ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ

ಮಸ್ಕಿ: ಆರೋಗ್ಯ,ಶಿಕ್ಷಣ. ಪೌಷ್ಟಿಕತೆ,ಮಣ್ಣಿನ ಆರೋಗ್ಯ,ಸ್ವಸಹಾಯ ಸಂಘಗಳ ರಚನೆಯಲ್ಲಿ ಮಸ್ಕಿ ತಾಲ್ಲೂಕು ತಂದ ಅಮೂಲಾಗ್ರ ಬದಲಾವಣೆಯನ್ನು ಗಮನಿಸಿದ ಕೇಂದ್ರ ಸರ್ಕಾರದ ನೀತಿ ಆಯೋಗ,ಮಸ್ಕಿ ತಾಲೂಕನ್ನು ದಕ್ಷಿಣ ಭಾರತದಲ್ಲಿಯೇ ಪ್ರಥಮ ಮಹತ್ವಾಕಾಂಕ್ಷಿ ತಾಲ್ಲೂಕೆಂದು ಘೋಷಿಸಿದೆ.

Aug 4, 2025 - 08:32
Aug 4, 2025 - 08:34
 0  10
ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ
ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ
ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ
ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ
ಎರಡನೇ ಬಾರಿಯೂ ಮಸ್ಕಿಯ ಮುಡಿಗೇರಿದ ದಕ್ಷಿಣ ಭಾರತದಲ್ಲಿಯೇ ಮಹತ್ವಾಕಾಂಕ್ಷಿ ತಾಲೂಕೆಂಬ ಗರಿ

ನೀತಿ ಆಯೋಗ ಮಸ್ಕಿಯನ್ನು 2023-24 ನೇ ಸಾಲಿನಲ್ಲಿಯೂ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನವೆಂದು ಘೋಷಿಸಿ ₹1.50ಕೋಟಿ ಬಹುಮಾನವನ್ನು ನೀಡಿತ್ತು.

2024-25ನೇ ಸಾಲಿನಲ್ಲಿಯೂ ಮತ್ತೊಮ್ಮೆ ಪ್ರಥಮ ಮಹತ್ವಾಕಾಂಕ್ಷಿ ತಾಲೂಕೆಂಬ ಪ್ರಶಸ್ತಿ ಪಡೆದು ₹1 ಕೋಟಿ ಬಹುಮಾನ ಹಾಗೂ ಪುರಸ್ಕಾರ ತನ್ನದಾಗಿಸಿಕೊಂಡಿದೆ.

ಶನಿವಾರ ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಈಶ್ವರಕುಮಾರ ಕಾಂದೂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ,ಜಿಲ್ಲಾ ನೊಡೆಲ್ ಅಧಿಕಾರಿ ಟಿ.ರೋಣಿಯವರು ಮಸ್ಕಿಯ ತಾಲ್ಲೂಕಾ ಪಂಚಾಯಿತಿಯ ಇಒ ಅಮರೇಶ ಯಾದವ್ ಅವರಿಗೆ ಪ್ರಸಸ್ತಿ ನೀಡಿ ಗೌರವಿಸಿದರು.

ಯೋಜನೆ ಅನುಷ್ಠಾನಕ್ಕೆ ಗಣನೀಯ ಸೇವೆಮಾಡಿದ ತಾಲ್ಲೂಕಿನ ಅಂಕುಶದೊಡ್ಡಿ ಹಾಗೂ ವಟಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಾಂತಪ್ಪ, ತಿಮ್ಮನಗೌಡ ಪಾಟೀಲ,ಎನ್‌ಆರ್‌ಎಲ್‌ಎಂ ಸಂಯೋಜಕ ಪ್ರಕಾಶ ನಾಯ್ಕ ಸೇರಿ ತಾಲ್ಲೂಕು ಪಂಚಾಯಿತಿ ಸಿಬ್ಬಂಧಿಗಳನ್ನು ಸನ್ಮಾನಿಸಿದರು.

ಇದರಿಂದ ಪುಳಕಿತರಾದ ಮಸ್ಕಿ ತಾಲೂಕಿನ ನಾಗರಿಕರು ಈ ಯಶೋಘಾತೆ ಅನವರತ ಸಾಗಲಿ ಎಂದು ಹಾರೈಸಿ ಶುಭಕಾಮನೆಗಳನ್ನು ಕೋರಿದ್ದಾರೆ.

What's Your Reaction?

like

dislike

love

funny

angry

sad

wow