪ್ರತಿಯೊಬ್ಬರು ಭಕ್ತಿಪೂರ್ವಕ ವಾಗಿ ಸಂತಸದಿಂದ ಆಚರಣೆ ಮಾಡಿ ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸಮಾಜ ವನ್ನು ನಾವು ಕಟ್ಟಬೇಕಾಗಿದೆ. ಬಡವರು ಶ್ರೀಮಂತ ರೆನ್ನದೆ ರಂಜಾನ್ ಉಪವಾಸವು ಒಂದು ತಿಂಗಳ ಕಾಲ ನಡೆದಿದೆ ಎಂದು ಹೇಳಿದರು. ನಂತರ ಇಡೀ ಪ್ರಪಂಚದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಿದರು.
ನಂತರ ಮಾತನಾಡಿದ ಅಬ್ದುಲ್ ಗನಿ ಸಾಬ್ ಹಿರಿಯ ಮುಖಂಡರು ನಾಡಿನ ಜನತೆಗೆ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯಗಳು ಹೇಳುವುದರ ಮೂಲಕ ಈ ಬಾರಿ ಯುಗಾದಿ (ಹೋಳಿ) ಮತ್ತು ರಂಜಾನ್ ಈ ಎರಡು ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ನಾಡಿನ ಜನರು ಶಾಂತಿ-ನೆಮ್ಮದಿ ಯಿಂದ ಬದುಕಲು ಆಶೀರ್ವದಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಸ್ ಮಸೂದೆ ವಿರೋಧಿಸಿ ನಾವುಗಳು ವಕ್ಸ್ ಮಸೂದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯಾಗಿ ದೇಶಾದ್ಯಂತ ಧಾರ್ಮಿಕ ಮುಖಂಡರು ಕಪ್ಪು ಪಟ್ಟಿಗಳನ್ನು ಧರಿಸಲು ಜನರಿಗೆ ಸೂಚನೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ
ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಕಾಯಿದೆ ಕುರಿತು ಹೇಳಿದರು.
ಯುಗಾದಿ ಮತ್ತು ರಂಜಾನ್ ಹಬ್ಬಗಳ ಪ್ರಯುಕ್ತ ಪೊಲೀಸ್ ಇಲಾಖೆ ಸಿ ಪಿ ಐ ಬಾಲಚಂದ್ರ ಡಿ ಲಕ್ಕಂ ಮತ್ತು ಪಿ ಎಸ್ ಐ ಮುದ್ದು ರಂಗಸ್ವಾಮಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದು ಬಸ್ತ್ ಕೈಗೊಂಡಿದ್ದರು.
What's Your Reaction?






