ಕೆ.ಕೆ.ಆರ್.ಡಿ. ಬಿ. ಕಾಮಗಾರಿ ವಿಳಂಬ ಗಾಂಧಿನಗರ 20ನೇ ವಾರ್ಡ ನ ನಿವಾಸಿಗಳು ಹೈರಾಣ..! ಶಾಸಕರು ಮೌನ.
ಹೌದು ಪ್ರೀಯ ವೀಕ್ಷಕರೇ ಮಸ್ಕಿ: ಗಾಂಧಿನಗರ 20ನೇ ವಾರ್ಡ್ ಅಭಿವದ್ಧಿ ವಂಚಿತ ಎಂಬ ಹಣೆಪಟ್ಟಿ ಕಟ್ಟಿಕೊಂಡ ಶಾಪ ಗ್ರಸ್ತಾ ಬಡಾವಣೆ ಯಾಗಿ ನಿರ್ಮಾಣ ವಾಗಿದೆ. ಸುಮಾರು ವರ್ಷಗಳು ಕಳೆದರು ಕನಿಷ್ಠ ಮೂಲಭೂತ ಸೌಕರ್ಯಗಳಾದ ಸುಸರ್ಜಿತ ರಸ್ತೆ,ಚರಂಡಿ, ಸೇರಿದಂತೆ ಸರಕಾರದ ಕನಿಷ್ಠ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಜನಪ್ರತಿನಿಧಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆಂದು ಮಸ್ಕಿ ಗಾಂಧಿನಗರದ ನಿವಾಸಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದರೆ. ಜೊತೆಗೆ ಪ್ರಗತಿ ಪರ ಜೈ ಕರುನಾಡು ರಕ್ಷಣಾ ಸೇನೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ಬಸವಂತ ಹಿರೇಕಡುಬುರು ಗಾಂಧಿನಗರ 20ನೇ ವಾರ್ಡಿನ ಬಡಾವಣೆಯ ಅವಸ್ಥೆ ಕಂಡು ಪತ್ರಿಕೆ ಮಾಧ್ಯಮ ವರದಿಗಾರ ಮುಂದೆ ಜನಪ್ರತಿನಿಧಿ ಅಧಿಕಾರಿಗಳ ದಿವ್ಯ ನಿರ್ಲಕ್ಷ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ 2020-21ನೇ ಸಾಲಿನಲ್ಲಿ ಟೆಂಡರ್ ಆದ ಪಟ್ಟಣ ರಸ್ತೆ ಕಾಮಗಾರಿಯು ಎರಡು ವರ್ಷಗಳು ಕಳೆದರು ಆರಂಭವಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ವಾರ್ಡ್‌ಗಳಾದ 1, 15, 20 ಹಾಗೂ 23ರಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಶಾಸಕ ಆರ್.ಬಸನಗೌಡ ತುರ್ವಿಹಾಳ ₹30 ಲಕ್ಷ ಅನುದಾನ ಇಟ್ಟಿದ್ದರು.ಆ ಕಾಮಗಾರಿಯ ಗುತ್ತಿಗೆ ಪಡೆದ ಮಾನ್ವಿ ಮೂಲದ ಗುತ್ತಿಗೆದಾರ ಬಸವರಾಜ ಕೆ., 2021ರ ಡಿಸೆಂಬರ್ 31ರಂದು ಲೋಕೋಪಯೋಗಿ ಇಲಾಖೆಯ ರಾಯಚೂರು ವಿಭಾಗದ ಅವರೊಂದಿಗೆ ಕಾಮಗಾರಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು.
ಮೂಲ ಗುತ್ತಿಗೆದಾರರು ಮತ್ತೊಬ್ಬ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಿದ್ದು, ನಾಲ್ಕು ಕಾಮಗಾರಿಗಳ ಪೈಕಿ ಒಂದನ್ನು ಮಾಡಿ ಮಿಕ್ಕಿದ್ದನ್ನು ಬಿಟ್ಟು ಹೋಗಿದ್ದಾರೆ.
ವಾರ್ಡ್‌ಗಳ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸಲು ಅನುದಾನ ಇಟ್ಟು ಟೆಂಡರ್ ನಡೆಸಿದರು, ಎರಡು ವರ್ಷಗಳಿಂದ ಕಾಮಗಾರಿ ಆರಂಭವಾಗದೇ ಇರುವುದಕ್ಕೆ
ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಬಸವರಾಜ ಕೆ. ಅವರಿಗೆ ಲೋಕೋಪಯೋಗಿ ಇಲಾಖೆಯಿಂದ ಹಲವು ಬಾರಿ ನೋಟಿಸ್ ನೀಡಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇವೆ ಆದರೆ ಕೆಲಸ ಮಾಡುತ್ತಿಲ್ಲ' ಎಂದು ಪಿಡಬ್ಲ್ಯುಡಿ ಇಲಾಖೆ ಎಂಜಿನಿಯರ್ ಪತ್ರಿಕೆ ಮಾಧ್ಯಮದ ವರದಿಗಾರರ ಮುಂದೆ ತಿಳಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದರು. ಆದರೆ ಗುತ್ತೇದಾರರು ಕಾಮಗಾರಿ ಮಾಡದೆ ಕೈ ತೊಳೆದುಕೊಂಡಿದ್ದಾರೆ .
