ಸಮಾನತೆಯ ಹರಿಕಾರ ದೇಶಕಂಡ ಸಾಥ್ವಿಕ ರಾಜಕಾರಣಿ ಬಾಬೂಜಿ.

ಬಾಬು ಜಗಜೀವನ್ ರಾಮ್ ಜಗತ್ಪ್ರಸಿದ್ಧ ಭಾರತದ ನಾಯಕ,ಸ್ವತಂತ್ರ ಹೋರಾಟಗಾರರು,ಸಮಾನತೆಯ ಹರಿಕಾರರು,ಹಸಿರು ಕ್ರಾಂತಿಯ ಹರಿಕಾರ,ಬಡತನ ನಿರ್ಮೂಲನ ನಾಯಕ ಸಂವಿಧಾನ ರಚನಾ ಸಭೆಯ ಪ್ರಮುಖ ಸದಸ್ಯರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಧೀಮಂತ ವ್ಯಕ್ತಿ, ಹೀಗೆ ಇವರ ಸಾಧನೆಯ ಕ್ಷೇತ್ರಗಳು ಅನೇಕ ವೈವಿಧ್ಯಮಯ ಸಾಧನೆಗೈದ ಸದಾ ಸ್ಮರಣೆಯ ವ್ಯಕ್ತಿ ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಸಂದರ್ಭವಾಗಿ ಅವರ ಕಾಲಘಟ್ಟದಲ್ಲಿ ನಡೆದ ಕೆಲವು ಸಂದರ್ಭಗಳನ್ನು ನೆನೆಸಿಕೊಳ್ಳುವುದು ಪ್ರಸ್ತುತ ಎನಿಸುತ್ತಿದೆ. ಬಾಲ್ಯ ಜೀವನ:-ಇವರ ತಂದೆ ಶೋಭಿರಾಮ್ ಮತ್ತು ತಾಯಿ ವಸಂತಿದೇವಿ.ಈ ದಂಪತಿಗಳಿಗೆ ವಸಂತ ಮಾಸದ ಏಪ್ರಿಲ್ 5 -1908 ರಂದು ಬಿಹಾರದ ಚಾಂದ್ ವಿ ಗ್ರಾಮದಲ್ಲಿ ಭಾರತದ ಭಾಗ್ಯವಾಗಿ ಜನಿಸಿದ ಜಗಜೀವನ್ ರಾಮ್ ಜನನಿ ಜನಕರು ಜನ್ಮಭೂಮಿಗೆ ತಮ್ಮ ಸಾಧನೆಗಳ ಮೂಲಕ ಸಾರ್ಥಕ ಜೀವನ ನಡೆಸಿದರು. ಶಿಕ್ಷಣ:-1914 ರಲ್ಲಿ ಸ್ಥಳೀಯವಾಗಿ ಶಿಕ್ಷಣವನ್ನು ಪಡೆದ ಇವರು ನಂತರ ಅರ ಎಂಬಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು.ಆದರೆ ಅಲ್ಲಿ ಶಿಕ್ಷಣದಲ್ಲಿ ಸಮಾನತೆಯನ್ನು ಮಾತಿನಲ್ಲಿ ನೋಡುತ್ತಿದ್ದರು. ಆದರೆ ಕಾರ್ಯಗಳಲ್ಲಿ ನೋಡಿದರೆ ದಲಿತರಿಗೆ ಒಂದು ಹಿಂದುಗಳಿಗೆ ಒಂದು ಮುಸ್ಲಿಮರಿಗೆ ಒಂದು ಪ್ರತ್ಯೇಕ ಗಡಿಗೆಗಳನ್ನು ಕುಡಿಯುವ ನೀರಿಗಾಗಿ ಇಟ್ಟಾಗ,ಇದು ಸಮಾನತೆಯ ಮತ್ತು ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಭಂಗ ತರುವುದು ಎಂದು ಗಡಿಗೆಗಳು ತೆಗೆಯುವವರಿಗೆ ಇಟ್ಟ ಪ್ರತಿಸಲ ಅವುಗಳನ್ನು ಒಡೆದು ಪ್ರತಿಭಟಿಸುತ್ತಿದ್ದರು. ಕೊನೆಗೆ ಒಂದೇ ಗಡಿಗೆಯನ್ನು ಉಪಯೋಗಿಸುವಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವಲ್ಲಿ ಸಫಲರಾದರು.