ಮರಳು ದಂಧೆ ಕೋರರ  ಧನದಾಹಕ್ಕೆ ನಲುಗುತ್ತಿದೆ ಬಳಗಾನೂರು ಭೂತಾಯಿಯ ಮಡಿಲು..!

ಮರಳು ದಂಧೆ ಕೋರರಿಂದ ಭೂತಾಯಿಯ ಒಡಲಿಗೆ ಕನ್ನ..! ಸರ್ಕಾರದ ಬೊಕ್ಕಸಕೆ ಗುನ್ನ..!? ರಾಜಕೀಯ ಪ್ರೇರಿತ ಶಕ್ತಿಯನ್ನು ಮಟ್ಟ ಹಾಕುವ ಸಾಮರ್ಥ್ಯ ಅಧಿಕಾರಿಗಳಿಗೆ ಇಲವೇ !? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶರತ್ತುಗಳನ್ನು ಧಿಕ್ಕರಿಸುವ ಮರಳುದಂಧೆ ಕೋರರ ಅಟ್ಟಹಾಸಕ್ಕೆ  ಕ್ರಮ ಎಂದು!?

Apr 6, 2025 - 07:24
Apr 6, 2025 - 14:27
 0  34

ಹೌದು ಪ್ರಿಯ ವೀಕ್ಷಕರೇ  ಪ್ರಜಾಪ್ರತಿ ಧ್ವನಿ ಕನ್ನಡ ಸುದ್ದಿ ವಾಹಿನಿಯು ವಿಶೇಷ ವರದಿ ಒಂದನ್ನು ಪ್ರಸ್ತುತಪಡಿಸುತ್ತಿದೆ.

ಪುರಾತನ ಕಾಲದ ಭಾರತದಲ್ಲಿ ಅತ್ಯಂತ ಸಂಪತ್‌ ಭರಿತ ಸಂಪನ್ಮೂಲಗಳನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಮ್ಮ ದೇಶ ದೇಶವಾಸಿಗಳಿಗೆ ಅದ್ಭುತವಾದ ‌ ಮೂಲಭೂತ ‌ ಸೌಕರ್ಯಗಳ ಕೊಡುಗೆಗಳನ್ನು ನೀಡಿತ್ತು. ನಮ್ಮಲ್ಲಿರುವ ಖನಿಜ ಸಂಪತ್ತು, ಪರಿಸರ ಸಂಪತ್ತು, ಜಲಮೂಲದ ಸಂಪತ್ತು ಹೀಗೆ ಹತ್ತು ಹಲವು ರೀತಿಯಲ್ಲಿ ಬಹುದೊಡ್ಡ  ಸಂಪನ್ಮೂಲಗಳ ಭಂಡಾರವನ್ನು ಹೊಂದಿದ್ದ  ಭೂಮಿಯನ್ನು ನಮ್ಮ ಪೂರ್ವಜರು ರಕ್ಷಿಸಿ ಉಳಿಸಿ ಬೆಳೆಸಿ ನಮ್ಮ ಪೀಳಿಗೆಗೆ ಕೊಟ್ಟ ಪರಿಣಾಮವಾಗಿ ಇಂದು ನಾವು ಆನಂದದಿಂದ ಸುಖಮಯ ಜೀವನ ನಡೆಸುತ್ತಿದ್ದೇವೆ ಎಂದರೆ ತಪ್ಪಾಗಲಾರದು. 

ಆದರೆ ಮುಂದುವರೆದ ಇಂದಿನ ಆಧುನಿಕ ‌ ದಿನಮಾನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಭರಾಟೆಯಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದ ಸ೦ಪನ್ಮೂಲಗಳ ವಿನಾಶ ನಡೆಯುತ್ತಿರುವುದನ್ನು  ನೋಡಿದರೆ ನಮ್ಮ ಅವನತಿಗೆ ನಾವೇ ಹಳ್ಳ ತೋಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರಿಗೆ ಕಾಡುವ ಗಂಭೀರ ಪ್ರಶ್ನೆಯಾಗಿದೆ.

