ಭತ್ತದ ಬೆಳೆಗೆ ಏ.20 ರವರೆಗೆ ಕಾಲುವೆಗೆ ನೀರು ಹರಿಸಿ ರೈತರನ್ನು ಕಾಪಾಡಿ:ರಾಜಾ ವೆಂಕಟಪ್ಪನಾಯಕ

Nov 30, -0001 - 00:00
 0  46
ಭತ್ತದ ಬೆಳೆಗೆ ಏ.20 ರವರೆಗೆ ಕಾಲುವೆಗೆ ನೀರು ಹರಿಸಿ ರೈತರನ್ನು ಕಾಪಾಡಿ:ರಾಜಾ ವೆಂಕಟಪ್ಪನಾಯಕ
ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಸುಧೀಗೋಷ್ಠಿ

ಮಾನ್ವಿ:ಪಟ್ಟಣದ ಜ್ಯಾತ್ಯತೀತ ಜನತದಾಳ ಪಕ್ಷದ ಕಛೇರಿಯಲ್ಲಿ ಮಾಜಿ

ಶಾಸಕ ರಾಜಾ ವೆಂಕಟಪ್ಪನಾಯಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾನ್ವಿ

ಮತ್ತು ಸಿರವಾರ ತಾಲೂಕುಗಳಲ್ಲಿ ಬೇಸಿಗೆಯಲ್ಲಿ ರೈತರು 1ಲಕ್ಷ

ಎಕರೆಯಲ್ಲಿ ಭತ್ತವನ್ನು ನಾಟಿ ಮಾಡುತ್ತಾರೆ ಅದರೆ ಈ ಬಾರಿ ಕಾಲುವೆಯಿಂದ ಸಮರ್ಪಕವಾಗಿ ನೀರು ಹರಿಸದೆ ಇರುವುದರಿಂದ ಕೇವಲ 50 ಸಾವಿರ ಎಕರೆಯಲ್ಲಿ ಮಾತ್ರ ರೈತರು ಭತ್ತವನ್ನು ಬೆಳೆಯುವುದಕ್ಕೆ

