ಸೋಶಿಯಲ್ ಡೆಮಾಕ್ರಟಿಕ್ ಪಾಟಿ೯ ಆಪ್ ಇಂಡಿಯಾ ವತಿಯಿಂದ ಸಮಾಜಿಕ ನ್ಯಾಯ ಸಮ್ಮೇಳನ.
ಮುದಗಲ್ಲ :- ಪುರಸಭೆ ರಂಗಮಂದಿರದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾಟಿ೯ ಆಪ್ ಇಂಡಿಯಾ ವತಿಯಿಂದ ಹಸಿವು ಮುಕ್ತ ಸ್ವಾತಂತ್ರ್ಯ ,ಭಯ ಮುಕ್ತ ಸ್ವಾತಂತ್ರ್ಯ ,ಸಮಾಜಿಕ ನ್ಯಾಯ ಸಮ್ಮೇಳನ ಹಾಗೂ ನೂತನವಾಗಿ ಆಯ್ಕೆಯಾದ ಜಿಲ್ಲಾ ನಾಯಕರಿಗೆ ಅಭಿನಂದನೆ ಕಾಯ೯ಕ್ರಮ ನಡೆಯಿತು.
ಸಮಾಜಿಕ ನ್ಯಾಯ ಸಮ್ಮೇಳನ ಕಾಯಾ೯ಕ್ರಮವನ್ನು ಸಸಿಗೆ ನೀರು ಹಾಕುವ ಮುಖಾಂತರ ಗಣ್ಯರಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹಾಗೂ ಅಬ್ದುಲ್ ಹುನ್ನಾನ್ ಹಾಗೂ ಆರ್ ಬಾಸ್ಕರ್ ಪ್ರಸಾದ್ , ರಮಾಜಾನ್ ಆರ್ ಕಡಿವಾಳ ,ಅಕ್ಬರ್ ಹುಸೇನ್ ನಾಗುಂಡಿ ಸೇರಿ ಗಣ್ಯರು ಉದ್ಘಾಟನೆ ಮಾಡಿದರು
ನಂತರ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾಟಿ೯ ಆಪ್ ಇಂಡಿಯಾ ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ್ದರು..ಇತ್ತೀಚೆಗೆ ವರದಿಯಾದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆಯೆಂದು ಕಂಡುಬಂದಿದೆ. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಹಾಗೂ ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗಿದೆ. ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಭಾರತವು 2000 ನೇ ಇಸವಿಯಲ್ಲಿ 83ನೇ ಸ್ಥಾನದಲ್ಲಿತ್ತು ಎನ್ನುವುದನ್ನು ಪರಿಗಣಿಸಿದರೆ, ಎರಡು ದಶಕಗಳಲ್ಲಿ ನಾವು ಸಾಧಿಸಿರುವ ಅಭಿವೃದ್ಧಿಯ ಅಸಲಿಯತ್ತಿನ ಬಗ್ಗೆಯೇ ಗಂಭೀರ ವಿಮರ್ಶೆ ನಡೆಯಬೇಕಿದೆ. ಸ್ವಾತಂತ್ರ್ಯ ಪಡೆದಂದಿನಿಂದ ಈವರೆಗೆ ಬಡತನ-ಹಸಿವು ನಿರ್ಮೂಲನಕ್ಕೆೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಗರೀಬಿ ಹಠಾವೊ’ದಿಂದ ಕರ್ನಾಟಕದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ಹಸಿವಿನ ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹವು. ಉಚಿತವಾಗಿ ಇಲ್ಲವೆ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ. ಇಷ್ಟೆಲ್ಲ ಕಾರ್ಯಕ್ರಮಗಳ ನಂತರವೂ ಹಸಿವಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ
2025-26ನೇ ಸಾಲಿಗೆ ಕಲ್ಯಾಣ ರಾಜ್ಯ ನಿರ್ಮಾಣದ ಜನಪರವಾದ ‘ಜನತಾ ಬಜೆಟ್’ನ್ನು ರಾಜ್ಯ ಸರಕಾರ ಮಂಡಿಸ ಬೇಕು ತಿಳಿಸಿದರು.
