ಸರಕಾರಿ ಶಾಲೆಯ ಬಗ್ಗೆ ಅಪಪ್ರಚಾರ ಸಹಿಸಲ್ಲ : ಶ್ರೀಮತಿ ಮಹಾದೇವಮ್ಮ
ರಾಯಚೂರು ಜಿಲ್ಲೆಯ ಬಳಗನೂರಿನ ಸರಕಾರಿ ಪ್ರೌಢಶಾಲೆಯ ಕುರಿತ್ತು ದಿನಾಂಕ 29/11/2025 ರಂದುಪ್ರಾದೇಶಿಕ ದಿನಪತ್ರಿಕೆಯೊಂದರಲ್ಲಿ ನಿವೃತ್ತಿ ಅಂಚಿನಲ್ಲಿ ಮುಖ್ಯಗುರುಗಳು ಅಳಿವಿನಂಚಿನಲ್ಲಿ ಮಕ್ಕಳ ಭವಿಷ್ಯ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟ ವಾಗಿತ್ತು.
ಹೌದು ಪ್ರಿಯಾ ವೀಕ್ಷರೇ ಪ್ರಜಾಪ್ರತಿಧ್ವನಿ ಕನ್ನಡ ಸುದ್ಧಿ ವಾಹಿನಿಯು ವಿಶೇಷ ವರದಿ ಯೊಂದನ್ನ ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.
ಈ ವರದಿ ಇಂದ ನಮ್ಮ ಮನಸಿಗೆ ಬಹಳ ನೋವನ್ನುಂಟು ಮಾಡಿದೆ. ಎಂದು ಬಳಗಾನೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮಹಾದೇವಮ್ಮರವರು ಸೇರಿದಂತೆ ಶಾಲಾ ಶಿಕ್ಷಕರು ಮನದ ದುಖವನ್ನು ತೋಡಿದ್ದಾರೆ.
ಮಂಗಳವಾರ ಸಂಜೆ ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾದ ವಿಷಯವಾಗಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಓದಿನಲ್ಲಿ, ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾಲೂಕಾ,ಜಿಲ್ಲಾ,ವಿಭಾಗಮಟ್ಟದಲ್ಲಿ ಸಾಧನೆಮಾಡುವ ಮೂಲಕ ಶಾಲೆಯ,ಊರಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ.
ಒಬ್ಬ ಜಾಣವಿದ್ಯಾರ್ಥಿಯ ಆಧಾರದ ಮೇಲೆ ಇಡೀ ಶಾಲೆಯ ಗುಣಮಟ್ಟವನ್ನು ಹೇಗೆ ನಿರ್ಧರಿಸಲಾಗುವುದಿಲ್ಲವೋ ಅದರಂತೆ ಒಬ್ಬ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಯ ಆಧಾರದಿಂದ ಇಡೀ ಶಾಲೆಯ ಗುಣಮಟ್ಟವನ್ನೂ ನಿರ್ಧರಿಸಲಾಗದು.
ಒಂದುಶಾಲೆಯ ಸಮಗ್ರ ಸ್ಥಿತಿಗತಿ,ಗುಣಾವಗುಣಗಳನ್ನು ತಳಸ್ಪರ್ಶಿ ಅಧ್ಯಯನದ ನಂತರ ನಿರ್ಧರಿಸಬಹುದೇ ವಿನಹ ಏಕಾಏಕಿ ನಿರ್ಧರಿಸಲಾಗದು.ನಾನೂ ಸರಕಾರಿಶಾಲೆಯಲ್ಲೇ ಓದಿ ಮುಖ್ಯೋಪಾಧ್ಯಾಯನಿಯಾಗಿದ್ದೇನೆ ಸರಕಾರಿ ಶಾಲೆಗಳೆಂದರೆ ಸಾಮಾನ್ಯವಾದವುಗಳಲ್ಲ ಅವುಗಳ ಅಪಪ್ರಚಾರ ಸಲ್ಲದು ಎಂದರು.
