ಕಳಪೆ ರಸ್ತೆ ಕಾಮಗಾರಿ: ಸರಕಾರದ ಹಣ ಲೂಟಿ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಜಿಲಾನಿ ಪಾಷಾ ಗಂಭೀರ ಆರೋಪ..!
ಲಿಂಗಸುಗೂರು, ಮಾ.24: ತಾಲೂಕಿನ ಚಿಕ್ಕಹೆಸರೂರುದಿಂದ ನಿಲೋಗಲ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆ ಆಗಿ ನಡೆಯುತ್ತಿದ್ದು, ಸರಕಾರದ ಹಣವನ್ನು ಗುತ್ತಿಗೆದಾರರು ಮತ್ತು ಸಂಬಂಧಿತ ಅಧಿಕಾರಿಗಳು ಸೇರಿ ಲೂಟಿ ಮಾಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕ ಅಧ್ಯಕ್ಷ ಜಿಲಾನಿ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.
ನಿಯಮಗಳ ಉಲ್ಲಂಘನೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮ ಗಾರಿಯ ಗುತ್ತಿಗೆದಾರ ಕರಿಯಪ್ಪ ವಜ್ಜಲ ಅಂದಾಜು ಪತ್ರಿಕೆಯ ನಿಯಮಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಕಳಪೆ ಸಾಮಗ್ರಿಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೆಟ್ಟಿಲಿಂಗ್, ರೋಲರಿಂಗ್, ಮರುರೋಲರಿಂಗ್ ಮಾಡಬೇಕು. ಬಳಿಕ ಕನಿಷ್ಠ 1 ಇಂಚು ದಪ್ಪದ ಡಾಂಬರೀಕರಣ ಮಾಡುವುದು ಕಡ್ಡಾಯ. ಆದರೆ, ಈ ಯಾವುದೇ ನಿಯಮಗಳನ್ನು ಗುತ್ತಿಗೆದಾರರು ಪಾಲಿಸಿಲ್ಲ
ಕಿತ್ತು ಬರುವ ಡಾಂಬರ್, ಅಧಿಕಾರಿಗಳ ನಿರ್ಲಕ್ಷ್ಯ: ಇತ್ತೀಚೆಗೆ ರಸ್ತೆಗೆ ಹಾಕಿದ ಡಾಂಬರ್ ಪದರವು ಕೈಯಿಂದಲೇ ಕಿತ್ತುಬರುವ ಸ್ಥಿತಿಯಲ್ಲಿರುವುದು ರೈತ ಮುಖಂಡ ವಿಡಿಯೋ ಮಾಡಿ ಸಮಾಜಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಕಾಮಗಾರಿಯ ಮೇಲ್ವಿಚಾರಣೆ ಮಾಡಬೇಕಾದ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಣ್ಣುಚ್ಚಿಕೊಂಡು ಕುಳಿತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಸ್ಥಳ ಪರಿಶೀಲನೆ ನಡೆಸದೆ, ಗುತ್ತಿಗೆದಾರರೊಂದಿಗೆ ಅಕ್ರಮದಲ್ಲಿ ಕೈಜೋಡಿಸಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕ್ರಮಕ್ಕೆ ಒತ್ತಾಯ, ತನಿಖೆಗೆ ಆಗ್ರಹ:
ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜತೆಗೆ ಸಂಬಂಧಿತ ಇಲಾಖೆಯವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಶಾ ಆವರು ಎಲ್ಲಾ ಗ್ರಾಮಗಳನ್ನು ಸುವರ್ಣ ಗ್ರಾಮಗಳನ್ನಾಗಿ ಮಾಡುತ್ತೇನೆಂದು ಹೇಳಿ ತಮ್ಮನಿಗೆ ಕಾಮಗಾರಿಯ ಗುತ್ತಿಗೆ ನೀಡಿದ್ದಾರೆ. ಅವರು ಕಳಪೆ ಕಾಮಗಾರಿ ಮಾಡಿ ಸರಕಾರದ ಹಣ ಲೂಟಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೋಪಸಿದ್ದಾರೆ.
What's Your Reaction?



