ಅಶೋಕ್ ನಲ್ಲ ಒಬ್ಬ ವ್ಯಕ್ತಿಯಲ್ಲ ಆತ ಸಮಾಜದ ಶಕ್ತಿ! ಮಾಜಿ ಸಚಿವ ನಾಡಗೌಡ.!

ವರದಿ:
ಬಸವರಾಜ ಬುಕ್ಕನಹಟ್ಟಿ,
ಸಿಂಧನೂರು : ಜೂನ್ 29, ನಮ್ಮ ಕ್ಲಿನಿಕ್ ಹಾಗೂ ಸನ್ ರೈಸ್ ಪ್ಯಾರ ಮೆಡಿಕಲ್ ಕಾಲೇಜ್ ವತಿಯಿಂದ ಸಮಾಜ ಸೇವಕ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟಿನ ಕಾರ್ಯದರ್ಶಿ ಮತ್ತು ಕಾರುಣ್ಯ ಆಶ್ರಮದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ನಲ್ಲ ಅವರ 46ನೇ ಜನ್ಮದಿನದ ಪ್ರಯುಕ್ತ ನಗರದ ಕಾರುಣ್ಯ ನೆಲೆ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿಗಳ ವಿತರಣ ಕಾರ್ಯಕ್ರಮ ನೆರವೇರಿಸಿದರು
ಈ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಕೆ. ಓ. ಎಫ್. ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಾಡಗೌಡ ಫೌಂಡೇಶನ್ ಹಾಗೂ ಸನ್ ರೈಸ್ ಪ್ಯಾರ ಮೆಡಿಕಲ್ ಕಾಲೇಜ್ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅಶೋಕ್ ನಲ್ಲ ಅವರನ್ನು ಕಾರುಣ್ಯ ಶ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
ಈ ವೇಳೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ ಅಶೋಕ್ ನಲ್ಲ ಅವರು ಜನುಮದಿನದ ಪ್ರಯುಕ್ತ ಕಾರುಣ್ಯಶ್ರಮದಲ್ಲಿ ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಉಚಿತ ಆರೋಗ್ಯ ತಪಾಸಣೆ ಔಷಧಿಗಳ ವಿತರಣೆ ಹಾಗೂ ಸಮಾಜ ಪರ ಕಾರ್ಯಗಳು ಮಾಡುತ್ತಿದ್ದು ಒಂದೊಳ್ಳೆ ಅರ್ಥ ಕಲ್ಪಿಸುತ್ತದೆ ನಿರಂತರ ಸಮಾಜದ ಹಿತ ಚಿಂತನೆಗಳನ್ನು ಹಂಚಿಕೊಳ್ಳುವ ನಲ್ಲವರು ಒಬ್ಬ ವ್ಯಕ್ತಿಯಲ್ಲ ಆತ ಸಮಾಜದ ಶಕ್ತಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಭಗವಂತ ಉತ್ತಮ ಆರೋಗ್ಯ ಆಯುಷ್ಯ ಸುಖ ಶಾಂತಿ ನೆಮ್ಮದಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥನೆಯೊಂದಿಗೆ ನಾನು ಶುಭ ಕೋರುತ್ತೇನೆ ಎಂದರು
ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಧ್ಯಕ್ಷ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಧಿಕಾರಿ ಇರ್ಷಾದ್ ಅತ್ತಾರ್. ಸುರೇಶ್ ನಕ್ಕಂಟಿ. ಅವಿನಾಶ್ ದೇಶಪಾಂಡೆ. ಡಾ. ಮಣಿ ಶಂಕರ್. ಮೆಡಿಕಲ್ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು
What's Your Reaction?