ಹೌದು ಈಗ ನಾನು ಹೇಳ ಹೊರಟಿರುವುದು ಭೂ ಮಾತೆಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ಕುರಿತು. ಮಸ್ಕಿ, ಬಳಗಾನೂರು ವ್ಯಾಪ್ತಿಯ  ಬೆಳ್ಳಿಗನೂರು, ಜಾಲವಾಡಗಿ ಗ್ರಾಮೀಣ ಪ್ರದೇಶಗಳ ಅವಸ್ಥೆ  ಹಗಲು ರಾತ್ರಿ ಎನ್ನದೆ  ದೊಡ್ಡ  ಗಾತ್ರದ 20 ಟನ್  ವರೆಗಿನ ಮರಳು ಟಿಪ್ಪರ್ ಗಳ ಮೂಲಕ ಸಾಗಾಟದಿಂದ ಸಾರ್ವಜನಿಕರು ಓಡಾಡುವ  ಗ್ರಾಮೀಣ ಪ್ರದೇಶದ ರಸ್ತೆಗಳು ತೆಗ್ಗು ಗುಂಡಿಗಳಾಗಿ   ಸಂಪೂರ್ಣ ಹಾಳಾಗಿ ಸಾರ್ವಜನಿಕರ ದಿನ ನಿತ್ಯ ಆಸ್ಪತ್ರೆ, ಶಾಲೆಗಳಿಗೆ, ಸೇರಿದಂತೆ ಪಟ್ಟಣ ಪ್ರದೇಶಕ್ಕೆ ಕೆಲಸ ಕಾರ್ಯಗಳಿಗೆ ಓಡಾಡಲು ನರಕಯಾತನೇ ಅನುಭವಿಸುವಂತಾಗಿದೆ. ಗ್ರಾಮೀಣ ಪ್ರದೇಶದ ಪ್ರಗತಿಪರ ಚಿಂತಕರು ಸಾರ್ವಜನಿಕರು, ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳಿಗೆ  ಹಲವು ಬಾರಿ  ಪ್ರತಿಭಟನೆ ಮನವಿ ಹಾಗು ಪತ್ರಿಕೆ ಮಾಧ್ಯಮಗಳ ವರದಿ ಮೂಲಕ  ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇದರಿಂದ ತಿಳಿಯುತ್ತದೆ ಕೆಲ ಜನಪ್ರತಿನಿಧಿ  ಅಧಿಕಾರಿಗಳ  ನೆರಳಲ್ಲಿ ನಡೆಯುತ್ತಿರುವ  ಮರಳು ಸಾಗಾಟ ದಂಧೆ ಕೋರರಿಂದ  ಗ್ರಾಮೀಣ ಭಾಗದ ಸಾರ್ವಜನಿಕ ಹಿತ ರಕ್ಷಣೆಯಾಗುವುದೇ  ಎಂಬ ಯಕ್ಷಪ್ರಶ್ನೆ ಮೂಡುತ್ತಿದೆ.

 ಇಡೀ ಪ್ರಪಂಚ ಈ ಭೂಮಾತೆಯ ಮೇಲೆ ನಿಂತಿದೆ. 84 ಲಕ್ಷ ಕೋಟಿ ಜೀವರಾಶಿಗಳಿಗೂ ಆಶ್ರಯ ನೀಡಿರುವ ಭೂತಾಯಿಯ ರೋಧನೆ ಯಾರಿಗೂ ಕೇಳಿಸುತ್ತಿಲ್ಲವೇ...? ಈಗ ನಾನು ಹೇಳುತ್ತಿರುವುದು ಅಂತಿಂಥ ವಿಷಯವಲ್ಲ. ಮುಂದೊಂದು ದಿನ ಮನುಕುಲಕ್ಕೆ ಬಹುದೊಡ್ಡ ಗಂಡಾಂತರ ತಂದೊಡ್ಡಬಲ್ಲ ಸತ್ಯ ಸಂಗತಿ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.

ಹೌದು ಇಂದು ನಾವು " ಭೂತಾಯಿಯ

ಒಡಲಿಗೆ ಕನ್ನ ಹಾಕಿ ಸರ್ಕಾರದ ಬೊಕ್ಕಸಕ್ಕೆ ಗುನ್ನ ಇಡುತ್ತಿರುವ ಮರಳು ಮಾಫಿಯಾದ ಬಗ್ಗೆ ಧ್ವನಿ ಎತ್ತದಿದ್ದರೆ ಹಾಗೂ ಸಾಮೂಹಿಕ ಭೂಮಿಯನ್ನು ಪಟ್ಟ ಭದ್ರ ಹಿತಾಸಕ್ತಿಗಳ ಅತಿಕ್ರಮಣದಿಂದ ಸಂರಕ್ಷಣೆ ಮಾಡದೇ ಹೋದರೆ ತೀವ್ರತರವಾದ ಭಾರೀ ಸಂಕಷ್ಟಗಳನ್ನು ಎದುರಿಸಲು ಸಿದ್ಧಾರಾಗಲೇಬೇಕು. ಗ್ರಾಮೀಣ ಭಾಗದಲ್ಲಿ ರೈತರ ಪಟ್ಟ ಭೂಮಿ , ಅರಣ್ಯ ಗೋಮಾಳ  ಪ್ರದೇಶಗಳಲ್ಲಿ ಬೃಹತ್ ಹಿಟಾಚಿ ಮತ್ತು ಜೆಸಿಬಿ ಗಳು ಗರ್ಜನೆ ನಡೆಸುತ್ತಾ ಭೂತಾಯಿಯ ಗರ್ಭವನ್ನು ಆಳವಾಗಿ ಸೀಳುತ್ತಾ ಫಲವತ್ತಾದ ಮರಳು, ಮಣ್ಣು 

