ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 14ಕ್ಕೆ ಶಾಸಕರ ಮನೆಯ ಮುಂದೆ ತಮಟೆ ಚಳುವಳಿ ಹಾಗೂ ಡಿಸೆಂಬರ್ 16ಕ್ಕೆವಿಧಾನ ಸೌಧಕ್ಕೆ ಮುತ್ತಿಗೆ|| ಸಿ. ದಾನಪ್ಪ ಸ್ಪಷ್ಟನೆ.

ಮಸ್ಕಿ : ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಪೂರ್ವಭಾವಿ ಸಭೆ ನಡೆಯಿತು.

Nov 30, -0001 - 00:00
 0  12
ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 14ಕ್ಕೆ ಶಾಸಕರ ಮನೆಯ ಮುಂದೆ ತಮಟೆ ಚಳುವಳಿ ಹಾಗೂ ಡಿಸೆಂಬರ್ 16ಕ್ಕೆವಿಧಾನ ಸೌಧಕ್ಕೆ ಮುತ್ತಿಗೆ|| ಸಿ. ದಾನಪ್ಪ ಸ್ಪಷ್ಟನೆ.
ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 14ಕ್ಕೆ ಶಾಸಕರ ಮನೆಯ ಮುಂದೆ ತಮಟೆ ಚಳುವಳಿ
ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 14ಕ್ಕೆ ಶಾಸಕರ ಮನೆಯ ಮುಂದೆ ತಮಟೆ ಚಳುವಳಿ ಹಾಗೂ ಡಿಸೆಂಬರ್ 16ಕ್ಕೆವಿಧಾನ ಸೌಧಕ್ಕೆ ಮುತ್ತಿಗೆ|| ಸಿ. ದಾನಪ್ಪ ಸ್ಪಷ್ಟನೆ.

ಈ ಸಭೆಯಲ್ಲಿ ದಲಿತ ಸಮುದಾಯದ ಹಿರಿಯ ಹೋರಾಟದ ಒಡನಾಡಿಗಳು,ಯುವ ಮುಖಂಡರು,ಬುದ್ದಿ ಜೀವಿಗಳು ಭಾಗವಹಿಸಿ ಇದೆ ಡಿಸೆಂಬರ್ 14 2024 ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಲು ಸ್ಥಳೀಯ ಶಾಸಕ ಆರ್ ಬಸನಗೌಡ ತುರ್ವಿಹಾಳ್ ಅವರ ಮನೆಯ ಮುಂದೆ ತಮಟೆ ಚಳುವಳಿಯನ್ನು ಮಾಡುವುದರ ಮೂಲಕ ಮನವಿ ಪತ್ರ ಸಲ್ಲಿಸಲು ಹಾಗೂ ಒಳಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸದನದಲ್ಲಿ ತಾವುಗಳು ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ತಿಳಿಸಲು ಹಾಗೂ ಡಿಸೆಂಬರ್ 16 2024 ರಂದು ಒಳಮೀಸಲಾತಿಯನ್ನ ಜಾರಿ ಗೊಳಿಸಲು ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಬೆಳಗಾವಿಗೆ ತೇರಳಬೇಕೆಂದು ಪೂರ್ವಭಾವಿ ಸಭೆಯಲ್ಲಿ ನಿರ್ಧಾರಿಸಲಾಯಿತು.

ನಂತರ ಪತ್ರಿಕಾ ಭವನದಲ್ಲಿ ಗೋಷ್ಠಿ ನಡೆಸಿ 

ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ದಿನಾಂಕ, 14 12 2024 ರಂದು ಸ್ಥಳೀಯ ಶಾಸಕರಾದ ಆರ್ ಬಸನಗೌಡ ತುರ್ವಿಹಾಳ್ ರವರಿಗೆ ಒಳಮೀಸಲಾತಿಯನ್ನು ಎಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಎಂದು ಮನವಿ ಪತ್ರ ವನ್ನು ಸಲ್ಲಿಸಿ ಸದನದಲ್ಲಿ ಒಳಮೀಸಲಾತಿ ಯ ಬಗ್ಗೆ ಧ್ವನಿ ಎತ್ತಲು ಒತ್ತಾಯಿಸುವುದಾಗಿ ಹೇಳಿದರು ದಿ . 16/ 12/ 2024 ರಂದು ಒಳಮೀಸಲಾತಿ ಯನ್ನ ಜಾರಿ ಗೊಳಿಸಲು ಬೆಳಗಾವಿ ಸುವರ್ಣ ವಿಧಾನ ಸೌಧ ಕ್ಕೆ ಮುತ್ತಿಗೆ ಹಾಕಲು ಬೆಳಗಾವಿ ಗೆ ತೇರಳಬೇಕೆಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಪ್ಪ ಮುರಾರಿ , ದಾನಪ್ಪ ನೀಲೋಗಲ್ , ದೊಡ್ಡ ರಿಯಪ್ಪ, ಮೌನೇಶ ಮುರಾರಿ , ದುರ್ಗ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

.

What's Your Reaction?

like

dislike

love

funny

angry

sad

wow