ಸಾಧ್ಯವಾಗಿದೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ

ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ ರೈತರ

ಜಮೀನಿಗೆ ಕಾಲುವೆ ನೀರು ಹರಿಸುವುದಕ್ಕೆ ಯಾವುದೆ ಕ್ರಮ

ಕೈಗೊಳ್ಳದೆ ಇರುವುದರಿಂದ ರೈತರು ಇಂದು ಸಂಕಷ್ಟವನ್ನು

ಎದುರಿಸಬೇಕಾಗಿದೆ .ಬೆಂಗಳೂರಿನಲ್ಲಿ ಐ.ಸಿ.ಸಿ. ಸಮಿತಿಯ ಅಧ್ಯಕ್ಷರಾದ ಸಚಿವ

ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಾಹ ಸಮಿತಿ

ಸಭೆಯಲ್ಲಿ ಬೇಸಿಗೆ ಬೆಳೆಗೆ ಹಾಗೂ ಕುಡಿಯುವ ನೀರಿಗಾಗಿ ತುಂಗಭದ್ರ

ಜಲಾಶಯದಿAದ ಮೋದಲ ಹಂತದಲ್ಲಿ 15 ನೂರು ಕ್ಯೂಸೆಕ್ ,ನಂತರ

ಫೆ.1ರಿAದ ಮಾ.31 ರವರೆಗೆ ಎಡದಂಡೆ ಕಾಲುವೇ ಮೂಲಕ 3800 ಕ್ಯೂಸೆಕ್

ನೀರು ಬಿಡುವುದಾಗಿ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು

ತುಂಬಿಸುವುದಕ್ಕೆ ಕೂಡ ಕಾಲುವೆಯಲ್ಲಿ ನೀರು ಬಿಡಬೇಕೆಂದು

ತಿರ್ಮಾನಿಸಲಾಯಿತು ಅದ್ದರೆ ಮಾನ್ವಿ .ಸಿರವಾರ ಭಾಗದ ರೈತರ

ಜಮೀನುಗಳಿಗೆ ನೀರನ್ನು ಒದಾಗಿಸುವ ಕಾಲುವೆ ಮೈಲ್ 69 ಡಿಸ್ಟೂö್ಯಬ್ಯೂಟರ್

ನಲ್ಲಿ ಗೇಜ್ 8.8 ಅಡಿ ನೀರು ನಿರ್ವಹಿಸಬೇಕಾಗಿತ್ತು ಅದರೆ ಇಂದು ಕಾಲುವೆಯಲ್ಲಿ

ಕೇವಲ 8.175 ಗೇಜ್ ಮಾತ್ರ ನೀರು ಹರಿಯುತ್ತಿರುವುದರಿಂದ 300

ಕ್ಯೂಸೆಕ್ ನೀರು ಈ ಭಾಗಕ್ಕೆ ಕಡಿಮೆಯಾಗಿರುವುದರಿಂದ ಕೇಳ ಭಾಗದ

ರೈತರ ಜಮೀನುಗಳಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ,

ರೈತರು ಭತ್ತನಾಟಿ ಮಾಡುವುದಕ್ಕೆ ವಿಳಂಬವಾಗಿದ್ದು ಭತ್ತದ ಬೇಳೆ

ಕಾಳು ಕಟ್ಟುವ ಹಂತದಲ್ಲಿದ್ದು ಇನ್ನೂ ಎರಡು ಬಾರಿ ನೀರನ್ನು ಭತ್ತದ

ಬೆಳೆಗೆ ಹರಿಸಬೇಕಾಗಿರುವುದರಿಂದ ತುಂಗಭದ್ರ ಜಲಾಶಯದಲ್ಲಿ 23.786

ಟಿ.ಎಂ.ಸಿ ಯಷ್ಟು ನೀರಿನ ಸಂಗ್ರಹವಿರುವುದರಿAದ ಏ.20 ರವರೆಗೆ ಕಾಲುವೆಗೆ

ನೀರು ಹರಿಸಬೇಕು ಹಾಗೂ ಕುಡಿಯುವ ನೀರಿನ ಕೆರೆಗಳನ್ನು

ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ತಾಲೂಕಿನಲ್ಲಿ ಸಾವಿರಾರು

ಎಕರೆ ಜಮೀನಿಗೆ ನೀರುಣಿಸುವ ಯಡಿವಾಳ ಸೇರಿದಂತೆ ಇತರ ಏತನೀರಾವರಿ

ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ. ಜ್ಯಾತ್ಯತೀತ

ಜನತದಾಳ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು

ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ

ರಾಮಚಂದ್ರನಾಯಕ, ಜೆಡಿಎಸ್.ತಾ.ಅಧ್ಯಕ್ಷ ಡಾ.ಈರಣ್ಣ ಮಾರ್ಲಟ್ಟಿ, ಪ್ರಕಾಶ

ಅಮರವಾತಿ,ಮೌನೇಶ ಹರಟನೂರ್,ಬಾಷಸಾಬ್,ವೀರೇಶ,ಶರಣಪ್ಪ ಮೇದಾ,

ನಾಗರಾಜ ಭೋಗವತಿ,ಪಿ.ರವಿಕುಮಾರ,ಸುಬಾನ್ ಬೇಗ್,ಸೇರಿದಂತೆ ಜೆಡಿಎಸ್

ಪಕ್ಷದ ಮುಖಂಡರು ಇದ್ದರು.

12-ಮಾನ್ವಿ-4:

ಮಾನ್ವಿ:ಪಟ್ಟಣದ ಜ್ಯಾತ್ಯತೀತ ಜನತದಾಳ ಪಕ್ಷದ ಕಛೇರಿಯಲ್ಲಿ ಮಾಜಿ

ಶಾಸಕ ರಾಜಾ ವೆಂಕಟಪ್ಪನಾಯಕ ಸುದ್ದಿಗಾರರೊಂದಿಗೆ ಮಾತನಾಡಿದರು.

What's Your Reaction?

like

dislike

love

funny

angry

sad

wow