ದೇಶದ ಅತ್ಯುತ್ತಮ ಪೊಲೀಸ್ ಠಾಣೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಕವಿತಾಳ ಪೊಲೀಸ್ ಠಾಣೆ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪೊಲೀಸ್ ಠಾಣೆ,ಕೇಂದ್ರ ಗೃಹ ಸಚಿವಾಲಯದಿಂದ ಆಯ್ಕೆಮಾಡುವ ಅತ್ಯುತ್ತಮ ಠಾಣೆಗಳ ಪಟ್ಟಿಯಲ್ಲಿ 2025 ನೇ ಸಾಲಿನಲ್ಲಿ ಸ್ಥಾನ ಪಡೆದಿದೆ. ಕವಿತಾಳ ಪಿಎಸ್ಐ ಗುರು ಚಂದ್ರು ಯಾದವ್ ಅವರರು ಗ್ರಹ ಮಂತ್ರಿ ಅಮಿತ್ ಶಾ ಅವರಿಂದ ಗೌರವ ಸನ್ಮಾನ ಮತ್ತು ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕದಿಂದ ಆಯ್ಕೆಯಾದ ಏಕೈಕ ಠಾಣೆ ಇದಾಗಿದ್ದು,ಹಲವು ಮಾನದಂಡಗಳ ಆಧಾರದ ಮೇಲೆ ಇದು ದೇಶದ ಟಾಪ್ ಮೂರು ಠಾಣೆಗಳಲ್ಲಿ ಒಂದಾಗಿದೆ.
ಈ ಮೂರು ಠಾಣೆಗಳಿಗೆ ನವೆಂಬರ್ 28 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ಈ ಸಾಧನೆ ನಮ್ಮ ಕರ್ನಾಟಕ ಪೊಲೀಸ್ ಇಲಾಖೆಗಷ್ಠೇ ಅಲ್ಲ ಇಡೀ ಕರುನಾಡಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ದಕ್ಷ,ಪ್ರಾಮಾಣಿಕ,ಜನಸ್ನೇಹೀ ಪೊಲೀಸ್ ಆಗಿ ಕೆಲಸಮಾಡುವವರು ಎಲ್ಲೇ ಇದ್ದರೂ ದೇಶವೇ ಗುರಿತಿಸಿ ಗೌರವಿಸುತ್ತದೆ ಎಂಬ ಮಾತಿಗೆ ಕವಿತಾಳ ಆರಕ್ಷಕ ಠಾಣೆ ಮತ್ತು ಅಲ್ಲಿನ ಸಿಬ್ಬಂಧಿಗಳು ನಿದರ್ಶನವಾಗಿದ್ದಾರೆ.
ಇವರ ಈ ಸಾಧನೆ ರಾಜ್ಯದ ಉಳಿದ ಠಾಣೆಗಳ ಸಿಬ್ಬಂಧಿಗಳಿಗೆ ಮಾದರಿಯಾಗಬೇಕಾಗಿದೆ. ಯಾವ ಅಧಿಕಾರದ,ಹಣದ,ತೋಳ್ಬಲದ,ಗುಲಾಮರಾಗದೆ ನೊಂದು,ಬೆಂದು,ಬಸವಳಿದು ಬಂದವರಿಗೆ ರಕ್ಷಣೆ ನೀಡಿ ನ್ಯಾಯಕೊಡಿಸುವ ಕೆಲಸವಾದರೆ ಕರುನಾಡು ನಿಜಕ್ಕೂ ಸುಭಿಕ್ಷೆಯಿಂದ ಇರಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಇಡೀ ದೇಶಕ್ಕೆ ರವಾನಿಸುತ್ತಿದೆ.
What's Your Reaction?