ಮತ್ತೆ ಎರಡನೇ ಬಾರಿ ಕೆ.ಕೆ. ಆರ್. ಡಿ.ಬಿ. ಯೋಜನೆಯಲ್ಲಿ ಕಾಮಗಾರಿ ಮಾಡಲು ಸೆಪ್ಟೆಂಬರ್ 30/ 2024ರಂದು ಶಾಸಕರು ಅದೇ ರಸ್ತೆಗೆ ಎರಡನೇ ಬಾರಿ ಭೂಮಿಪೂಜೆ ಮಾಡಿದ್ದಾರೆ. ಕಾಮಗಾರಿಗೆ ಬಿಡುಗಡೆಯಾದ 89 ಲಕ್ಷ ದಲ್ಲಿ ಸಂತೆಕೆಲ್ಲೂರು, ಕಡೆದರಾಳು, ಮಟ್ಟೂರು, ಸೇರಿದಂತೆ ಪ್ರತೇಕ ಮಸ್ಕಿ ಗಾಂಧಿನಗರ 20ನೇ ವಾರ್ಡಿಗೆ 11 ಲಕ್ಷದ ರೂಪಾಯಿ ಮೌಲ್ಯ ಸಿಸಿ ರಸ್ತೆ ಮಾಡಲು ಸೆಪ್ಟೆಂಬರ್ ತಿಂಗಳಲ್ಲಿ ಎರಡನೇ ಬಾರಿ ಭೂಮಿ ಪೂಜೆ ಮಾಡಿ ಇದುವರೆಗೂ ಕಾಮಗಾರಿ ಭೂಮಿ ಪೂಜೆ ಯಾಗಿ ನಾಲ್ಕು ವರ್ಷ ಮೂರು ತಿಂಗಳು ಕಳೆದರೂ ಕೂಡ ಗಾಂಧಿನಗರದಲ್ಲಿ ಸಿಸಿ ರಸ್ತೆ ಮಾಡಿಕೊಡಲು ಶಾಸಕರು , ಅಧಿಕಾರಿಗಳು, ಗುತ್ತೇದಾರರು ನಿರ್ಲಕ್ಷೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಒಟ್ಟಾರೆಯಾಗಿ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ವಂತಾಗಿದೆ.
ಸ್ಥಳೀಯ ಶಾಸಕರು ಹಾಗೂ ಸರ್ಕಾರ ಹಿಂದುಳಿದ ಪ್ರದೇಶಕ್ಕೆ ಒಳಪಡುವ ತಾಲ್ಲೂಕುಗಳ ಅಭಿವೃದ್ಧಿ ಇಲಾಖೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ನಮ್ಮದಲ್ಲದ ಕೆಲಸಕ್ಕೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂಬಂತೆ ಗಾಂಧಿನಗರದ 20ನೇ ವಾರ್ಡಿನ ಸಿಸಿ ರಸ್ತೆ ನಿರ್ಮಾಣ ಕಾರ್ಯ ಯೋಜನೆಯಲಿಲ್ಲದ ಕಾಮಗಾರಿಯನ್ನು ಮಾಡುವುದಿಲ್ಲ ವೆಂದು ಸಾರಾ ಸಗಟ್ಟಾಗಿ ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಮಸ್ಕಿ: ಗಾಂಧಿನಗರ 20ನೇ ವಾರ್ಡ್ ಅಭಿವದ್ಧಿ ವಂಚಿತ ಎಂಬ ಹಣೆಪಟ್ಟಿ ಕಟ್ಟಿಕೊಂಡ ಶಾಪ ಗ್ರಸ್ತಾ ಬಡಾವಣೆ ಯಾಗಿ ನಿರ್ಮಾಣ ವಾಗಿದೆ.
ಈಗಲಾದರೂ ಶಾಸಕರು , ಅಧಿಕಾರಿಗಳು ಎಚ್ಚೆತ್ತುಕೊಂಡು ಅಭಿವದ್ಧಿ ವಂಚಿತ ಎಂಬ ಹಣೆಪಟ್ಟಿ ಕಟ್ಟಿಕೊಂಡ ಶಾಪ ಗ್ರಸ್ತಾ ಬಡಾವಣೆಯ ಕಳಂಕಪಟ್ಟಿ ಕಳಚಿ ಮಸ್ಕಿ ಗಾಂಧಿನಗರ 20ನೇ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುವರೆ ಅಥವಾ ನಿರ್ಲಕ್ಷ ತೋರುವರೆ ಎಂದು ಕಾದು ನೋಡಬೇಕಾಗಿದೆ.
What's Your Reaction?