ಲಿಂಗಸುಗೂರು ತಹಸೀಲ್ದಾರ್ ಸಿಗ್ನೇಚರ್ ಫೋರ್ಜರಿ. ಖೋಟ್ಟಿ ದಾಖಲೆ ಸೃಷ್ಟಿಸಿ ೧ಕೋಟಿ೮೭ಲಕ್ಷ ಸರ್ಕಾರಿ ಹಣ ಲಪಟಾಯಿಸಿದ ಎಸ್ ಡಿ ಎ ಯಲ್ಲಪ್ಪ.
ತಹಸೀಲ್ದಾರ ಎನ್. ಶಮ್ ಶಾಲಾಮ್ ಸಮಯ ಪ್ರಜ್ಞೆಯಿಂದ ೧ಕೋಟಿ೮೭ಲಕ್ಷ ರೂ ಸರಕಾರದ ಹಣ ಸೇಫ್.

ಲಿಂಗಸಗೂರು ತಹಸೀಲ್ದಾರ ಎನ್. ಶಮ್ ಶಾಲಾಮ್ ಅವರು ದಿ:21 ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಹಸೀಲ್ ಕಛೇರಿಯಲ್ಲಿ ಧಾರ್ಮಿಕ ದತ್ತಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ಖಾತೆಗೆ ಬಂದಿರುವ ಹಣದಲ್ಲಿ ಸುಮಾರು ೧ಕೋಟಿ೮೭ಲಕ್ಷ ಹಣ ವರ್ಗಾವಣೆಯಾಗಿರುವ ಬಗೆಗೆ ಮಾಹಿತಿ ತಿಳಿದ ತಕ್ಷಣ
ಠಾಣೆಯಲಿ ಪ್ರಕರಣ ದಾಖಲಾಗಿದ್ದು ತಹಸೀಲ್ ಕಚೇರಿಗೆ ಸೇರಿದ ಬರೊಬ್ಬರಿ 1,87
,86,561 ರೂಗಳ ಅನುದಾನವನ್ನು ಕಚೇರಿಯ ಎಸ್ ಡಿ ಎ ಯಲ್ಲಪ್ಪ ತನ್ನ ಮಗ, ಮಗಳು, ಪತ್ನಿ ಖಾತೆಗೆ ವರ್ಗಾಯಿಸಿ ಸರಕಾರಕ್ಕೆ ವಂಚಿಸಿದ ಆರೋಪಕ್ಕೆ ಸಂಬಂದಿಸಿದಂತೆ ಎಸ್ ಡಿ ಎ ಹಾಗೂ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ದ ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ತಹಸೀಲ್ ಕಚೇರಿ ಯ ಎಸ್ ಡಿ ಎ ಯಲ್ಲಪ್ಪ ಪ್ರಕರಣದ ಸೂತ್ರದಾರನಾಗಿದ್ದು ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ನೆರವಿನೊಂದಿಗೆ ಖೊಟ್ಟಿ ದಾಖಲೆ ಗಳನ್ನು ಸೃಷ್ಠಿಸಿ ಈ ಕೃತ್ಯ ಎಸಗಿದ್ದಾರೆಂದು ತಿಳಿಸಲಾಗಿದೆ
ಪ್ರಕರಣದ ವಿವರ:ಎಸ್ ಡಿಎ ಯಲ್ಲಪ್ಪ ತಾಲ್ಲೂಕಿನ ಮುಜರಾಯಿ ದೇವಸ್ಥಾನ ಗಳಿಗೆ ಬಳಸಬೇಕಿದ್ದ 38, 86,397 ರೂ ಗಳನ್ನು ಜನವರಿ 6-2025ರಂದು ತನ್ನ ಮಗನ ಕೆನರಾ ಬ್ಯಾಂಕ್ ಖಾತೆಗೆ 21,75994 ರೂ ಹಾಗೂ ಮಗಳ ಖಾತೆಗೆ 11,19,238 ರೂ ತನ್ನ ಪತ್ನಿ ಖಾತಗೆ ವರ್ಗಾಯಿಸಿದ್ದಾನೆ
ಹಾಗೂ ದೇವಸ್ಥಾನ ಗಳ ಬಾಬತ್ತಿನಲಿ 36,62,597 ರೂ ನಲ್ಲಿ ಮಗನ ಖಾತೆಗೆ 42,30,296 ರೂ ಮತ್ತೊಂದು ಖಾತೆಗೆ 10,12,104 ರೂ ಪತ್ನಿ ಖಾತೆಗೆ 7,18397 ರೂಗಳನ್ನು ವರ್ಗಾಯಿಸಿದ್ದಾನೆ.
ಪರಿಸರ ವಿಕೋಪ ಪರಿಹಾರ ಖಾತೆಯ 19,81,538 ರೂಗಳನ್ನು ಪತ್ನಿ ಖಾತೆಗೆ ಬಾಕಿ 11,45,361 ರೂಗಳನ್ನು ತಹಸೀಲ್ ಕಚೇರಿಯ ಜಮಾವಣೆ ಖಾತೆಗೆ ವರ್ಗಾಯಿಸಿದ್ದಾನೆ.
ಈ ಎಲ್ಲ ಖಾತೆಗಳ ವ್ಯವಹಾರ ಮುಕ್ತಾಯ ಗೊಳಿಸುವಂತೆ ಬ್ಯಾಂಕಿಗೆ ಮನವಿ ಮಾಡಿಕೊಂಡಿದ್ದಾನೆ ಇದಕ್ಕೆ ಬ್ಯಾಂಕ್ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ದೂರಿನಲಿ ವಿವರಿಸಲಾಗಿದೆ
ತಹಸೀಲ್ದಾರ ಎನ್. ಶಮ್ ಶಾಲಾಮ್
ಸಮಯ ಪ್ರಜ್ಞೆಯಿಂದ
ಭಾರಿ ಅಕ್ರಮ ಬಯಲಾಗಿದ್ದು ಹಣ ವರ್ಗಾವಣೆ ದಂಧೆ ಯಾವಾಗಿನಿಂದ ನಡೆಯುತಿತ್ತು ಇದರ ಹಿಂದೆ ಯಾವುದಾದರು ಕಾಣದ ಕೈಗಳು ಇವೆಯಾ ಎನ್ನುವುದು ಪ್ರಕರಣದ ತನಿಖೆ ನಡೆದರೆ ಹೊರಬೀಳಬಹುದು ಎಂದು ತಹಸೀಲ್ದಾರ ಎನ್. ಶಮ್ ಶಾಲಾಮ್ ರವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
Files
What's Your Reaction?






