ಶೈಕ್ಷಣಿಕ ಮೌಲ್ಯಗಳೆ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕ : ರವಿ.ಬಿಕೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರ ಸಹಯೋಗದೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವಿಚಾರ ವೇದಿಕೆ
ಭಾಗ್ಯನಗರ : ಕನ್ನಡ ಸಾಹಿತ್ಯದಲ್ಲಿ ಪಂಪ ರನ್ನರಿಂದ ಹಿಡಿದು ನಾವು ಕಲಿಯಬೇಕಾದ ಅನೇಕ ಮೌಲ್ಯಗಳನ್ನು ಪ್ರಸ್ತುತಪಡಿಸಲಾಗಿದೆ. ಪಂಪನ 'ಮಾನವ ಜಾತಿ ತಾನೊಂದೇ ವಲಂ'ಎಂಬ ವಾಕ್ಯದಿಂದ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳುವಂತಹ ಉದಾತ್ತ ಚಿಂತನೆಯನ್ನು ಸಾವಿರ ವರ್ಷಗಳಿಂದೆ ತಿಳಿಸಲಾಗಿದೆ. ಪಂಪನ ಆದಿಪುರಾಣದ ಭರತ-ಬಾಹುಬಲಿಯರ ಕಾಳಗದ ವಿಚಾರದಲ್ಲಿ ಬಾಹುಬಲಿಯು ತನ್ನ ಅಹಂಕೃತಿಗೆ ಮನ್ನಣೆಯನ್ನು ನೀಡಿ ಸಹೋದರತೆಯ ಭಾವನೆ ಮರತೆನೆಂದು ವಿರಕ್ತನಾಗುವ ಗುಣ ಅತ್ಯಂತ ಮೌಲ್ಯಯುತವಾಗಿದೆ ಎಂದು ಉಪನ್ಯಾದಲ್ಲಿ ಬಿ.ಕೆ ರವಿ ಮಾತನಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರ ಸಹಯೋಗದೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಹಂಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಶೈಕ್ಷಣಿಕ ಮೌಲ್ಯಗಳು ಕುರಿತು' ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಸಿಸುವ ಉಧ್ಘಾಟಿಸಿದರು.
ಕನ್ನಡ ಸಾಹಿತ್ಯದಲ್ಲಿ ಶೈಕ್ಷಣಿಕ ಮೌಲ್ಯಗಳು ಕುರಿತು' ಉಪನ್ಯಾಸದಲ್ಲಿ ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಾಗೃತಿ ಸಮಿತಿ ಸದಸ್ಯ ರವಿ. ಬಿ.ಕೆ ಮಾತನಾಡಿ ವಚನ ಪರಂಪರೆಯಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಇತ್ಯಾದಿ ವಚನಕಾರರು ಸಮಾಜದಲ್ಲಿದ್ದ ಮೂಢನಂಬಿಕೆ,ಜಾತಿ ತಾರತಮ್ಯ ಸಾಮಾಜಿಕ-ಶೈಕ್ಷಣಿಕ ವಿಚಾರಗಳ ಬಗ್ಗೆ ದನಿಯೆತ್ತಿರುವುದು ವಿಶೇಷವಾಗಿದೆ. ದಾಸ ಸಾಹಿತ್ಯದಲ್ಲಿ ಸಮಾಜದಲ್ಲಿದ್ದ ತಾರತಮ್ಯದ ಮನೋಭಾವ ದೋಷಗಳನ್ನು ತಿದ್ದಿ ಸಮಾಜಕ್ಕೆ ಮಾರ್ಗದರ್ಶಕವಾಗಿದೆ. ಅಷ್ಟೇ ಇಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ, ದಲಿತ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣವಾದಂತಹ ಅನೇಕ ಮೌಲ್ಯಗಳನ್ನು ಪ್ರಚುರಪಡಿಸಿದ್ದಾರೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಚಲಪತಿಗೌಡ ಮಾತನಾಡಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳೆದು ಒಂದು ರೀತಿ ಅದರ ಹಿನ್ನಲೆ ಮತ್ತು ತಾಳೆ ಗರಿಗಳಲ್ಲಿದ್ದಂತಹ ಸಾಹಿತ್ಯ ಶಿಲಾ ಶಾಸನಗಳ, ತಾಮ್ರ ಶಾಸನಗಳಲ್ಲಿ ಇದ್ದಂತಹ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಕನ್ನಡ ನಾಡಿಗೆ ನೀಡಿದಂಥಹ ಕೊಡುಗೆ ಪ್ರಶಂಸನೀಯ ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೌಲ್ಯಯುತ ವಿಚಾರಗಳನ್ನು ಕೊಂಡೊಯ್ಯುವಂತಹ ಕಾರ್ಯಕ್ರಮವಾಗಿದೆ ಎಂದರು.
ಅಧ್ಯಕ್ಷತೆ ಭಾಷಣದಲ್ಲಿ ಗಡಿನಾಡಿನ ವಿದ್ಯಾರ್ಥಿಗಳು ಅನ್ಯ ಭಾಷೆಗಳಿಗೆ ಮೊರೆ ಹೋಗದೆ ನಾಡಿನ ಕನ್ನಡ ಭಾಷೆಯನ್ನು ಉಳಿಸಲು ಕಂಕಣಬದ್ದರಾಗಬೇಕು. ಕನ್ನಡ ಭಾಷೆ ಪ್ರತಿಯೊಬ್ಬರನ್ನು ಗೌರವಿಸುವಂತೆ ಮಾಡುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪ್ರಾಂಶುಪಾಲ ನಾರಾಯಣ್. ವೈ ಮಾತನಾಡಿದರು. ಈ ವೇಳೆ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಈ ಧರೆ ಪ್ರಕಾಶ್ ಕನ್ನಡ ಸಾಹಿತ್ಯ ಸೊಗಡಿನ ಜನಪದ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ತಾಜ್ ಉನ್ನೀಸ, ಸಹಾಯಕ ಪ್ರಾಧ್ಯಾಪಕರಾದ ಶೃತಿ.ಸಿ, ಡಾ. ನಾಗರಾಜ್, ಶೇಖರ್, ಹರಿಕುಮಾರ್, ಪೂರ್ಣಂ ಕುವರ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
What's Your Reaction?