ಭಾರತ ಜಾತ್ಯಾತೀತ ರಾಷ್ಟ್ರ. ಭಾರತದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಕ್ಷಣ, ಸಮಾನತೆ, ವಾಕ್ ಸ್ವಾತಂತ್ರ್ಯ, ಇಚ್ಛೆಯ ಧರ್ಮವನ್ನು ಸ್ವೀಕರಿಸುವ ಹಕ್ಕುಗಳು, ಎಲ್ಲಿ ಬೇಕಾದರೂ ಜೀವಿಸುವ ಹಕ್ಕುಗಳು, ಹೀಗೆ ಇಷ್ಟೆಲ್ಲ ಸ್ವತಂತ್ರ ಹಕ್ಕುಗಳು ಇದ್ದರೂ, ದೇಶದ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡುತ್ತಿರುವ ಎಲ್ಲಾ ದುಷ್ಟಶಕ್ತಿಗಳನ್ನು ಶಮನ ಮಾಡಿ ಹಸಿವು ಮತ್ತು ಭಯ ಮುಕ್ತ ರಾಷ್ಟ್ರ ನಿರ್ಮಾಣದ ಶಪಥ ಮಾಡೋಣ.
ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಅನುಭವಿಸುವಾಗ, ಅದಕ್ಕಾಗಿ ತ್ಯಾಗ ಮಾಡಿದ ನಮ್ಮ ಪೂರ್ವಜರನ್ನು ಮರೆಯದಿರೋಣ ಎಂದು ಈ ಸಂದರ್ಭದಲ್ಲಿ ಹೇಳಿದರು
ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರಾಜ್ಯಾ ಉಪಾಧ್ಯಕ್ಷ ರಾದ ಅಬ್ದುಲ್ ಹಾನ್ನಾನ್ ಅವರು
ಹಸಿವು ಮುಕ್ತ ಸ್ವಾತಂತ್ರ್ಯ ಭಯ ಮುಕ್ತ ಸ್ವಾತಂತ್ರ್ಯ ಭಯ ಮುಕ್ತ ಸ್ವಾತಂತ್ರ್ಯ ಸಮಾಜಿಕ ನ್ಯಾಯ ಸಮ್ಮೇಳನ ಜನಪರವಾದ ಜನತಾ ಬಜೆಟ್’ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಅದಕ್ಕಿಂತ ಮುಖ್ಯವಾಗಿ ಹಸಿವು ಮುಕ್ತ, ಭಯ ಮುಕ್ತವಾದ ವಾತಾವರಣ ನಿರ್ಮಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಏಕರೂಪ, ಸಂಪೂರ್ಣ ಉಚಿತ ಶಿಕ್ಷಣ ಕೊಡಬೇಕು. ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲವೆಂದು ನಿರ್ಣಯ ಅಂಗೀಕರಿಸಬೇಕು. ಎಲ್ಲ ತಾಲ್ಲೂಕುಗಳಲ್ಲಿ ಸುಸಜ್ಜಿತ ಸರ್ಕಾರಿ ಪದವಿ ಕಾಲೇಜು ನಿರ್ಮಿಸಬೇಕು ಎಂದುರು
ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಗಾತ್ರ ಹೆಚ್ಚಿಸಬೇಕು. ಉರ್ದು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದುರು
ರಾಷ್ಟ್ರೀಯ ಸಮಿತಿಯ ಸದಸ್ಯರಾದ ಮಾತನಾಡಿದ ಸಯ್ಯದಾ ಸಾದಿಯಾ ಮತೀಯ ಹಾಗೂ ಜಾತಿ ಆಧಾರಿತ ದೌರ್ಜನ್ಯ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಶಾಂತಿ ಕಾಪಾಡಲು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವುದರಿಂದ ಯುವಕರು ತೊಂದರೆಗೆ ಸಿಲುಕಿದ್ದಾರೆ. ಖಾಲಿ ಉಳಿದ ಸರ್ಕಾರಿ ಹುದ್ದೆಗಳನ್ನು ತುಂಬಬೇಕು. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರಾದ ಬಾಸ್ಕರ್ ಪ್ರಸಾದ್ ಶ್ರೀ ರಮಾಜಾನ್ ಆರ್ ಕಡಿವಾಳ ,ಅಕ್ಬರ್ ಹುಸೇನ್ ನಾಗುಂಡಿ ಮಾತನಾಡಿದರು
ಈ ಸಂದರ್ಭದಲ್ಲಿ ರಾಯಚೂರು ಗ್ರಮಾಂತರ ಜಿಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಎಂ.ಡಿ ರಫಿ,ಖಾದರ್ ಪಾಶ,ಪಾಶ ಕಡ್ಡಿಪುಡಿ, ಅಜಾಜ್ ಅಹಮದ್,ಅಮೀರ್ ಅಲಿ ಜಂಶೀರ್ ಅಲಿ, ಬಾಬ RMK,MD ,RAZA,QAZI, ಪಾರೂಕ್ ಬೇಗ್ , ಕಾಸೀಂ ಇತರರು ಉಪಸ್ಥಿತರಿದ್ದರು..
What's Your Reaction?






