ಚಕ್ರವರ್ತಿ

ಎದೆಯುಸಿರು ಬಿಸಿಯಾದಾಗ ಹೊರಬರುವ ಶಬ್ದ ಅಪ್ಪ ಗಂಟಲಿನ ನರನಾಡಿ ಗಂಟಿಕ್ಕಿದಾಗ ಕಂಟದಿಂ ಬಿಡುಗಡೆಯಾಗುವ ಶಬ್ದ ಅಪ್ಪ ಕುರುಚಲು ಗಡ್ಡ ಕೆದರಿದ ಕೂದಲು ಅವನ ಜೀತದಲ್ಲಿ ಮಕ್ಕಳಿಗೇ ಮೊದಲ ಕಪ್ಪ ಅವನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹೆಂಡತಿ ಮಕ್ಕಳ ಬಾಯಿಗೆ ಹೆತ್ತುಪ್ಪ ಭೆರೆಸಿದ ಸಜ್ಜಿಗೆ. ಜಗದ ಕಣ್ಣಿಗೆ ಅವನೊಬ್ಬ ಬೆಪ್ಪ ಮಕ್ಕಳೆದುರು ಸಿಡಿಮಿಡಿ, ಅಮ್ಮನ ಬಳಿ ಮಕ್ಕಳಿಗಾಗೇ ಗಡಿಬಿಡಿ ಅವನ ಪ್ರೀತಿಗಿಲ್ಲ ಯಾವ ಮೇರೆ ಗಡಿ ಅವನೆದೆಯೇ ಮಕ್ಕಳಿಟ್ಟು ಪೂಜಿಸೋ ಗರ್ಭಗುಡಿ ಚಳಿ,ಗಾಳಿ,ಮಳೆಗಳಿಗೆ ಅವನ ದೇಹವೇ ತಂಗುದಾಣ ಮಕ್ಕಳ ಬದುಕಿಗೆ ಕಾವಲು ಏಳುಸುತ್ತಿನ ಕೋಟೆಯಂತೆ ಪ್ರತಿಕ್ಷಣ ಬೆಟ್ಟದಂತ ಕಷ್ಟ ಬಂದರೂ ಹೆದುರಿಸಿ ನಿಲ್ಲೋ ಹೆಬ್ಬಂಡೆ ಮಕ್ಕಳ ಹೆಬ್ಬೆಟಿಗೆ ಪೆಟ್ಟಾದರೂ ಕರಗಿ ನೀರಾಗೋ ಮಂಜುಗಡ್ಡೆ. ಸೋರುತ್ತಿದ್ದರೂ ಮನದ ಮನೆಯ ತಾರಸಿ ಬೀಳ್ಕೊಡುವ ಹೊರಗೆ ಮನದುಂಬಿ ಹರಸಿ ಬುದ್ದಿ ಹೇಳುವ ಸಿಕ್ಕಾಗೆಲ್ಲ ಮನದಂಗಳದಿ ಕೂರಿಸಿ ಮಕ್ಕಳು ಗೆದ್ದಾಗೆಲ್ಲ ಡಂಗೂರಸಾರುವ ಎದೆ ನಗಾರಿ ಬಾರಿಸಿ ಅಪ್ಪ , ಮಕ್ಕಳ ಸಾಮ್ರಾಜ್ಯದ ಚಕ್ರವರ್ತಿ ಕನಸಿಗೂ ನನಸಿಗೂ ಮದ್ಯವರ್ತಿ ಮಕ್ಕಳಿಗಾಗೇ ಹೋರಾಟ ಜೀವನಪೂರ್ತಿ ಮಕ್ಕಳ ಕೀರ್ತಿಯ ಹಿಂದಿದೆ ಅಪ್ಪನೆಂಬೋ ತ್ಯಾಗಮೂರ್ತಿ. ರಚನೆ,,,ಸುರೇಶ ಬಳಗಾನೂರು

Apr 4, 2025 - 22:14
Apr 4, 2025 - 22:19
 0  16

What's Your Reaction?

like

dislike

love

funny

angry

sad

wow