ಅಂಬೇಡ್ಕರ್ ಎಂಬ ಹಾಲದಮರ
ಅಂಬೇಡ್ಕರ್ ಎಂಬ ಹಾಲದಮರ ಧರೆಗಿಳಿದ ಶೋಷಿತರಪಾಲಿನ ವರ ಅಂತ್ಯಜರ ಕಾವಲಿಗೆ ರಾಜ್ಯಾಂಗದ ಕೋಟೆ ಕಟ್ಟಿದ ಸರದಾರ ಸಕಲರಿಗೂ ಕೊಟ್ಟ ಯಾರೂ ಪ್ರಶ್ನಿಸದ ಅಧಿಕಾರ ಮಾನವನಲ್ಲ ಪಂಜರದ ಅರಗಿಣಿ ಮೋಡಗಳಿಗೆ ಮುತ್ತಿಕ್ಕುವ ಬಾನಾಡಿ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದ್ದು ಅದಾವಧರ್ಮ? ವೇಧ,ಪುರಾಣಗಳನ್ನೋದಿದ ಪಂಡಿತರಿಗೆ ಅದ್ಯಾಕೋ ತಿಳಿಯಲಿಲ್ಲ ಇಂತಹ ಅತಿಸಣ್ಣ ಮರ್ಮ. ತುಳಿದರು ಬುದ್ದನ ದಾರಿ, ತಿಳಿಸಿದರು ಬದುಕಿನಾ ಗುರಿ. ಗುಡಿಗುಂಡಾರಗಳ ಬದಲು ಗ್ರಂಥಾಲಯ ಕಟ್ಟಿಸಿ. ಹರಕು ಬಟ್ಟೆ ಇದ್ದರೂ ವೈಚಾರಿಕ ಪುಸ್ತಕವ ದಿಟ್ಟಿಸಿ ಎಂದ ಧರೆಗಿಳಿದ ದೇವಮಾನವ ನಿನ್ನ ಜನ ಉಂ ಎಂದರೆ ನೂರುಗಾವುದು ಓಡುವ ಅಶ್ವಮೇಧ ಕುದುರೆ. ಕಟ್ಟಿಹಾಕಲೋದರೆ ಯಾವಚಕ್ರವರ್ತಿಯದ್ದಾದರೂ ಸಾಮ್ರಾಜ್ಯ ಚೂರುಚೂರೆ. ನೀವು ಬರೆದ ಸಂವಿಧಾನ, ನಿಮ್ಮ ಮಕ್ಕಳಿರುವತನಕ ಜೋಪಾನ. ಮಹಾನಾಯಕ ನಿಮ್ಮ ಸಂವಿಧಾನವೇ ಇಲ್ಲಿ ಅಧಿನಾಯಕ. ರಚನೆ:- ಸುರೇಶ ಬಳಗಾನೂರು
What's Your Reaction?






