ಮುಡಾ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ಸಿದ್ದರಾಮಯ್ಯ ನಿರಾಳ; ಬಿಜೆಪಿ ಕೊತಕೊತ..!
ಹೋರಾಟ ಮುಂದುವರಿಸ್ತೀನಿ ಎಂದ ಸ್ನೇಹಮಯಿ. ಲೋಕಾಯುಕ್ತ ವರದಿಯಿಂದ ರಾಷ್ಟ್ರೀಯವಾದಿ ಪತ್ರಕರ್ತರಿಗೂ ಹತಾಶೆ,,

MUDA ಅಕ್ರಮ ಸೈಟು ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮತ್ತು ಇತರೆ ಯಾರಿಂದಲೂ ಯಾವುದೇ ಲೋಪ ಆಗಿಲ್ಲ ಅಥವ ಆಗಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ಇಲ್ಲ ಎಂದು ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧಿಕಾರಿ ಇಂದು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.
ಈ ಪೊಲೀಸರ ತನಿಖೆಯ ಮೇಲೂ ಯಾವುದೇ ಪ್ರಭಾವ ಬಳಸಲಾಗಿಲ್ಲ ಮತ್ತು ಯಾವುದೇ ಅಧಿಕಾರ ದುರುಪಯೋಗ ಆಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಸಿದ್ದರಾಮಯ್ಯನವರ ಕುಟುಂಬದವರು MUDAದಿಂದ ಯಾವುದೇ ಪ್ರಭಾವ ಮತ್ತು ಅಧಿಕಾರ ದುರುಪಯೋಗ ಇಲ್ಲದೆ ಸೈಟು ಪಡೆದಿದ್ದರು ಎನ್ನುವುದೂ ಅಷ್ಟೇ ಸತ್ಯ.
What's Your Reaction?