 ಕೊಳ್ಳೆ ಹೊಡೆಯುತ್ತಿರುವ ಭೂಗಳ್ಳರ ಧನ ದಾಹಕ್ಕೆ ಕೊನೆ ಎಂದು...? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಬಂಧನೆಗಳು ಮತ್ತು ಶರತ್ತುಗಳನ್ನು ಧಿಕ್ಕರಿಸಿ ಅಟ್ಟಹಾಸ ಮೆರೆಯುತ್ತಿರುವ ಮರಳು ಭೂಗಳ್ಳರ ಮೇಲೆ ಕ್ರಮ ಕೈಗೊಳ್ಳಲು ನರಸತ್ತ ನಪುಂಸಕರಂತೆ ವರ್ತಿಸುತ್ತಿರುವ ಅಧಿಕಾರಿಗಳ ನಡೆ ಏನು...? ಈ ನೆಲದ ಕಾನೂನು ಜನಸಾಮಾನ್ಯರಿಗೆ ಒಂದು ಹಾಗೂ ಪಟ್ಟ ಭದ್ರ ಹಿತಾಶಕ್ತಿಗಳಿಗೆ ಮತ್ತೊಂದಾ...? 

ಮರಳು ಮತ್ತು ಭೂ ಮಾಫಿಯಾದಲ್ಲಿ ಆಳವಾಗಿ ಬೇರು ಬಿಟ್ಟಿರುವ ಭೂಗಳ್ಳರ ರಾಜಕೀಯ ಪ್ರೇರಿತ ಶಕ್ತಿಯನ್ನು ಮಟ್ಟ ಹಾಕುವ ಗಂಡಸ್ತನ ಅಧಿಕಾರಿಗಳಿಗೆ ಇಲ್ಲದಿರುವುದೇ  ಮಾಫಿಯಾ ರಾಜ್ಯಾದ್ಯಂತ ಎಗ್ಗಿಲ್ಲದೇ ಬೆಳೆದು ನಿಂತಿದೆ. 

ಜನನಿಭಿಡ ಪ್ರದೇಶದಲ್ಲಿ  ತೆಗೆಯುತ್ತಿರುವ 40 -50 ಅಡಿ ಆಳ ಕಂದಕಗಳು ಅಮಾಯಕರ ಸಾವಿಗಾಗಿ ಕೈಬೀಸಿ ಕರೆಯಲು ಸಜ್ಜಾಗಿ ನಿಂತಿವೆ. ಮತ್ತೊಂದು ಕಡೆ ಅವಿದ್ಯಾವಂತ ಬಡ ರೈತರೇ ಇವರ ಟಾರ್ಗೆಟ್. ಬಡ ರೈತರನ್ನು ಪುಸಲಾಯಿಸಿ ಅವರಿಗೆ ಇಲ್ಲ ಸಲ್ಲದ ಆಮಿಷಗಳನ್ನು ಒಡ್ಡಿ ಅವರಿಗಿರುವ ಸಣ್ಣ ಪುಟ್ಟ ಜಮೀನುಗಳಲ್ಲಿ ಫಲವತ್ತಾದ ಮಣ್ಣು ,ಮರಳು ತೆಗೆದು ಜಿಲ್ಲಾಧ್ಯಂತ ಹಾಗೂ ನೆರೆ ಜಿಲ್ಲೆಗಳಿಗೆ  25 ರಿಂದ 30 ಸಾವಿರದವರೆಗೆ ಒಂದು ಟಿಪ್ಪರ್ ಮರಳು ಮಾರಾಟ 

 ಮಾಡುತ್ತಿರುವ  ದಂಧೆ ಕೋರರ  ಬೂದಾಹಕ್ಕೆ ಗ್ರಾಮೀಣ ಪ್ರದೇಶದ   ಬಡ ರೈತಾಪಿಗಳು ಬಲಿಯಾಗುತ್ತಿರುವುದು ದುರಂತವೇ ಸರಿ. 

What's Your Reaction?

like

dislike

love

funny

angry

sad

wow