ಹಾವೇರಿ : ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಹಾಗೂ ಖಾಸಗಿ ವ್ಯಕ್ತಿಯ ಬಂಧನ

ಹೌದು ಚಿರಾಯು ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕಿಯ "ಎಫ್ ಎಸ್ ಎಲ್" ವರದಿಯನ್ನು ಪೀರ್ಯಾದುದಾರರ ಪರವಾಗಿ ಮಾಡಿಸಿ ಕೊಡಲು 5 ಲಕ್ಷಕ್ಕೆ ಬೇಡಿಕೆ ಇಟ್ಟು ಕೊನೆಗೆ 3 ಲಕ್ಷ ರೂಪಾಯಿ ಲಂಚವನ್ನು ಪಡೆಯುವಾಗ ಹಾವೇರಿ ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗುರುರಾಜ ಭೀಮರಾಯ ಬಿರಾದಾರ ಚನ್ನಬಸಯ್ಯ ಕುಲಕರ್ಣಿ ಎಂಬ ಖಾಸಗಿ ವ್ಯಕ್ತಿ ಸೇರಿದಂತೆ ಯಶಸ್ವಿಯಾಗಿ ಲೋಕಾ ಬಲೆಗೆ ಬಿದ್ದಿದ್ದಾರೆ.
ಪೀರ್ಯಾದಿದಾರರಾದ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ವ್ಯವಸ್ಥಾಪಕರು ಚಿರಾಯು ಆಸ್ಪತ್ರೆ ಹಾವೇರಿ ಇವರ ಅಧಿಕೃತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಶ್ರೀ ಎಂ ಎಸ್ ಕೌಲಾಪುರೆ ಎಸ್ ಪಿ ಕರ್ನಾಟಕ ಲೋಕಾಯುಕ್ತ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಕೈಗೊಂಡು ಶ್ರೀ ಸಿ ಮಧುಸೂದನ ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತರ ನೇತೃತ್ವದಲ್ಲಿ ತನಿಖಾಧಿಕಾರಿಗಳ ದಾದಾವಲಿ ಕೆ ಎಚ್ ಪೊಲೀಸ್ ನಿರೀಕ್ಷಕರು,ಮಂಜುನಾಥ್ ಪಂಡಿತ್ ಪಿಎನ್, ಪೊಲೀಸ್ ನಿರೀಕ್ಷಕರು,ಬಸವರಾಜ ಹಳಬಣ್ಣನವರ ಹಾಗೂ ಸಿ ಎಂ ಬಾರ್ಕಿ,ಎಂ ಕೆ ನದಾಫ್, ಬಿ ಎಂ ಕರ್ಜಗಿ, ಎಂ ಕೆ ಲಕ್ಷ್ಮೇಶ್ವರ, ಆನಂದ ತಳಕಲ್ ,ಎಸ್ ಎನ್ ಕಡಕೋಳ,ಮಂಜುನಾಥ್ ಬಿ ಎಲ್ ,ರಮೇಶ ಗೆಜ್ಜಿಹಳ್ಳಿ,ಶಿವರಾಜ ಲಿಂಗಮ್ಮನವರ,ಆನಂದ ಶೆಟ್ಟರ್, ಬಿ ಎಸ್ ಸಂಕಣ್ಣವರ ಸಿಬ್ಬಂದಿಗಳು ಸಹ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
What's Your Reaction?