ಶಿಕ್ಷಕರ ನೌಕರಿಗೆ ನಿವೃತ್ತಿ ಇರುತ್ತದೆಯೇ ವಿನಹ ಶಿಕ್ಷಕರಿಗಲ್ಲ,ಇಲ್ಲಿ ಬಹುತೇಕ ಬಡವರ ಮಕ್ಕಳು ಅಭ್ಯಸಿಸಲು ಬರುತ್ತಾರೆ ಈ ರೀತಿ ಅಪಪ್ರಚಾರ ಮಾಡಿದರೆ ಮುಂದೆ ಬಡಮಕ್ಕಳು ಓದುವದು ಬಹಳ ಕಷ್ಟಸಾಧ್ಯವಾಗುತ್ತದೆ.
ಹೀಗಾಗಿ ಬರೆಯುವ ಮುನ್ನ ಅರಿಯುವುದು ಸೂಕ್ತ ಅರೆಬರೆ ಮಾಹಿತಿ ಮೇರೆಗೆ ಬರೆದು ಮಕ್ಕಳ ಭವಿಷ್ಯವನ್ನು ಕತ್ತಲುಮಾಡುವುದು ಸರಿಯಲ್ಲ ಎಂದರು.
ನಂತರ ಮಾತನಾಡಿದ ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಬಸವರಾಜ ದೋತರಬಂಡಿ ಈ ರೀತಿ ಶಾಲೆಯ ಮುಖ್ಯಸ್ತರ ಪರವಾನಗೆ ಪಡೆಯದೆ ಶಾಲಾ ಕೊಠಡಿಗಳ ಓಳಗೋಗಿ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಿ ಅವರ ಮತ್ತು ಶಾಲೆಯ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ಉಪಾಧ್ಯಕ್ಷ ಖಯುಂಮ್ ಮಾತನಾಡಿ ಇಲ್ಲಿ ಪತ್ರಿಕೆಯಲ್ಲಿ ಪ್ರಕಟವಾದಂತಹ ದುಸ್ತಿತಿ ಇಲ್ಲ ಬಾವಿಯ ದಂಡೆಗೆ ಕುಳಿತು ನೀರಿನ ಆಳ ಪರೀಕ್ಷಿಸಿದಂತಾಗಿದೆ.ವರದಿ ಪ್ರಕಟಿಸುವ ಮುನ್ನ ಆಳವಾದ ಅಧ್ಯಯನ ಮುಖ್ಯ ನಮ್ಮೂರ ಶಾಲೆಯ ಬಗ್ಗೆ ಇಲ್ಲಸಲ್ಲದ ಆರೋಪಮಾಡಿ ಬರೆಯುವುದು ತರವಲ್ಲ ಸುತ್ತಲಿನ ಹಳ್ಳಿಗಳ ಮಕ್ಕಳ ಭವಿಷ್ಯಕ್ಕೆ ಈ ಶಾಲೆ ದಾರಿದೀಪವಾಗಿದೆ ಎಂದರು.
ಸದಸ್ಯ ಬಸವರಾಜ ಜವಳಗೇರಾ ಶಾಲೆಯ ಒಳಗಡೆ ಹೋಗಿ ವಿದ್ಯಾರ್ಥಿಳನ್ನು ಪರೀಕ್ಷಿಸಿದ್ದೇ ಮೊದಲ ತಪ್ಪು,ಅವರ ಭಾವಚಿತ್ರಗಳನ್ನು ಪತ್ರಿಕೆಯಲ್ಲಿ ಹಾಕಿದ್ದು ಮತ್ತೊಂದು ತಪ್ಪು ಈಗ ಆ ವಿದ್ಯಾರ್ಥಿಗಳು ಶಾಲೆಗೆ ಹೋಗುವುದಿಲ್ಲವೆಂದು ಹೇಳುತ್ತಿವೆ ಇದಕ್ಕೆ ಯಾರು ಜವಬ್ದಾರಿ? ಮಕ್ಕಳ ಮನದ ಮೇಲೆ ದುಷ್ಪರಿಣಾಮ ಬೀರಿದೆ ಈ ರೀತಿ ಆರೋಪಮಾಡಿದರೆ ಉತ್ತಮವಾಗಿರುವ ಸರಕಾರಿ ಶಾಲೆಗಳೂ ಮುಚ್ಚಿಬಿಡುತ್ತವೆ,ಈ ರೀತಿಮಾಡುವುದು ಸರಿಯಲ್ಲ ಎಂದರು.
