ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳ  ನಿರ್ಲಕ್ಷದಿಂದ ವಿದ್ಯುತ್ ತಗಲಿ ಯುವಕ ಸಾವು

ಹಟ್ಟಿ ಚಿನ್ನದ ಕಂಪನಿಯ ವಿಲೇಜ್ ಶಾಫ್ಟ್ ಪಕ್ಕದಲ್ಲಿರುವ ಕಾರ್ಮಿಕರ ವಾಚ್ ಮೆನ್  ಕ್ವಾಟ್ರಸ್ ನಲ್ಲಿ ಯುವಕನೊಬ್ಬ ಕರೆಂಟ್ ತಗಲಿ ಸಾವನ್ನಪ್ಪಿದ ಘಟನೆ ನಡೆದಿದೆ

Apr 5, 2025 - 14:11
 0  39
ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳ  ನಿರ್ಲಕ್ಷದಿಂದ ವಿದ್ಯುತ್ ತಗಲಿ ಯುವಕ ಸಾವು
ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳ  ನಿರ್ಲಕ್ಷದಿಂದ ವಿದ್ಯುತ್ ತಗಲಿ ಯುವಕ ಸಾವು

ಕಾಲಿ ಇರುವ ಮನೆಗಳಿಗೆ  ಮೇಲಿನ ಹಂಚುಗಳನ್ನು ತೆಗೆದುಹಾಕಿ ನೆಲ ಸಮ ಮಾಡದೆ ಹಾಗೆ ಬಿಟ್ಟು 

ಆ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಹಾಗೆ ಬಿಟ್ಟಿರುವದರಿಂದ ಹಾಗು 

ಹಟ್ಟಿ ಕಂಪನಿಯ ಅಧಿಕಾರಿಗಳ ನಿರ್ಲಕ್ಷತನದಿಂದ ಇಂದು ಯುವಕ ಸಾವನ್ನಪ್ಪುವಂತಾಗಿದೆ ಎಂದು ಜನ ಆರೋಪಿಸಿದ್ದಾರೆ.

 ಈ ಸಾವಿನ ಹೊಣೆ ಯಾರು, ಈ ಸಾವಿನ ಹೊಣೆ ಹಟ್ಟಿ ಚಿನ್ನದ ಕಂಪನಿಯ ಅಧಿಕಾರಿಗಳ ನಿರ್ಲಕ್ಷತನದಿಂದ ಆಗಿದೆ ಎಂದು ಇಲ್ಲಿಯ ಸ್ಥಳೀಯರು ಕಂಪನಿ ಅಧಿಕಾರಿ ವಿರುದ್ಧ ಆಕೋಶ ವೇಕ್ತ ಪಡಿಸಿದ್ದಾರೆ 

ಅಧಿಕಾರಿಗಳ ನಿರ್ಲಕ್ಷತನದಿಂದ ಸಾವನ್ನಪ್ಪಿದ ಯುವಕನ  ಕುಟುಂಬಸ್ಥರಿಗೆ ಪರಿಹಾರ ನೀಡಬೇಕು  ಮತ್ತು ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ  ಕ್ರಮ ಕೈಗೊಳ್ಳಬೇಕೆಂದು 

 ಮೃತ  ಯುವಕನ ಕುಟುಂಬಸ್ಥರು ಮತ್ತು ಹಟ್ಟಿ ಪಟ್ಟಣದ ಕಾಂಗ್ರೆಸ್ ಮುಖಂಡರಾದ ಅಮ್ಜದ್ ಸೇಟ್, ಇಸ್ಮೈಲ್  ಪಾಷಾ , ಮೌಲಾ ಮಾಸ್ಟರ್, ಶೇಕ್ ಹುಸೇನ್  ಸೌದಾಗರ್, ಸೈಯದ್ ಟೈಲರ್, ಮೌನೇಶ್ ಕಾಕಾ ನಗರ ಇನ್ನು ಅನೇಕ ಮುಖಂಡರು ಹಟ್ಟಿ ಚಿನ್ನದ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತ ಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡುವವರೆಗೂ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಣ್ಣ, ಹುಚುರೆಡ್ಡಿ, ಅಮರೇಶ್ ಸೇರಿದಂತೆ ಹಟ್ಟಿ ಕಂಪನಿಯ  ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರು.

 

What's Your Reaction?

like

dislike

love

funny

angry

sad

wow