ಶ್ರೀಊರಮ್ಮದೇವಿ ಪಾದಗಟ್ಟೆ ನವೀಕರಣ:ಹೋಮ ಪೂರ್ಣ ಹುಡಿತುಂಬುವ ಕಾರ್ಯಕ್ರಮ
✍️ ವರದಿ: ವಿ.ಜಿ.ವೃಷಭೇಂದ್ರ ವಿಜಯನಗರ ಜಿಲ್ಲೆ ಕೂಡ್ಲಿಗಿ
ವಿಜಯನಗರ ಜಿಲ್ಲೆ ಕೂಡ್ಲಿಗಿ : ಶ್ರಾವಣ ಪ್ರಥಮ ಶುಕ್ರವಾರ ಜು 25ರಂದು , ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿರುವ. ಶ್ರೀ ಊರಮ್ಮದೇವಿ ಪಾದಗಟ್ಟೆ ನವೀಕರಣ ಪ್ರಯುಕ್ತ , ಹಾಗೂ ಶ್ರಾವಣ ಪ್ರಥಮ ಶುಕ್ರವಾರದ ಪ್ರಯುಕ್ತ. ದೇವಿಗೆ ಕುಂಬಾಭಿಷೇಕ , ಕುಂಕುಮಾರ್ಚನೆ , ಪಂಚಾಮೃತಾಭಿಷೇಕ. ಹೋಮ ಹವನ ಪೂರ್ಣಹುಡಿ ತುಂಬುವ ಕಾರ್ಯಕ್ರಮ , ಹಾಗೂ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿತು. ಶ್ರೀಊರಮ್ಮದೇವಿ ಪಾದಗಟ್ಟೆ ಸೇವಾ ಸಮಿತಿಯ ವತಿಯಿಂದ , ವಿಶೇಷ ಪೂಜಾ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣದ ಅಸಂಖ್ಯಾತ ಭಕ್ತರು ಮಹಿಳೆಯರು ಹಿರಿಯರು ವೃದ್ಧರು ಯುವಕರು , ಶ್ರೀಊರಮ್ಮ ದೇವಿಯ ಸರ್ವ ಭಕ್ತರು , ಮಕ್ಕಳಾದಿಯಾಗಿ , ಸರ್ವ ಧರ್ಮ ಸದ್ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳ್ಳಂಬೆಳಿಗ್ಗೆ ಶ್ರೀಊರಮ್ಮ ದೇವಿಯ ಪಾದಗಟ್ಟೆ ದೇವಸ್ಥಾನದಲ್ಲಿ , ಜಂಗಮ ಸಮುದಾಯದ ಹಿರಿಯರಾದ , ಕೆ.ಹೆಚ್.ಎಮ್. ಚಿದಾನಂದಸ್ವಾಮಿರವರು. ಬ್ರಾಹ್ಮಣೋತ್ತಮರಾದ ಮಧುಸೂದನರಾವ್ , ಹಾಗೂ ಅರ್ಚಕರಾದ ವೀರೇಶಾಚಾರಿರವರು. ಶ್ರೀದೇವಿಯ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು , ಪೂಜೆಯ ಮಹಾಮಂಗಳಾರತಿಯ ನಂತರ. ಚಿದಾನಂದ ಸ್ವಾಮಿಗಳ ನೇತೃತ್ವದಲ್ಲಿ , ನೆರದ ಮುತ್ತೈದೆಯರಿಗೆ ಪೂರ್ಣ ಹುಡಿ ತುಂಬಿ ಹರಿಸಲಾಯಿತು. ನಂತರ ಪಾದಗಟ್ಟೆ ದೇವಸ್ಥಾನದ ಆವರಣದಲ್ಲಿ , ಭ್ರಾಹ್ಮಣ ಪುರೋಹಿತರಾದ ರಂಗನಾಥರವರ ನೇತೃತ್ವದಲ್ಲಿ ಅನೇಕ ಪುರೋಹಿತರ ಸಹಭಾಗಿತ್ವದಲ್ಲಿ , ಹೋಮ ಹವನಾದಿಗಳು ಜರುಗಿದವು. ನಂತರ ಪಟ್ಟಣದ ಶ್ರೀದೇವಿಯ ಅಸಂಖ್ಯಾತ ಭಕ್ತರಿಗೆ , ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿತು. ಶ್ರೀಊರಮ್ಮದೇವಿ ಪಾರಗಟ್ಟೆ ದೇವಸ್ಥಾನದ ಸೇವಾ ಕರ್ತರಾದ , ಮೇದರ ಆನಂದಪ್ಪ , ನಿವೃತ್ತ ಪೊಲೀಸ್ ಅಧಿಕಾರಿ ಯು. ನಾಗಪ್ಪ , ಅಂಜಿನಿರೆಡ್ಡಿ , ನಾಗೇಂದ್ರಪ್ಪ , ಟೈಲಾರ್ ಬಸವರಾಜಪ್ಪ , ಗುಡೇಕೋಟೆಯ ಡಿಶ್ ನಾಗರಾಜ , ಕಟ್ಟಡ ಕಾರ್ಮಿಕ ಮುಖಂಡ ಯು.ಪೆನ್ನಣ್ಣ ಸೇರಿದಂತೆ. ಶ್ರೀಊರಮ್ಮದೇವಿ ಪಾದಗಟ್ಟೆ ಸೇವಾ ಸಮತಿ ಪದಾಧಿಕಾರಿಗಳು , ಸೇವಾ ಸಮಿತಿಯ ಸರ್ವ ಸದಸ್ಯರು ದೇವಸ್ಥರು , ನಾಗರೀಕರು , ಯುವಕರು , ಮಹಿಳೆಯರು , ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದರು. *ಹೆತ್ತವರ ಸ್ಮರಣಾರ್ಥ ಪಾದಗಟ್ಟೆ ದೇವಸ್ಥಾನ ನವೀಕರಣ ವೆಚ್ಚ ಭರಿಸಿದ ಪ ಪಂ ನಿವೃತ್ತ ಪೌರಕಾರ್ಮಿಕ - ನೀರಗಂಟಿ ಶರಣಪ್ಪ*-ಪಟ್ಟಣದ 1ನೇ ವಾರ್ಡ್ ವಾಸಿಗಳು , ಹಾಗೂ ಪಟ್ಟಣ ಪಂಚಾಯ್ತಿ ನಿವೃತ್ತ ಪೌರಕಾರ್ಮಿಕರು ಪಾಂಡುರಂಗದ ದೇವರ ಆರಾಧಕರಾದ , ಶ್ರೀಊರಮ್ಮ ದೇವಿಯ ಪರ ಭಕ್ತರಾದ ನೀರಗಂಟಿ ಶರಣಪ್ಪರವರು. ಶ್ರೀ ಪಾಂಡುರಂಗ ದೇವರ ಅಪ್ಪಣೆಯಂತೆ , ತಮ್ಮ ತಂದೆ ತಾಯಿಯರ ಸ್ಮರಣಾರ್ಥವಾಗಿ. ಶ್ರೀಊರಮ್ಮ ದೇವಿ ಪಾದಗಟ್ಟೆ ದೇವಸ್ಥಾನದ ನವೀಕರಣಕ್ಕಾಗಿ , ಮತ್ತು ಧಾರ್ಮಿಕ ಆಚರಣೆಯ ಸಂಪೂರ್ಣ ವೆಚ್ಚವನ್ನು ದೇಣಿಯಾಗಿ ನೀಡುವ ಮೂಲಕ ನೀಡಿದ್ದಾರೆ. ಸಂಬಂಧಿಸಿದಂತೆ ಶರಣಪ್ಪ ರವರು ಮಾತನಾಡಿ , ಶ್ರೀಊರಮ್ಮ ದೇವಿ ಪಾದಗಟ್ಟೆ ದೇವಸ್ಥಾನ ನವೀಕರಣಕ್ಕೆ. ಶ್ರೀಪಾಂಡುರಂಗ ಸ್ವಾಮಿಯು ಧನ ಸೇವೆ ಮಾಡುವಂತೆ ತಮಗೆ ಸೂಚಿಸಿದ್ದು , ಅಂತೆಯೇ ತಾವು ತಮ್ಮ ಹೆತ್ತವರ ಸ್ಮರಣಾರ್ಥ ಹಾಗೂ ತಮ್ಮ ಮನೆತದನದ ಹಿರಿಯರ ಹೆಸರಲ್ಲಿ , ದೇಣಿಗೆ ರೂಪದಲ್ಲಿ ಧನ ಸೇವೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರಣಪ್ಪರವರ , ಪುತ್ರಿ ಶ್ರೀಮತಿ ಅರುಂಧತಿಯವರು ಉಪಸ್ಥಿತರಿದ್ದರು.
What's Your Reaction?






