ಟಗರು ತನ್ನ ಸ್ಥಾನದಲ್ಲಿ ಗಟ್ಟಿಯಾಗಿ ಕೂತಿದೆ, ಕೆಳಗೆ ಇಳಿಸೋಕೆ ಆಗಲ್ಲ: ಜಮೀರ್ ಖಾನ್
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ವಸತಿ ಸಚಿವ ಜಮೀರ್ ಅಹ್ಮದ್, ಸದ್ಯ ಸಿಎಂ ಕುರ್ಚಿ ಖಾಲಿಯಿಲ್ಲ. 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಜಾತಿಯವರಿಗೂ ಸಿಎಂ ಆಗಬೇಕು ಎಂದು ಆಸೆ ಇರುತ್ತೆ. ದಲಿತರು, ಮುಸಲ್ಮಾನರು, ಒಕ್ಕಲಿಗರು
ಎಲ್ಲರೂ ಸಿಎಂ ಆಗಲು ಬಯಸುತ್ತಿದ್ದಾರೆ. ಆದರೆ, ಐದು ವರ್ಷಗಳಿಂದ ಸಿಎಂ ಹುದ್ದೆ ಖಾಲಿ
ಇಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದರು.
ಸಿಎಂ ಕುರ್ಚಿಯಲ್ಲಿ ಟಗರು ಗಟ್ಟಿಯಾಗಿ ಕುಳಿತುಕೊಂಡಿದೆ. ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಅವರನ್ನು ಯಾರೂ ಕೆಳಗಿಳಿಸಲ್ಲ ಎಂದು ತಿಳಿಸಿದ್ದಾರೆ.
What's Your Reaction?