ಆ ಮೂಲಕ ಎಲ್ಲಾ ಗುರುಗಳು ಮತ್ತು ಶಿಷ್ಯರು ಸಮಾನತೆಯ ಜೀವನವನ್ನು ಸಾರ್ವತ್ರಿಕ ದ್ರಾವಣವನ್ನು ಸಮಾನವಾಗಿ ಒಂದೇ ಗಡಿಗೆಯಿಂದ ಸ್ವೀಕರಿಸುವ ಮೂಲಕ ಶಾಲೆಯಲ್ಲಿ ಸಮಾನತೆಯನ್ನು ಅನುಷ್ಠಾನಕ್ಕೆ ತಂದ ವಿದ್ಯಾರ್ಥಿಯಾದರು. ನಂತರ ಹತ್ತನೇ ತರಗತಿಯ ಒಂದು ಕಾರ್ಯಕ್ರಮಕ್ಕೆ ಮದನ್ ಮೋಹನ್ ಮಾಳವಿಯ ಅವರು ಬಂದಾಗ ಅವರ ಭಾಷಣವನ್ನು ಕೇಳಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಲು ಈ ಜ್ಞಾನಿಗೆ ಆಹ್ವಾನವಿಟ್ಟರು. ಮುಂದೆ ಬಿರ್ಲಾ ಸ್ಕಾಲರ್ಶಿಪ್ ಪಡೆದುಕೊಂಡು ಬನಾರಸ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು.ಈ ನಡುವೆ ಹಲವು ಅಸಮಾನತೆಗಳು ಎದುರಾದರೂ, ವೇದ ಜ್ಞಾನದಂತೆ ವಿದ್ಯಾವಂತ ಪಂಡಿತ,ಆನೆ,ನಾಯಿ ,ನಾಯಿ ಮಾಂಸ ತಿನ್ನುವವರನ್ನು ಸಾಮಾನ್ಯ ಪಾಮರರನ್ನು ಸಮನಾಗಿ ಕಾಣುವವರೇ ಜ್ಞಾನಿ ಎಂದು ನುಡಿದರು.ಇವರು ತಮ್ಮ ಕರ್ಮದಿಂದ ದಲಿತ ವ್ಯಕ್ತಿ ಎನ್ನುವುದಕ್ಕಿಂತ ಜ್ಞಾನ ಕುಲಕ್ಕೆ ಸೇರಿದವರು ಎಂದು ಹೇಳಬಹುದು. ಈ ಮೂಲಕ ಜನ್ಮದಿನವನ್ನು ಸಮಾನತೆಯ ದಿನ ಎಂದು ಆಚರಣೆ ಮಾಡುವುದು ಅರ್ಥಪೂರ್ಣ ವಾಗಿದೆ.ತೆಲಂಗಾಣ ಮತ್ತು ಆಂಧ್ರಪ್ರದೇಶ ಇವರ ಜನ್ಮ ದಿನಾಚರಣೆಯನ್ನು ಸರಕಾರದ ರಜಾ ದಿನ ಎಂದು ಘೋಷಿಸಿ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದನ್ನು ನೋಡಬಹುದು. ಸಾಧನೆಗಳು:-1)ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ಜೊತೆಯಲ್ಲಿ ಬಾಬು ಜಗಜೀವನ್ ರಾಮ್ ಭಾಗವಹಿಸಿದರು. 2) ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮಧ್ಯಂತರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದರು. 3) 1936 ರಿಂದ 1986 ರವರೆಗೆ 50 ವರ್ಷಗಳ ಕಾಲ ಪ್ರಜಾಪ್ರತಿನಿಧಿಯಾಗಿ ಪ್ರತಿಯೊಬ್ಬರ ಬಗ್ಗೆ ಪ್ರತ್ಯೇಕ ಶ್ರದ್ಧೆವಹಿಸಿ ಕೆಲಸ ಮಾಡಿದರು. ಸುಮಾರು 40 ವರ್ಷಗಳ ಕಾಲ ಸಚಿವ ಸಂಪುಟದ ಸದಸ್ಯರಾಗಿದ್ದು ವಿಶ್ವ ದಾಖಲೆಯಾಗಿದೆ. 