ಕನ್ನಡ ಅಭಿಮಾನಿಗಳಿಂದ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ

ಮಂಡ್ಯದಲ್ಲಿ ನಡೆಯುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥ ಯಾತ್ರೆ  ಗುರುವಾರ ತಡ ರಾತ್ರಿ ೮:೩0 ಕ್ಕೆ  ಮಸ್ಕಿ ಪಟ್ಟಣ ಕ್ಕೆ ಆಗಮಿಸಿತ್ತು.

 - 
Oct 19, 2024 - 17:54
 0  26
ಕನ್ನಡ ಅಭಿಮಾನಿಗಳಿಂದ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ
ಕನ್ನಡ ಅಭಿಮಾನಿಗಳಿಂದ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ
ಕನ್ನಡ ಅಭಿಮಾನಿಗಳಿಂದ ಕನ್ನಡ ಜ್ಯೋತಿ ರಥಕ್ಕೆ ಅದ್ಧೂರಿ ಸ್ವಾಗತ

ಮಸ್ಕಿ ಗಾಂಧಿನಗರ ಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ  ಮಸ್ಕಿಯ ಮುಖ್ಯ ರಸ್ತೆಯಲ್ಲಿ ಕನ್ನಡ ಅಭಿಮಾನಿಗಳಿಂದ ಕನ್ನಡ ಪರ ಘೋಷಣೆ ಕೂಗುವ ಮೂಲಕ ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ   ಪುಷ್ಪಾರ್ಚನೆ ಮಾಡುತ್ತಾ  ಬಸವೇಶ್ವರ ನಗರದ ವರೆಗೆ ಸಾಗಿ ಕನ್ನಡ ಜ್ಯೋತಿ ರಥಕ್ಕೆ  ಬಿಳ್ಕೊಡಲಾಯಿತು.

ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿ ಮಾಲಾರ್ಪಣೆ ಮಾಡಿ  ಮಾತನಾಡಿದ ಮಸ್ಕಿ ತಹಸಿಲ್ದಾರ್ ಡಾ.ಮಲ್ಲಪ್ಪ. ಯರಗೊಳ್ .

ಕರ್ನಾಟಕಕ್ಕೆ 50 ವರ್ಷ ಸಂದ ಹಿನ್ನೆಲೆಯಲ್ಲಿ

ರಾಜ್ಯಸರ್ಕಾರದಿಂದ ಆಯೋಜಿಸಿರುವ ಕನ್ನಡ ಜ್ಯೋತಿ ರಥ ಮಂಡ್ಯದಲ್ಲಿ ನಡೆಯುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಸಾಕ್ಷಿಯಾಗಲಿರುವ ಕನ್ನಡ ಜ್ಯೋತಿ ರಥವು 

ಮಸ್ಕಿ ತಾಲೂಕು  ಕೇಂದ್ರ ಕ್ಕೆ  ಆಗಮಿಸಿರುವುದರಿಂದ 

ಮಸ್ಕಿ ತಾಲೂಕ್ ಆಡಳಿತ ಹಾಗು ಕನ್ನಡಪರ, ಕನ್ನಡ ಅಭಿಮಾನಿಗಳಿಂದ  ಕನ್ನಡ ರಥವನ್ನು ಸ್ವಾಗತಿಸಿದ್ದೇವೆ . ನಾವೆಲ್ಲರೂ ಕೂಡ ನಾಡು, ನುಡಿಯ ಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ಕೂಡ ನಮ್ಮ ಸಂಸ್ಕೃತಿ, ಕನ್ನಡ ನಾಡು-ನುಡಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ ಮಸ್ಕಿ ತಾಲೂಕ  ಕನ್ನಡ ಸಾಹಿತ್ಯ ಪರಿಷತ್ ನ ಮುಖಂಡರು, ಮಸ್ಕಿ ತಾಲೂಕ ಆಡಳಿತ ಅಧಿಕಾರಿಗಳು,ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡ ಅಭಿಮಾನಿಗಳು ಸೇರಿದಂತೆ ಇತರರು ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿದರು.

What's Your Reaction?

like

dislike

love

funny

angry

sad

wow