ಫೆ:23 ಕ್ಕೆ ತುರುವಿಹಾಳ ಪಟ್ಟಣದಲ್ಲಿ ಸಿಎಂ ಸಿದ್ದು DK C ಆಗಮನ ಹಲವು ಕಾರ್ಯಕ್ರಮಕ್ಕೆ ಚಾಲನೆ
On February 23, the arrival of CM Siddu DK C in the town of Turuvihal started many programs
ಮಸ್ಕಿ : ಶಾಸಕ ಆರ್ ಬಸನಗೌಡ ತುರುವಿಹಾಳ ರವರು ಪಟ್ಟಣದ ಶಾಸಕರ ಭವನದಲ್ಲಿ ಫೆಬ್ರುವರಿ 23 ರಂದು ಮುಖ್ಯಮಂತ್ರಿ ಕಾರ್ಯಕ್ರಮದ ಕುರಿತು ಸುದ್ದಿ ಗೋಷ್ಠಿ ನೆಡಿಸಿ ಮಾತಾಮಡಿದ ಅವರು
ಫೆ. 18 ರಿಂದ 23 ವರೆಗೆ 800 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜರುಗುತ್ತವೆ.
ಫೆಬ್ರುವರಿ . 23 ರಂದು ತುರುವಿಹಾಳ ಗ್ರಾಮದಲ್ಲಿ 75 ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ನಮ್ಮ ಸಹೋದರ ಮಗನ ಮದುವೆ ಹಾಗೂ ನನ್ನ ಮಗನ ಮದುವೆ ಜರುಗುವುದು. ಈ ಶುಭ ಕಾರ್ಯಕ್ರಮದಲ್ಲಿ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳು,ಇಬ್ಬರು ಸಂಸದರು,ವಿವಿಧ ಜಿಲ್ಲೆಯ ಶಾಸಕರುಗಳು ಹಾಗೂ ವಿವಿಧ ಮಠದ ಮಠಾಧೀಶರು ಭಾಗವಹಿಸಿ ನೂತನ ವಧು ವರರಿಗೆ ಶುಭ ಹಾರೈಸಲಿದ್ದು ಕ್ಷೇತ್ರದ ಜನರು, ಅಭಿಮಾನಿ ಬಳಗ ಪಕ್ಷದ ಕಾರ್ಯಕರ್ತರು ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುದ್ದಿಗೋಷ್ಠಿ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ
ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ,ಹನುಮಂತಪ್ಪ ಮುದ್ದಾಪುರ, ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಮೆಹಬೂಬ್ ಸಾಬ್ ಮುದ್ದಾಪುರ್, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು,ನಾಗಭೂಷಣ್ ಬಾರಿಕೇರ್ ಸಹಕಾರ ಸಂಘದ ಅಧ್ಯಕ್ಷರು ಮಸ್ಕಿ,ಕಾಂಗ್ರೆಸ್ ಮುಖಂಡರಾದ ಅಂದಾನಪ್ಪ ಗುಂಡಳ್ಳಿ,, ನಿರುಪಾದೆಪ್ಪ ವಕೀಲರು,ನಾರಾಯಣಪ್ಪ ಕಾಸ್ಲಿ,ರವಿ ಮಡಿವಾಳ,ಮಲ್ಲಯ್ಯ ಮುರಾರಿ, ಶಫಿಕ್ ಮಹಮ್ಮದ್ ಶಾಸಕರ ಆಪ್ತ ಸಹಾಯಕರಾದ ಶರಣೇಗೌಡ ಹಂದ್ರಾಳ, ಯಂಕನಗೌಡ, ಪಕ್ಷದ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
What's Your Reaction?