4) ಬಾಬಿಯನ್ನು ಸೋಲಿಸಿದ ಬಾಬು-: ಜಗಜೀವನ್ ರಾಮ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದು ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ನಿರಂಕುಶ ಆಳ್ವಿಕೆಗೆ ವಿರುದ್ಧವಾಗಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಸಾಮಾನ್ಯ ಜನರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ರಕ್ಷಿಸುವ ಉದ್ದೇಶದಿಂದ ಡೆಮೋಕ್ರಸಿ ಫಾರ್ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪನೆ ಮಾಡಿ,ಪ್ರಮುಖ ವಿರೋಧ ಪಕ್ಷದ ನಾಯಕರಾಗಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇವರು ಭಾಷಣ ಕಾರ್ಯಕ್ರಮ ಏರ್ಪಡಿಸಿದ್ದರು. ಆದರೆ ಆಡಳಿತ ಪಕ್ಷದವರು ರಾಜಕೀಯ ತಂತ್ರ ಬಳಸಿ ಅಂದಿನ ಬ್ಲಾಕ್ಬಸ್ಟರ್ ಫಿಲ್ಮ್ ಆಗಿರುವ ಬಾಬಿ ಫಿಲ್ಮ್ ಅನ್ನು ಅದೇ ಸಮಯಕ್ಕೆ ಟಿವಿಗಳಲ್ಲಿ ಪ್ರಸಾರ ಮಾಡಿದರು. ಆದರೆ ಜನರು ತಾವು ಈ ರಾಜಕೀಯ ಕುತಂತ್ರಕ್ಕೆ ಬಲಿಯಾಗದೆ ತಮ್ಮ ಪ್ರಬುದ್ಧತೆಯನ್ನು ಪ್ರದರ್ಶಿಸಲು ಪ್ರಜಾ ಪ್ರಭುತ್ವಕ್ಕಾಗಿ ಕಾಂಗ್ರೆಸ್ ಎನ್ನುವ ಪಕ್ಷದ ಪರವಾಗಿ ಅವರ ಭಾಷಣ ಕೇಳಲು ತಂಡೋಪ ತಂಡವಾಗಿ ಭಾಗವಹಿಸುವ ಮೂಲಕ ಆ ಕಾರ್ಯಕ್ರಮವನ್ನು ಸಫಲಗೊಳಿಸಿದರು. ಈ ಸಂದರ್ಭವನ್ನು ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಬಾಬಿ ಯನ್ನು ಸೋಲಿಸಿದ ಬಾಬು ಎನ್ನುವ ಶೀರ್ಷಿಕೆ ಯಲ್ಲಿ ಸುದ್ದಿ ಪ್ರಕಟಗೊಂಡವು. ಇದರಿಂದ ಆಡಳಿತ ಪಕ್ಷದವರಿಗೆ ಜವಾಬ್ದಾರಿಯುತ ಪ್ರತಿಪಕ್ಷದ ಬಿಸಿ ತಾಗುವಂತಾಯಿತು. ಈ ಕೀರ್ತಿ ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ.ಇದೇ ಪಕ್ಷ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 15 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು ನಿಜಕ್ಕೂ ಗಮನಾರ್ಹವಾದುದು. 5) ಕೃಷಿ ಖಾತೆ ಸಚಿವರಾಗಿ ಸಾಧನೆ:- ಹಸಿರು ಕ್ರಾಂತಿ ನಮ್ಮೆಲ್ಲರಿಗೂ ಗೊತ್ತಿದೆ,ಇದರ ಮೂಲಕ ನಮ್ಮ ಭಾರತದಲ್ಲಿ ಆಹಾರದ ಸ್ವಯಂ ಸಮೃದ್ಧಿ ಸಾಧಿಸಲು ಸಾಧ್ಯವಾಯಿತು.ಈ ಕೆಲಸ ಆಗಿದ್ದು ಬಾಬು ಜಗಜೀವನ್ ರಾಮ್ ಅವರು ಕೃಷಿ ಖಾತೆ ಸಚಿವರಾಗಿದ್ದಾಗ ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ. 6) ರಕ್ಷಣಾ ಖಾತೆ ಸಚಿವರಾಗಿ ಸಾಧನೆ:-1971 ಇಂಡೋ ಪಾಕ್ ಯುದ್ಧದಲ್ಲಿ ಬಾಂಗ್ಲಾದೇಶ್ ಸ್ವತಂತ್ರಗೊಳಿಸುವ ಸಂದರ್ಭದಲ್ಲಿ ಇವರು ರಕ್ಷಣಾ ಖಾತೆ ಸಚಿವರಾಗಿ ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವುದರ ಜೊತೆಗೆ, ಇನ್ನೊಂದು ದೇಶದ ಸ್ವಾತಂತ್ರ್ಯಕ್ಕೂ ಸಹಕರಿಸಿದ ರಕ್ಷಣಾ ಸಚಿವರು ಎಂಬ ಖ್ಯಾತಿ ಇವರಿಗೆ ಸಲ್ಲುತ್ತದೆ. 7) ರೈಲ್ವೆ ಖಾತೆಯ ಸಚಿವರಾಗಿ :- ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಇವರು ಆ ಸಂದರ್ಭದಲ್ಲಿ ಅಧಿಕಾರಿಗಳಿಗಿಂತ ಹೆಚ್ಚಾಗಿ ಅವಿದ್ಯಾವಂತರಾಗಿ ಆ ಒಂದು ರೈಲ್ವೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ,ಯಾವುದೇ ವಿದ್ಯಾರ್ಹತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಕಲ್ಪಿಸಿಕೊಟ್ಟ ಉದ್ಯೋಗ ಪ್ರದಾತ ಇವರು. ಆ ಮೂಲಕ ಅವಿದ್ಯಾವಂತರನ್ನು ಸಮನಾಗಿ ಕಂಡಂತಹ ಸಮಾನತೆಯ ಹರಿಕಾರ ಎನ್ನುವುದು ಅವರ ಜನ್ಮದಿನಾಚರಣೆಯನ್ನು ಸಮಾನತೆಯ ದಿನಾಚರಣೆಯಾಗಿ ಆಚರಿಸುವುದಕ್ಕೆ ಇನ್ನಷ್ಟು ಪುಷ್ಟಿಕೊಡುತ್ತದೆ. ಹೀಗೆ ಅವರು ಮಾಡಿದ ಸಾಧನೆಗಳು ಅಪಾರ ಅವುಗಳನ್ನು ವರ್ಣಿಸಲು ಪುಟಗಳು ಸಾಲದು ಆದರೂ ಇವರ ಕೆಲಸಗಳನ್ನು ಸಂದರ್ಭಾನುಸಾರ ನೆನೆಯುತ್ತಾ ನಾವು ಸಮಾನತೆಗಾಗಿ ಸದಾಕಾಲ ಜ್ಞಾನಯೋಗಿಗಳಾಗಿ ಅವರ ಸಾಲಿಗೆ ಸೇರಲು ಪ್ರಯತ್ನಿಸೋಣ. ಲೇಖನ:-ಶ್ರೀಮತಿ ಸಾವಿತ್ರಿ ಕೆ ಸಹಾಯಕ ಪ್ರಾಧ್ಯಾಪಕರು ರಾಜ್ಯಶಾಸ್ತ್ರ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು. ಮತ್ತು ಶ್ರೀಮತಿ ಫಮೀದ ಬೇಗ ಸಹಪ್ರಾಧ್ಯಪಕರು ಗಣಿತಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು.

Apr 5, 2025 - 22:17
Apr 5, 2025 - 22:25
 0  16
ಸಮಾನತೆಯ ಹರಿಕಾರ ದೇಶಕಂಡ  ಸಾಥ್ವಿಕ ರಾಜಕಾರಣಿ ಬಾಬೂಜಿ.
ಸಮಾನತೆಯ ಹರಿಕಾರ ದೇಶಕಂಡ  ಸಾಥ್ವಿಕ ರಾಜಕಾರಣಿ ಬಾಬೂಜಿ.

What's Your Reaction?

like

dislike

love

funny

angry

sad

wow