ಶಾಲೆಯ ಗಣಿತ ಶಿಕ್ಷಕರಾದ ಮಹ್ಮದ್ ರಫಿಯುದ್ದೀನ್ ಮಾತನಾಡಿ ಪತ್ರಿಕೋಧ್ಯಮ ನಾಲ್ಕನೆಯ ಅಂಗ ಈ ರೀತಿ ಬರೆದು ಸರಕಾರಿ ಶಾಲೆಯ ಮಕ್ಕಳ ತೇಜೋವಧೆ ಮಾಡುವುದು ಸರಿಯಲ್ಲ,ಈ ಶಾಲೆ ಈಗ 25 ವರ್ಷಗಳನ್ನು ಪೂರೈಸಿ ಬೆಳ್ಳಿಹಬ್ಬದ ಅಂಚಿನಲ್ಲಿದೆ ಪ್ರಗತಿಯಿಲ್ಲದೆ ಇಷ್ಟುವರ್ಷ ಸಾಗಿಬರಲು ಸಾಧ್ಯವಿಲ್ಲ. ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ಆಟೋಟ,ಸಾಂಸ್ಕೃತಿಕ,ವಿದ್ಯಾರ್ಜನೆಯಲ್ಲೂ ಮುಂಚೂಣಿಯಲ್ಲಿದ್ದಾರೆ,ಉತ್ತಮ ಗ್ರಂಥಾಲಯವಿದೆ ಅದನ್ನರಿಯದೆ ಈ ರೀತಿ ವರದಿಮಾಡಿರುವುದು ದುರದೃಷ್ಟಕರವಾದದ್ದೆಂದು ಕಳವಳ ವ್ಯಕ್ತಪಡಿಸಿದರು.
ಶಾಲೆಯ ವಿದ್ಯಾರ್ಥಿಗಳು ಮಾತನಾಡಿ ಇಲ್ಲಿ ಎಲ್ಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಮನದಟ್ಟಾಗುವಂತೆ ಪಾಠಮಾಡುತ್ತಾರೆ ಇಲ್ಲಿ ಯಾವುದೇರೀತಿಯ ತೊಂದರೆಗಳಾಗಿಲ್ಲ ಇದನ್ನರಿಯದೆ ನಮ್ಮ ಶಾಲೆಯ ಬಗ್ಗೆ ಶಿಕ್ಷಕರ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಬಸವರಾಜ ದೋತರಬಂಡಿ,ಉಪಾಧ್ಯಕ್ಷರಾದ ಖಯಂಮ್,ಸದಸ್ಯರಾದ ಬಸವರಾಜ ಜವಳಗೇರಾ,ಮರಿಸ್ವಾಮಿ ಬಾಂಬೆ,ಖಾಜಪ್ಪ ದೇವರಮನಿ,ಹನುಮಂತ,ಮತ್ತು ಶಿಕ್ಷಕರಾದ ಮಹ್ಮದ್ ರಫಿಯುದ್ದೀನ್ ,ಸುನೀತಾ,ಸಂಗೀತಾ ಪಾಟೀಲ್,ಶ್ವೇತಾ ಜೋಶಿ,ಕರಣಿಕರಾದ ಶ್ರೀನಿವಾಸ ಕುಲಕರ್ಣಿ,
ಬಸವರಾಜ ಪೂಜಾರಿ,ಕಾರ್ತಿಕ್ ಸಾಲವಾಡಗಿ,ಸುರೇಶ ದಿದ್ದಿಗಿ,ಸೇರಿದಂತೆ ಹಲವರಿದ್ದರು.
What's Your Reaction?



