ಎಸ್,ಎಸ್,ಎಲ್,ಸಿ,ಪರೀಕ್ಷೆಯಲ್ಲಿ ಬಳಗಾನೂರಿನ ಉಬಯ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ.
2024-25 ನೇ ಶೈಕ್ಷಣಿಕ ಸಾಲಿನ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಗಳು ಮಾರ್ಚ್ ಏಪ್ರೀಲ್ ಮಾಹೆಯಲ್ಲಿ ನಡೆದು ಇಂದು ರಾಜ್ಯದಾದ್ಯಂತ ಫಲಿತಾಂಶ ಪ್ರಕಟಗೊಂಡಿದ್ದು. ಅದರಲ್ಲಿ ಬಳಗಾನೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮಿ ತಂದೆ ನಾಗೇಶ 579ಅಂಕಗಳನ್ನು ಪಡೆದು ಪ್ರತಿಶತ 92.64% ಮಾಡುವಮೂಲಕ ಶಾಲೆಗೇ ಪ್ರಥಮಸ್ಥಾನಪಡೆದಿದ್ದಾರೆ. ಸಂಜಯ ಕುಮಾರ ತಂದೆ ಅಮರೇಶ ತೋರಣದಿನ್ನಿ 527 ಅಂಕಗಳನ್ನು ಪಡೆದು ಪ್ರತಿಶತ 84.32% ಮಾಡಿ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಮಲ್ಲಿಕಾರ್ಜುನ ತಂದೆ ಶರಣಬಸವ ಎಂಬ ವಿದ್ಯಾರ್ಥಿ 521 ಅಂಕಗಳನ್ನು ಪಡೆದು 83.36% ಪ್ರತಿಶತ ಮಾಡಿ ಶಾಲೆಗೆ ತೃತೀಯಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯ 79 ಅದರಲ್ಲಿ ಉತ್ತೀರ್ಣರಾದವರ ಸಂಖ್ಯ32 ಅನುತ್ತೀರ್ಣರಾದವರ ಸಂಖ್ಯ 47 ಒಟ್ಟು ಶಾಲಾ ಫಲಿತಾಂಶ 40.50% ಆಗಿದೆ. ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾಧ್ಯಾಯಿನಿ ಮಹಾದೇವಮ್ಮ ಹಾಗೂ ಶಿಕ್ಷಕ ವೃಂದ ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಬೋಧಕೇತರ ಸಿಬ್ಬಂಧಿವರ್ಗ ಪಾಲಕರು ಶುಭಕಾಮನೆಗಳನ್ನು ತಿಳಿಸಿದ್ದಾರೆ. ಅದೇರೀತಿ ಬಳಗಾನೂರಿನ ಅನುದಾನಿತ ಶಾಲೆ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಸಹನಾ ಮೇಟಿ 555 ಅಂಕಗಳನ್ನು ಪಡೆದು ಶೇಕಡಾ 88.8%ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ,59 ಉತ್ತಿರ್ಣರಾದವರ ಸಂಖ್ಯೆ,37 ಅನ್ನುತ್ತಿರ್ಣರಾದವರ ಸಂಖ್ಯೆ,22 ಒಟ್ಟು ಶಾಲಾ ಶೇಕಡಾ ಫಲಿತಾಂಶ, 62.71% ಆಗಿದೆ. ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾಧ್ಯಾಯರಾದ ಅಮರನಾಥ ಹಳ್ಳೂರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ನಿರ್ದೇಶಕರುಗಳು,ಶಿಕ್ಷಕ ವೃಂದ ಬೋಧಕೇತರ ಸಿಬ್ಬಂಧಿವರ್ಗ ಪಾಲಕರು ಶುಭಕಾಮನೆಗಳನ್ನು ತಿಳಿಸಿದ್ದಾರೆ. ವರದಿ,,,ಸುರೇಶ ಬಳಗಾನೂರು.
What's Your Reaction?






