ಜುಲೈ 4ಕ್ಕೆ ರಾಜ್ಯದಾದ್ಯಂತ “ಹೆಬ್ಬುಲಿ ಕಟ್” ಬಿಡುಗಡೆ ವೀಕ್ಷಿಸಲು ಮನವಿ : ಶಿವಕುಮಾರ ಮ್ಯಾಗಳಮನಿ.

Jul 3, 2025 - 06:10
 0  18

ರಾಯಚೂರು, ಜುಲೈ 2: ಸಮಾಜದ ಕಳಕಳಿಗೆ ಸ್ಪಂದಿಸುವ “ಹೆಬ್ಬುಲಿ ಕಟ್” ಕನ್ನಡ ಚಲನಚಿತ್ರವನ್ನು ಜಿಲ್ಲೆ ಮತ್ತು ರಾಜ್ಯದ ಜನರು ವೀಕ್ಷಿಸಿ ಬೆಂಬಲಿಸಲು ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವಕುಮಾರ ಮ್ಯಾಗಳಮನಿ ಅವರು ಬುಧವಾರ ರಾಯಚೂರು ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.

ಜಿಲ್ಲೆಯ ಕ್ರಿಯಾಶೀಲ ಪತ್ರಕರ್ತ ಪಿ.ಭೀಮರಾವ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸಮಾಜದ ವಿವಿಧ ಸಮಸ್ಯೆಗಳ ಕುರಿತಾಗಿ ಕಥಾವಸ್ತು ಹೆಣೆಯಲಾಗಿದೆ. ಈಗಾಗಲೇ ಚಿತ್ರದ ಆಡಿಯೋ, ಮ್ಯೂಸಿಕ್ ಮತ್ತು ಟ್ರೇಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ವಿಶೇಷವಾಗಿ ಚಿತ್ರದ ಹಾಡುಗಳು ಸಹ ಗಮನಸೆಳೆದಿವೆ.

ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿರುವ ಈ ಸಿನಿಮಾದಲ್ಲಿ ಜಾತಿ ತಾರತಮ್ಯ, ಅಸಮಾನತೆ, ಕೋಮುವಾದ, ಸಾಮರಸ್ಯ, ಸಾಮಾನ್ಯ ಕುಟುಂಬದ ಕನಸುಗಳು ಮತ್ತು ಭಾವನಾತ್ಮಕ ಸಂಗತಿಗಳು ಕಥಾ ಹಂದರವಾಗಿವೆ. ಚಿತ್ರದ ಬಹುತೇಕ ಭಾಗವನ್ನು ರಾಯಚೂರು ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದು, ಜಿಲ್ಲೆಯ ಕಲಾವಿದರು, ತಂತ್ರಜ್ಞರು ಮತ್ತು ಹೊಸ ಪ್ರತಿಭೆಗಳು ಪಾತ್ರವಹಿಸಿದ್ದು ಅಪರೂಪದ ವಿಷಯ ಎಂದು ಮ್ಯಾಗಳಮನಿ ಹೇಳಿದರು.

“ಕನ್ನಡ ಚಲನಚಿತ್ರ ರಂಗದಲ್ಲಿ ಇಂತಹ ವಿಷಯಾಧಾರಿತ ಚಲನ ಚಿತ್ರಗಳು ಅಪರೂಪ. ನಮ್ಮ ನೆಲದ ಕಥೆ ಹೇಳುವ ಈ ಸಿನಿಮಾವನ್ನು ಜುಲೈ 4ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲೆ ಹಾಗೂ ರಾಜ್ಯದ ಜನರು, ಸಿನಿ ಪ್ರಿಯರು ಕುಟುಂಬದೊಂದಿಗೆ ಚಿತ್ರಮಂದಿರಗಳಿಗೆ ತೆರಳಿ ಚಲನ ಚಿತ್ರ ವೀಕ್ಷಿಸಿ, ಯುವ ಪ್ರತಿಭೆಗೆ ಬೆಂಬಲ ನೀಡಿ ಸಿನೆಮಾವನ್ನು ಗೆಲ್ಲಿಸಬೇಕೆಂದು” ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ಯುವ ಸಾಹಿತಿ ಈರಣ್ಣ ಬೆಂಗಾಲಿ, ಹೋರಾಟಗಾರ ಪ್ರವೀಣ್ ಕುಮಾರ್, ದೀಪಕ್ ಭಂಡಾರಿ, ಬಾಬಾ ಖಾನ್,‌ ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow